Asianet Suvarna News Asianet Suvarna News

WhatsApp Communities ಎಂದರೇನು?: ಹೇಗೆ ಕೆಲಸ ಮಾಡುತ್ತೆ ಈ ಹೊಸ ಫೀಚರ್?

ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗೆ ಕಮ್ಯೂನಿಟಿ ಟ್ಯಾಬನ್ನು ಸೇರಿಸುವುದಾಗಿ ವಾಟ್ಸಾಪ್ ಘೋಷಿಸಿದೆ. ವೈಶಿಷ್ಟ್ಯವು ಬಳಕೆದಾರರಿಗೆ ಪ್ರತ್ಯೇಕ ಗುಂಪುಗಳನ್ನು ಒಂದೇ ಸೂರಿನಡಿ ತರಲು ಅವಕಾಶ ನೀಡುತ್ತದೆ.

What is WhatsApp Communities which will let users bring separate groups under one roof mnj
Author
Bengaluru, First Published Apr 15, 2022, 5:50 PM IST

WhatsApp Communities: ಮೆಟಾ ಒಟೆತನದ ಮೇಸೆಜಿಂಗ್‌ ಪ್ಲಾಟಫಾರ್ಮ್‌ ವಾಟ್ಸಾಪ್‌ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಕಮ್ಯೂನಿಟಿಸ್‌ (Communities) ಅಥವಾ ಸಮುದಾಉ ಎಂಬ ಹೊಸ ವೈಶಿಷ್ಟ್ಯವನ್ನು ಸೇರಿಸುತ್ತಿದೆ ಎಂದು ಘೋಷಿಸಿದೆ. ಅಲ್ಲದೇ ಮೆಸೇಜಿಂಗ್ ಅಪ್ಲಿಕೇಶನ್ ಮುಂಬರುವ ತಿಂಗಳುಗಳಲ್ಲಿ ವೈಶಿಷ್ಟ್ಯವನ್ನು ಪರೀಕ್ಷಿಸುವುದಾಗಿ ತಿಳಿಸಿದೆ. ವೈಶಿಷ್ಟ್ಯವು ಪ್ರಸ್ತುತ ಆರಂಭಿಕ ಹಂತದಲ್ಲಿದೆ. ಕಮ್ಯೂನಿಟಿಗಳಲ್ಲಿನ ಸಂದೇಶಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನೊಂದಿಗೆ ಬರುತ್ತವೆ ಎಂದು ವಾಟ್ಸಾಪ್‌ ಹೇಳಿದೆ.

ವಾಟ್ಸಾಪ್ ಕಮ್ಯೂನಿಟಿಸ್‌ ಎಂದರೇನು?: ವಾಟ್ಸಪ್‌ನ ಸಮುದಾಯ ವೈಶಿಷ್ಟ್ಯವು ಸಾವಿರಾರು ಜನರನ್ನು ಒಂದೇ ಗುಂಪಿನ ಅಡಿಯಲ್ಲಿ ತರುತ್ತವೆ. ಒಂದು ಸಮುದಾಯಕ್ಕೆ ಹಲವಾರು ಗುಂಪುಗಳನ್ನು ಸೇರಿಸಲು ಬಳಕೆದಾರರಿಗೆ ಅವಕಾಶ ನೀಡಲು  ಸಾಧ್ಯವಾಗುತ್ತದೆ. ವಾಟ್ಸಾಪ್ ಜನರಿಗೆ ಸೂಕ್ತವೆನಿಸುವ ರಚನೆಯೊಂದಿಗೆ ಒಂದೇ ಸೂರಿನಡಿ ಪ್ರತ್ಯೇಕ ಗುಂಪುಗಳನ್ನು ಒಟ್ಟುಗೂಡಿಸಲು ಅನುಮತಿಸುತ್ತದೆ.

ಒಂದೇ ರೀತಿಯ ಆಸಕ್ತಿಗಳನ್ನು ಹೊಂದಿರುವ ಬಹಳಷ್ಟು ಗುಂಪುಗಳನ್ನು ಒಟ್ಟುಗೂಡಿಸಿದಾಗ, ಜನರು ಸಂಪೂರ್ಣ ಸಮುದಾಯಕ್ಕೆ ಕಳುಹಿಸಲಾದ ಮೇಸೆಜ್‌ಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ ಮತ್ತು ಅವರಿಗೆ ಮುಖ್ಯವಾದವುಗಳ ಕುರಿತು ಸಣ್ಣ ಚರ್ಚಾ ಗುಂಪುಗಳನ್ನು ಸುಲಭವಾಗಿ ಸಂಘಟಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ವಾಟ್ಸಾಪ್‌ನಲ್ಲಿ ಇನ್ನು ಏಕಕಾಲಕ್ಕೆ 32 ಜನರಿಗೆ ಕರೆ ಮಾಡಬಹುದು!

ಸಾಮಾನ್ಯ ಗ್ರೂಪ್‌ಗಳಂತೆಯೇ, ಗ್ರೂಪ್‌ಗಳನ್ನು ಮಾಡರೇಟ್ ಮಾಡಲು ಕಮ್ಯೂನಿಟಿಸ್ ಸಹ ನಿರ್ವಾಹಕರನ್ನು‌ (Admin) ಹೊಂದಿರುತ್ತದೆ. ವಾಟ್ಸಾಪ್ ನಿರ್ವಾಹಕರಿಗಾಗಿ ಪ್ರಬಲವಾದ ಹೊಸ ಸಾಧನಗಳನ್ನು ಹೊರತರುತ್ತದೆ, ಎಲ್ಲರಿಗೂ ಕಳುಹಿಸಲಾದ ಪ್ರಕಟಣೆ ಸಂದೇಶಗಳು ಮತ್ತು‌ ಕಮ್ಯೂನಿಟಿಗೆ ಯಾವ ಗುಂಪುಗಳನ್ನು ಸೇರಿಸಬಹುದು ಎಂಬುದನ್ನು ನಿರ್ಧರಿಸುವ ಅಧಿಕಾರ ನೀಡುತ್ತದೆ. 

ಕಮ್ಯೂನಿಟಿಸ್ ಹೇಗೆ ಕೆಲಸ ಮಾಡುತ್ತದೆ?: ‌ಕಮ್ಯೂನಿಟಿಸ್ ಬಳಸಿಕೊಂಡು, ಶಾಲೆಯ ಪ್ರಾಂಶುಪಾಲರು ಕಡ್ಡಾಯವಾಗಿ ಎಲ್ಲರೂ ಓದಬೇಕಾದ ನೋಟಿಸ್‌ ಅಥವಾ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಲು ಮಕ್ಕಳ ಎಲ್ಲಾ ಪೋಷಕರನ್ನು ಒಟ್ಟಿಗೆ ಸೇರಿಸಲು ಇದನ್ನು ಬಳಸಬಹುದು. ಅಲ್ಲದೇ ನಿರ್ದಿಷ್ಟ ತರಗತಿಗಳು, ಪಠ್ಯೇತರ ಚಟುವಟಿಕೆಗಳು ಅಥವಾ ಸ್ವಯಂಸೇವಕ ಅಗತ್ಯಗಳ ಬಗ್ಗೆ ಗ್ರೂಪ್‌ಗಳನ್ನು ರಚಿಸಬಹುದು. 

What is WhatsApp Communities which will let users bring separate groups under one roof mnj

ವಾಟ್ಸಾಪ್ ಇನ್ನೂ ಸಮುದಾಯಗಳ ವೈಶಿಷ್ಟ್ಯವನ್ನು ಹೊರತಂದಿಲ್ಲ, ‌ಆದರೆ ಇದು ಶೀಘ್ರದಲ್ಲೆ ಬಿಡುಗಡೆಯಾಗಲಿದೆ ಎಂದು ವರದಿಗಳು ಸೂಚಿಸಿವೆ. ಹೀಗಾಗಿ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ನಿರ್ದಿಷ್ಟ ಮಾಹಿತಿ ಇಲ್ಲ. ಆದರೆ ಕಮ್ಯೂನಿಟಿಸ್ ಬಳಕೆದಾರರಿಗೆ ಈ ಕೆಲವು ವೈಶಿಷ್ಟ್ಯಗಳನ್ನು ನೀಡುತ್ತವೆ

  • ಇದು ಬಳಕೆದಾರರಿಗೆ ಪ್ರತ್ಯೇಕ ಗುಂಪುಗಳನ್ನು ಒಂದೇ ಗ್ರೂಪ್‌ ಅಥವಾ ಕಮ್ಯೂನಿಟಿಸ್ ಅಡಿಯಲ್ಲಿ ತರಲು ಅನುಮತಿಸುತ್ತದೆ.
  • ಇದು ಸಂಪೂರ್ಣ ಸಮುದಾಯಕ್ಕೆ ಕಳುಹಿಸಲಾದ ಮಾಹಿತಿಯನ್ನು ಸ್ವೀಕರಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.
  • ಸಮುದಾಯವು ಬಳಕೆದಾರರಿಗೆ ಚರ್ಚೆಗಳನ್ನು ಆಯೋಜಿಸಲು ಅವಕಾಶ ನೀಡುತ್ತದೆ
  • ಪ್ರಕಟಣೆಗಳನ್ನು ಮಾಡಲು ಸಮುದಾಯಗಳನ್ನು ಸಹ ಬಳಸಬಹುದು
Follow Us:
Download App:
  • android
  • ios