ಸದ್ಯದಲ್ಲೇ ವಾಟ್ಸ್‌ಆ್ಯಪ್ ಮತ್ತೊಂದು ಹೊಸ ಫೀಚರ್ ಪರಿಚಯ..!
ಇಷ್ಟು ದಿನ ವಾಟ್ಸ್‌ಆ್ಯಪ್ ವೆಬ್ ಮೂಲಕ ನಾವು ಕಂಪ್ಯೂಟರ್‌ನಲ್ಲಿ ವಾಟ್ಸ್‌ಆ್ಯಪ್ ಅನ್ನು ಬಳಕೆ ಮಾಡಬಹುದಾಗಿತ್ತು. ಆದರೆ, ಅದಕ್ಕೆ ಸ್ಮಾರ್ಟ್‌ಫೋನ್ ಅಗತ್ಯವಿತ್ತು. ಇದೀಗ ಹೊಸ ಫೀಚರ್ ಪರಿಚಯಿಸಲು ಮುಂದಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಆ.14): ಫೇಸ್‌ಬುಕ್ ಒಡೆತನದ ವಾಟ್ಸ್‌ಆ್ಯಪ್ ಹೊಸ ಫೀಚರ್‌ವೊಂದನ್ನು ಪರಿಚಯಿಸಲು ಮುಂದಾಗಿದೆ. ಆ ಪ್ರಕಾರ, ಇನ್ನು ಮುಂದೆ ಒಂದಕ್ಕಿಂತ ಹೆಚ್ಚು ಹಾಗೂ ಗರಿಷ್ಠ 4 ಸಾಧನಗಳಲ್ಲಿ ವಾಟ್ಸ್‌ಆ್ಯಪ್ ಅನ್ನು ಉಪಯೋಗಿಸಬಹುದಾಗಿದೆ.
ಸ್ಮಾರ್ಟ್‌ಫೋನ್ ಅಷ್ಟೇ ಅಲ್ಲ ಕಂಪ್ಯೂಟರ್ ಹಾಗೂ ಟ್ಯಾಬ್ಲೆಟ್‌ನಲ್ಲಿಯೂ ಸಂದೇಶ ಹಾಗೂ ವಿಡಿಯೋವನ್ನು ರವಾನಿಸುವ ಆಯ್ಕೆಯನ್ನು ನೀಡಲಾಗುತ್ತದೆ. ಇಷ್ಟು ದಿನ ವಾಟ್ಸ್‌ಆ್ಯಪ್ ವೆಬ್ ಮೂಲಕ ನಾವು ಕಂಪ್ಯೂಟರ್‌ನಲ್ಲಿ ವಾಟ್ಸ್‌ಆ್ಯಪ್ ಅನ್ನು ಬಳಕೆ ಮಾಡಬಹುದಾಗಿತ್ತು. ಆದರೆ, ಅದಕ್ಕೆ ಸ್ಮಾರ್ಟ್‌ಫೋನ್ ಅಗತ್ಯವಿತ್ತು. ಫೋನ್‌ನಲ್ಲಿ ಬಂದ ಸಂದೇಶ ವೆಬ್ ಮೂಲಕ ಕಂಪ್ಯೂಟರ್‌ನಲ್ಲಿ ದಾಖಲಾಗುತ್ತಿತ್ತು.
ವಾಟ್ಸಪ್‌ನಲ್ಲಿ ಶೀಘ್ರ ಬರುತ್ತೆ ಇನ್ನೂ 138 ಹೊಸ ಇಮೋಜಿಗಳು..!
ಇದೀಗ ಗರಿಷ್ಠ ನಾಲ್ಕು ಯಂತ್ರದಲ್ಲಿ ವಾಟ್ಸ್‌ಆ್ಯಪ್ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಫೀಚರ್ ಅನ್ನು ಪರಿಚಯಿಸಲು ಉದ್ದೇಶಿಸಿದ್ದು, ಅದರ ಪರೀಕ್ಷೆ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ. ಇತ್ತೀಚೆಗೆ ಏಕಕಾಲಕ್ಕೆ 8 ಜನರು ವಿಡಿಯೋ ಕಾಲ್ ಮಾಡುವ, ಫಾರ್ವರ್ಡ್ ಸುದ್ದಿಗಳಿಗೆ ಲೇಬಲ್ ನೀಡುವ ಫೀಚರ್ ಅನ್ನು ವಾಟ್ಸ್ ಆ್ಯಪ್ ಪರಿಚಯಿಸಿತ್ತು.