Asianet Suvarna News Asianet Suvarna News

WhatsApp Latest Feature: ಲಾಸ್ಟ್‌ ಸೀನ್‌, ಪ್ರೊಫೈಲ್‌ ಫೋಟೋ ಹೈಡ್‌ ಮಾಡಲು ಬರ್ತಿದೆ ಜಬರದಸ್ತ್‌ ಫೀಚರ್‌

ಈ ವೈಶಿಷ್ಟ್ಯವು ಪ್ರಸ್ತುತ iOS 22.9.0.70 ಗಾಗಿ WhatsApp ಬೀಟಾವನ್ನು ಬಳಸುವವರಿಗೆ ಲಭ್ಯವಿದೆ

WhatsApp Last Seen profile photo about my contacts except feature iOS report mnj
Author
Bengaluru, First Published Apr 18, 2022, 8:51 AM IST

WhatsApp Last Seen Hide: ಮೆಟಾ ಒಡೆತನದ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್ ಹೊಸ ವೈಶಿಷ್ಟ್ಯವೊಂದನ್ನು ಬಿಡುಗಡೆ ಮಾಡುತ್ತಿದ್ದು ಅಪ್ಲಿಕೇಶನ್‌ನಲ್ಲಿ ನಿಮ್ಮ ಲಾಸ್ಟ್‌ ಸೀನ್‌, ಅಬೌಟ್‌ ಹಾಗೂ ಪ್ರೊಫೈಲ್‌ ಫೋಟೋ ನಿರ್ವಹಣೆ ಈಗ ಇನ್ನೂ ಸುಲಭವಾಗಲಿದೆ. ಈವರೆಗೆ ಕೇವಲ Nobody, Everyone, My Contactsಗೆ ಸೀಮಿತವಾಗಿದ್ದ ವೈಶಿಷ್ಟ್ಯ ಈಗ ಹೊಸ ಅಪ್ಡೇಟ್‌ನೊಂದಿಗೆ ಬಿಡುಗಡೆಯಾಗಲಿದೆ ಎಂದು ವರದಿಗಳು ಸೂಚಿಸಿವೆ.  

ವಾಟ್ಸಾಪ್ ಬೀಟಾ ವೈಶಿಷ್ಟ್ಯವೊಂದನ್ನು ಹೊರತರುತ್ತಿದ್ದು, ಬಳಕೆದಾರರು ತಮ್ಮ ಲಾಸ್ಟ್‌ ಸೀನ್ ಸ್ಥಿತಿ (Last Seen), ಪ್ರೊಫೈಲ್ ಫೋಟೋ ಮತ್ತು ಅಬೌಟ್‌ (About) ಮಾಹಿತಿಯನ್ನು ನಿರ್ದಿಷ್ಟ ಕಾಂಟ್ಯಾಕ್ಟ್ಸ್‌ಗಳಿಂದ ಮರೆಮಾಡಲು ಸಾಧ್ಯವಾಗಲಿದೆ. ಅಂದರೆ ನೀವು ಮರೆಮಾಡಿದ ಕಾಂಟ್ಯಾಕ್ಟಸ್‌ ನಿಮ್ಮ ಲಾಸ್ಟ್‌ ಸೀನ, ಪ್ರೊಫೈಲ್ ಫೋಟೋ ಮತ್ತು ಅಬೌಟ್‌ ನೋಡಲು ಸಾಧ್ಯವಾಗುವುದಿಲ್ಲ, ಆದರೆ ಇತರರು  ಅವುಗಳನ್ನು ನೋಡಬಹುದು. 

ಇದನ್ನೂ ಓದಿ: WhatsApp Communities ಎಂದರೇನು?: ಹೇಗೆ ಕೆಲಸ ಮಾಡುತ್ತೆ ಈ ಹೊಸ ಫೀಚರ್?

Wabetainfo ಪ್ರಕಾರ, ಪ್ರಸ್ತುತ iOS 22.9.0.70 ವಾಟ್ಸಾಪ್ ಬೀಟಾವನ್ನು ಬಳಸುವವರಿಗೆ ಈ ವೈಶಿಷ್ಟ್ಯ ಲಭ್ಯವಿದೆ. ಈ ವೈಶಿಷ್ಟ್ಯವನ್ನು ಏಪ್ರಿಲ್ 16 ರಂದು ಬೀಟಾ ಪರೀಕ್ಷಕರಿಗೆ ಬಿಡುಗಡೆ ಮಾಡಲಾಗಿದ್ದು  Wabetainfo ವರದಿ ಪ್ರಕಾರ, ಇದನ್ನು ಶೀಘ್ರದಲ್ಲೇ ಆಂಡ್ರಾಯ್ಡ್‌ ಸೇರಿದಂತೆ ಹೆಚ್ಚಿನ ಸಾಧನಗಳಿಗೆ ಬಿಡುಗಡೆಯಾಗಬಹುದು.

ಬಳಸುವುದು ಹೇಗೆ?: ವಾಟ್ಸಾಪ್ ಮಾಹಿತಿ ಪೋರ್ಟಲ್‌ನಿಂದ ಪಡೆದ ಸ್ಕ್ರೀನ್‌ಶಾಟ್‌ಗಳ ಪ್ರಕಾರ, ಹೊಸ ಬೀಟಾ ಅಪ್‌ಡೇಟ್ ಹೊಂದಿರುವ ಬಳಕೆದಾರರು ಸೆಟ್ಟಿಂಗ್‌ಗಳು > ಖಾತೆ > ಗೌಪ್ಯತೆಗೆ‌ (Settings > Account > Privacy) ಹೋಗುವ ಮೂಲಕ ಈ ವೈಶಿಷ್ಟ್ಯವನ್ನು ಬಳಸಬಹುದಾಗಿದೆ. ಗೌಪ್ಯತೆ ವಿಭಾಗದ ಅಡಿಯಲ್ಲಿ, ಈ ಹೊಸ ವೈಶಿಷ್ಟ್ಯವು ಬಳಕೆದಾರರ ಲಾಸ್ಟ್‌ ಸೀನ್, ಪ್ರೊಫೈಲ್ ಫೋಟೋ ಮತ್ತು ಅಬೌಟ್ ಲಭ್ಯವಿದೆ.

ಈ ಮೊದಲು ಬಳಕೆದಾರರಿಗೆ ಕೇವಲ ಮೂರು ಆಯ್ಕೆಗಳನ್ನು ಮಾತ್ರ ನೀಡಲಾಗಿತ್ತು: Everyone, My contact ಮತ್ತು Nobody. ಅದರೆ ಹೊಸ ನವೀಕರಣವು "ನMy Contacts except" ಹೊಸ ಆಯ್ಕೆಯನ್ನು ನೀಡುತ್ತದೆ.  ಇದು ಬಳಕೆದಾರರಿಗೆ ಕಾಂಟ್ಯಾಕ್ಟ್ ಪಟ್ಟಿಗೆ ಸೇರಿಸಲು ಅನುಮತಿಸುತ್ತದೆ. ಈ ಪಟ್ಟಿಗೆ ಸೇರಿಸಲಾದ ಸಂಪರ್ಕಗಳಿಗೆ ಬಳಕೆದಾರರ ಲಾಸ್ಟ್‌ ಸೀನ್ ವೀಕ್ಷಿಸಲು ಸಾಧ್ಯವಾಗುವುದಿಲ್ಲ.‌

WhatsApp Last Seen profile photo about my contacts except feature iOS report mnj

ವಾಟ್ಸಾಪ್‌ ಕಮ್ಯೂನಿಟಿಸ್: ಏಪ್ರಿಲ್ 15 ರಂದು, ವಾಟ್ಸಾಪ್ ಜಾಗತಿಕವಾಗಿ ಸಾಧನಗಳಿಗೆ ಗುಂಪು ಸಂಭಾಷಣೆಗಳನ್ನು ಉತ್ತಮವಾಗಿ ನಿರ್ವಹಿಸಲು ಮತ್ತು ಸಂಘಟಿಸಲು ಸಹಾಯ ಮಾಡುವ ಸಮುದಾಯಗಳ ವೈಶಿಷ್ಟ್ಯವನ್ನು (Communities) ಹೊರತರುವುದಾಗಿ ಘೋಷಿsಸಿದೆ.

ಇದನ್ನೂ ಓದಿ: ವಾಟ್ಸಾಪ್‌ನಲ್ಲಿ ಇನ್ನು ಏಕಕಾಲಕ್ಕೆ 32 ಜನರಿಗೆ ಕರೆ ಮಾಡಬಹುದು!

ವಾಟ್ಸಾಪ್  ಪ್ರಕಾರ ಸಮುದಾಯಗಳು "ಗುಂಪುಗಳ ಡೈರೆಕ್ಟರಿ" ಯಂತೆ ಕಾರ್ಯನಿರ್ವಹಿಸಲಿವೆ, ಈ ವೈಶಿಷ್ಟ್ಯವು ಯಾರಿಗಾದರೂ "ಕೆಲವು ಸಾಮ್ಯತೆಗಳನ್ನುಹೊಂದಿದ ವೈವಿಧ್ಯಮಯ ಗುಂಪುಗಳೊಂದಿಗೆ ತಮ್ಮದೇ ಆದ ಸಮುದಾಯವನ್ನು ನಡೆಸಲು ಅನುಮತಿಸುತ್ತದೆ" 

ಯಾರಾದರೂ ಕಮ್ಯೂನಿಟಿ ರಚಿಸಬಹುದು ಮತ್ತು ಈ ಕಮ್ಯೂನಿಟಿಗೆ ಸೇರಲು  ಗುಂಪುಗಳನ್ನು ಆಹ್ವಾನಿಸಬಹುದು ಆದರೆ ಆಯಾ ನಿರ್ವಾಹಕರು ಆಹ್ವಾನವನ್ನು ಸ್ವೀಕರಿಸಿದರೆ ಮಾತ್ರ ಗುಂಪುಗಳು ಕಮ್ಯೂನಿಟಿ ಭಾಗವಾಗುತ್ತವೆ.

2 GBಫೈಲ್‌ ಶೇರ್:‌ ವಾಟ್ಸಾಪ್ ಬಳಕೆದಾರರು ಪ್ರಸ್ತುತ 100MB ಫೈಲ್ಸ್‌ ಕಳುಹಿಸಬಹುದಾಗಿದೆ. ಆದರೆ ಈಗ 2GBಯಷ್ಟು ಫೈಲ್ ಕಳುಹಿಸಬಹುದಾದ ಗರಿಷ್ಠ ಅನುಮತಿಸುವ ಫೈಲ್ ಗಾತ್ರವನ್ನು ಹೆಚ್ಚಿಸುವ ವೈಶಿಷ್ಟ್ಯವನ್ನು ವಾಟ್ಸಾಪ್ ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ. ಈ ಮೂಲಕ ತನ್ನ ಪ್ರತಿಸ್ಪರ್ಧಿ ಟೆಲಿಗ್ರಾಮ್‌ಗೆ ವಾಟ್ಸಾಪ್‌ ಸೆಡ್ಡು ಹೊಡೆಯಲಿದೆ.  ಇದು ಬಳಕೆದಾರರಿಗೆ ಯಾವುದೇ ಅಡೆತಡೆಯಿಲ್ಲದೆ 1.5GB ವರೆಗಿನ ಫೈಲ್‌ಗಳನ್ನು ಕಳುಹಿಸಲು ಅನುಮತಿಸುತ್ತದೆ.

ಇದಕ್ಕೂ ಮೊದಲು, ಮೆಟಾ-ಮಾಲೀಕತ್ವದ ಮೆಸೆಂಜರ್ ಪ್ಲಾಟ್‌ಫಾರ್ಮ್ ಎಲ್ಲಾ ಬಳಕೆದಾರರಿಗೆ ಲಿಂಕ್ಡ್ ಡಿವೈಸಸ್ (Linked Devices) ವೈಶಿಷ್ಟ್ಯವನ್ನು ಹೊರತಂದಿದೆ. ಇದು ಪ್ರಾಥಮಿಕ ಸಾಧನವನ್ನು ಯಾವಾಗಲೂ ಆನ್‌ಲೈನ್‌ನಲ್ಲಿ ಇರಿಸಿಕೊಳ್ಳುವ ಅಗತ್ಯವಿಲ್ಲದೇ ಐದು ಸಾಧನಗಳನ್ನು ವಾಟ್ಸಾಪ್ ಚಾಟ್‌ಗೆ ಸಂಪರ್ಕಿಸಲು ಅವಕಾಶ ನೀಡುತ್ತದೆ. 

Follow Us:
Download App:
  • android
  • ios