ಇನ್ನುಮುಂದೇ ವಾಟ್ಸಾಪ್ ಮೆಸೇಜ್ ಗಳಿಗೆ ಲಿಮಿಟ್

First Published 20, Jul 2018, 12:11 PM IST
WhatsApp will limit message sending for Indians
Highlights

ಭಾರತೀಯರೇ ನೀವಿನ್ನು ಕುಳಿತುಕೊಂಡು ಒಂದೇ ಬಾರಿ ಅತ್ಯಧಿಕ ಸಂಖ್ಯೆಯಲ್ಲಿ ಸಂದೇಶಗಳನ್ನು ಕಳಿಸುವುದು ಸಾಧ್ಯವಿಲ್ಲ. ಭಾರತದಲ್ಲಿ ಸುಳ್ಳು ಸುದ್ದಿಗಳು ಹರಡುವಿಕೆಯನ್ನು ತಡೆಯುವ ಸಲುವಾಗಿ ವಾಟ್ಸಾಪ್ ಸಂದೇಶಗಳಿಗೆ ಲಿಮಿಟ್ ಹೇರಲು ನಿರ್ಧರಿಸಿದೆ. 

ಬೆಂಗಳೂರು : ವಾಟ್ಸಾಪ್ ಎನ್ನುವ ಸಾಮಾಜಿಕ ಜಾಲತಾಣವು ವಿಶ್ವದಾದ್ಯಂತ ಕೊಟ್ಯಂತರ ಸಂಖ್ಯೆಯಲ್ಲಿ ಬಳಕೆದಾರರನ್ನು  ಹೊಂದಿದೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ನಕಲಿ ಸುದ್ದಿಗಳು ಹರಿದಾಡುತ್ತಿವೆ. 

ಇದರಿಂದ ಅತ್ಯಧಿಕ ಪ್ರಮಾಣದಲ್ಲಿ ಹಿಂಸಾ ಕೃತ್ಯಗಳೂ ಕೂಡ ಸಂಭವಿಸುತ್ತಿವೆ. ಇದಕ್ಕೆಲ್ಲಾ ಫುಲ್ ಸ್ಟಾಪ್ ಇಡುವ ದೃಷ್ಟಿಯಿಂದ ಸುಳ್ಳು ಸುದ್ದಿಗಳು ಹರಿದಾಡುವುದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.  ಒಂದು ಬಾರಿಗೆ ಕಳಿಸಲಾಗುವ ಸಂದೇಶಗಳಇಗೆ ಲಿಮಿಟ್ ಹೇರಲು ವಾಟ್ಸಾಪ್ ನಿರ್ಧರಿಸಿದೆ. ಜುಲೈ 19ರಂದು ಈ ಬಗ್ಗೆ  ಘೋಷಿಸಲಾಗಿದೆ. 

ಭಾರತೀಯರು ಹೆಚ್ಚಿನ ಪ್ರಮಾಣದಲ್ಲಿ ಸಂದೇಶಗಳನ್ನು ಫಾರ್ವರ್ಡ್ ಮಾಡುತ್ತಾರೆ.  ಒಂದು ಬಾರಿ  5ಕ್ಕಿಂತ ಹೆಚ್ಚು ಸಂದೇಶಗಳನ್ನು ಕಳಿಸಲು ಆಗದಂತೆ ಲಿಮಿಟ್ ವಿಧಿಸಲು ನಿರ್ಧರಿಸಲಾಗಿದೆ. 

ಇದರಿಂದ ಅತ್ಯಧಿಕ ಸಂಖ್ಯೆಯಲ್ಲಿ ಫಾರ್ವರ್ಡ್ ಆಗುವ ಸುಳ್ಳು ಸಂದೇಶಗಳಲ್ಲಿ ಅಲ್ಪ ಮಟ್ಟಿಗೆ ತಡೆಯಲು ಸಾಧ್ಯವಾಗುತ್ತದೆ  ಎಂದು ಹೇಳಲಾಗಿದೆ. 

loader