ತೀವ್ರ ಮಣಿಕಟ್ಟಿನ ನೋವಿನಿಂದ ಬಳಲುತ್ತಿದ್ದ 34 ವರ್ಷ ವಯಸ್ಸಿನ 27 ವಾರದ ಗರ್ಭಿಣಿಯೊಬ್ಬಳು ವೈದ್ಯರ ಬಳಿ ಚಿಕಿತ್ಸೆಗೆ ಬಂದಿದ್ದಳು. ಈ ಹಿಂದೆ ಆಕೆಗೆ ಕೈಗಳಿಗೆ ಯಾವುದೇ ಹೊಡೆತ ಬಿದ್ದಿರಲಿಲ್ಲ ಅಥವಾ ಯಾವುದೇ ಕಠಿಣ ವ್ಯಾಯಾಮ ಮಾಡಿರಲಿಲ್ಲ.

ವಾಟ್ಸಪ್ ಆಧುನಿಕ ತಂತ್ರಜ್ಞಾನ ಕ್ರಾಂತಿಗಳಲ್ಲಿ ಬಹುದೊಡ್ಡ ಹೆಸರು. ಇತ್ತೀಚಿನ ದಿನಗಳಲ್ಲಿ ಸಂದೇಶ ರವಾನೆಗೆ ಬಳಸಲಾಗುತ್ತಿರುವ ಜನಪ್ರಿಯ ಮಾಧ್ಯಮ ವಾಟ್ಸಪ್. ಆದರೆ, ಈ ವಾಟ್ಸಪ್ ಬಳಕೆ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಜೋಕೆ.. !

ಹೌದು, ಈ ಮಾತನ್ನ ಹೇಳ್ತಿರೋದು ಸ್ಪಾನಿಷ್ ವೈದ್ಯರು. ವಾಟ್ಸಪ್`ನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ `ವಾಟ್ಸಾಪ್ಪಿಟೀಸ್' ಎಂಬ ಹೊಸ ಸಮಸ್ಯೆ ದೇಹವನ್ನ ಕಾಡುತ್ತಂತೆ.

`ವಾಟ್ಸಾಪ್ಪಿಟೀಸ್' ಸಮಸ್ಯೆಯಿಂದ ಬಳಲುತ್ತಿರುವ ಮೊದಲ ಕೇಸ್ ಸ್ಪೇನ್`ನಲ್ಲಿ ಪತ್ತೆಯಾಗಿದೆಯಂತೆ. ಸಹಿಸಲಾರದಂತಹ ಮಣಿಕಟ್ಟಿನ ನೋವಿನಿಂದ ಬಳಲುತ್ತಿದ್ದ ರೋಗಿಯೊಬ್ಬಳನ್ನ ಪರೀಕ್ಷಿಸಿದ ವೈದ್ಯರು ಆಕೆ ವಾಟ್ಸಾಪ್ಪಿಟೀಸ್ ಸಮಸ್ಯೆಯಿಂದ ಬಳಲುತ್ತಿರುವುದನ್ನ ಖಚಿತಪಡಿಸಿದ್ದಾರೆ.

 ಸುಮಾರು 6 ಗಂಟೆಗಳ ಕಾಲ ವಾಟ್ಸಪ್`ನಲ್ಲಿ ಮೆಸೇಜ್ ಕಳುಹಿಸಿದ್ದ ಮಹಿಳೆಗೆ ಈ ಸಮಸ್ಯೆ ಕಾಡಲಾರಂಭಿಸಿದೆಯಂತೆ.

ಏನಿದು ಪ್ರಕರಣ..?:ತೀವ್ರ ಮಣಿಕಟ್ಟಿನ ನೋವಿನಿಂದ ಬಳಲುತ್ತಿದ್ದ 34 ವರ್ಷ ವಯಸ್ಸಿನ 27 ವಾರದ ಗರ್ಭಿಣಿಯೊಬ್ಬಳು ವೈದ್ಯರ ಬಳಿ ಚಿಕಿತ್ಸೆಗೆ ಬಂದಿದ್ದಳು. ಈ ಹಿಂದೆ ಆಕೆಗೆ ಕೈಗಳಿಗೆ ಯಾವುದೇ ಹೊಡೆತ ಬಿದ್ದಿರಲಿಲ್ಲ ಅಥವಾ ಯಾವುದೇ ಕಠಿಣ ವ್ಯಾಯಾಮ ಮಾಡಿರಲಿಲ್ಲ.

ಆದರೂ ಆಕೆಯ ಕೈಗಳ ಮಣಿಕಟ್ಟಿನಲ್ಲಿ ಭಯಾನಕ ನೋವು ಕಾಡುತ್ತಿತ್ತು. ರೋಗಿಯನ್ನ ಕೂಲಂಕುಶವಾಗಿ ಪರೀಕ್ಷಿಸಿ, ವಿಚಾರಿಸಿದಾಗ ತಿಳಿದುಬಂದ ವಿಷಯವೇನೆಂದರೆ. ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಸತತ 6 ಗಂಟೆಗಳ ಕಾಲ ಆಕೆ ಮೊಬೈಲ್`ನಲ್ಲಿ ವಾಟ್ಸಪ್ ಸಂದೇಶ ಕಳುಹಿಸಿದ್ದಳು.

ಈ ಸಂದರ್ಭ ಪರೀಕ್ಷಿಸಿದಾಗ ಆಕೆಯ ಮಣಿಕಟ್ಟಿನಲ್ಲಿ ಇಂಜುರಿ ಕಂಡುಬಂದಿದ್ದು, ಆಕೆ ವಾಟ್ಸಾಪ್ಪಿಟೀಸ್ ಸಮಸ್ಯೆಗೆ ತುತ್ತಾಗಿರುವುದು ಗೊತ್ತಾಗಿದೆ. 6 ಗಂಟೆಗಳ ಕಾಲ ಮೊಬೈಲ್ ಹಿಡಿದು ಮೆಸೇಜ್ ಕಳುಹಿಸಲು ನಡೆಸಿದ ಚಲನೆಯಿಂದಾಗಿ ಈ ಸಮಸ್ಯೆ ಉಂಟಾಗಿದೆ. ಬಳಿಕ ಆಕೆಗೆ ಪೇನ್ ಕಿಲ್ಲರ್ ಔಷಧಿ ನೀಡಿರುವ ವೈದ್ಯರು, ಮೊಬೈಲ್ ಬಳಸದಂತೆ ಸೂಚನೆ ನೀಡಿದ್ದಾರೆ.