ನವ​ದೆ​ಹ​ಲಿ (ಮಾ.05): ಇನ್ಮುಂದೆ ವಾಟ್ಸಾಪ್‌ ವೆಬ್‌ನಲ್ಲಿ​ದ್ದಾ​ಗಲೂ ನಿಮ್ಮ ಆತ್ಮೀ​ಯ​ರಿಗೆ ವಾಟ್ಸಾಪ್‌ ಕರೆ ಅಥವಾ ವಿಡಿಯೋ ಕಾಲಿಂಗ್‌ ಮಾಡಬಹು​ದಾ​ಗಿದೆ. 

ಹೌದು, ಮೊಬೈಲ್‌ ಆಧಾ​ರಿತ ವಾಟ್ಸಾಪ್‌ ಅಪ್ಲಿ​ಕೇ​ಷ​ನ್‌​ನಲ್ಲಿ ಈ ಸೌಲಭ್ಯ ಇತ್ತಾ​ದರೂ, ಲ್ಯಾಪ್‌​ಟಾಪ್‌ ಮತ್ತು ಡೆಸ್ಕ್‌​ಟಾ​ಪ್‌​ನಲ್ಲಿ ವಾಟ್ಸಾಪ್‌ ವೆಬ್‌​ನ​ಲ್ಲಿ​ದ್ದಾಗ ವಾಟ್ಸಾಪ್‌ ಕರೆ ಅಥವಾ ವಿಡಿಯೋ ಕಾಲಿಂಗ್‌ಗೆ ಅವ​ಕಾ​ಶ​ವಿ​ರ​ಲಿಲ್ಲ. ಇದೀಗ ಆ ಸೇವೆಗೆ ವಾಟ್ಸಾಪ್‌ ಚಾಲನೆ ನೀಡಿದೆ.

 ವಾಟ್ಸಾ​ಪ್‌​ನಲ್ಲಿ ಹಂಚಿ​ಕೊ​ಳ್ಳ​ಲಾದ ಅಂಶ​ಗಳು ಸೋರಿ​ಕೆ​ಯಾ​ಗು​ತ್ತಿವೆ ಎಂಬ ಆರೋಪಗಳ ಬೆನ್ನಲ್ಲೇ, ಈ ಹೊಸ ಸೇವೆಗೆ ಚಾಲನೆ ಸಿಕ್ಕಿದೆ. ಆದರೆ ಈ ಸೇವೆ​ಗಾಗಿ ನಿಮ್ಮ ಕಂಪ್ಯೂ​ಟರ್‌ ಅಥವಾ ಲ್ಯಾಪ್‌​ಟಾ​ಪ್‌​ನಲ್ಲಿ ವೆಬ್‌ ಕ್ಯಾಮೆರಾ ಮತ್ತು ಸಂವ​ಹ​ನ​ಕ್ಕಾಗಿ ಮೈಕ್ರೋ​ಫೋ​ನ್‌​ಗ​ಳಿ​ರ​ಲೇ​ಬೇಕು.

ವಾಟ್ಸಾಪ್‌ಗೆ 12 ಹರೆಯ, ನಿತ್ಯ ನೂರು ಕೋಟಿ ಕರೆಗಳ ನಿರ್ವಹಣೆ! .

ಈ ಸಂಬಂಧ ಗುರು​ವಾರ ಟ್ವೀಟರ್‌ ಮೂಲಕ ಈ ಬಗ್ಗೆ ಹರ್ಷ ಹಂಚಿ​ಕೊಂಡಿ​ರುವ ವಾಟ್ಸಾಪ್‌, ‘ವಾಟ್ಸಾಪ್‌ ವೆಬ್‌ನಲ್ಲೂ ಸುರ​ಕ್ಷಿತ ಮತ್ತು ಸೋರಿ​ಕೆ​ಯಾ​ಗದ ವಾಟ್ಸಾಪ್‌ ಕರೆ​ಗ​ಳು ಮತ್ತು ವಿಡಿಯೋ ಕರೆ​ಗಳನ್ನು ಮಾಡ​ಬ​ಹು​ದಾ​ಗಿದೆ. ಕಳೆದ ವರ್ಷ 140 ಕೋಟಿ ವಾಟ್ಸಾಪ್‌ ವಿಡಿಯೋ ಮತ್ತು ಸಾಮಾನ್ಯ ಕರೆ​ಗಳು ದಾಖ​ಲಾ​ಗಿ​ವೆ’ ಎಂದು ಹೇಳಿದೆ.