ಮೆಸೇಜಿಂಗ್‌ ಸರ್ವೀಸ್‌ ವಾಟ್ಸ್‌ಆಪ್‌ ಸೇವೆಯಲ್ಲಿ ಮಧ್ಯಾಹ್ನದ ನಂತರ ವ್ಯತ್ಯಯ ಕಂಡು ಬಂದಿದೆ. ಭಾರತ ಸೇರಿದಂತೆ ವಿಶ್ವದ ಪ್ರಮುಖ ದೇಶಗಳಲ್ಲಿ ವಾಟ್ಸ್‌ಆಪ್‌ ಡೌನ್‌ ಆಗಿದೆ ಎಂದು ಹೇಳಲಾಗಿದೆ. ಸದ್ಯಕ್ಕೆ ವಾಟ್ಸ್‌ಆಪ್‌  ಸರ್ವರ್‌ ಡೌನ್‌ ಆಗಿರೋದು ಕಾರಣ ಎಂದು ಹೇಳಲಾಗುತ್ತಿದೆ. ಇದರ ನಡುವೆ ಮೀಮ್ಸ್‌ಗಳ ಹಬ್ಬ ಶುರುವಾಗಿದೆ.

ನವದೆಹಲಿ (ಅ. 25): ಮೆಸೇಜಿಂಗ್‌ ಸರ್ವೀಸ್‌ ವಾಟ್ಸ್‌ಆಪ್‌ ಸೇವೆಯಲ್ಲಿ ಮಧ್ಯಾಹ್ನದ ನಂತರ ವ್ಯತ್ಯಯ ಕಂಡು ಬಂದಿದೆ. ಭಾರತ ಸೇರಿದಂತೆ ವಿಶ್ವದ ಪ್ರಮುಖ ದೇಶಗಳಲ್ಲಿ ವಾಟ್ಸ್‌ಆಪ್‌ ಡೌನ್‌ ಆಗಿದೆ ಎಂದು ಹೇಳಲಾಗಿದೆ. ಸದ್ಯಕ್ಕೆ ಸರ್ವರ್‌ ಸಮಸ್ಯೆ ಇಂದಾಗಿ ಸಮಸ್ಯೆ ಎದುರಾಗಿದೆ ಎಲ್ಲಾಗಿದೆ. ಮೆಸೇಜ್‌ಗಳು ಬರುತ್ತಿಲ್ಲ ಹಾಗೂ ಕಳಿಸಲು ಸಾಧ್ಯವಾಗುತ್ತಿಲ್ಲ. ಆಪ್‌ ಮಾತ್ರವಲ್ಲ, ವಾಟ್ಸ್‌ಆಪ್‌ ವೆಬ್‌ ಕೂಡ ಸರಿಯಾಗಿ ಕಾರ್ಯನಿವರ್ಹಿಸುತ್ತಿಲ್ಲ. ಇದರ ಬೆನ್ನಲ್ಲಿಯೇ ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸ್‌ಆಪ್‌ ಕುರಿತಾಗಿ ಮೀಮ್ಸ್‌ಗಳ ಸಾಗರವೇ ಹರಿದುಬರುತ್ತಿದೆ. ಬಹುತೇಕ ಮಂದಿ ವಾಟ್ಸ್‌ಆಪ್‌ ಆಗಿರುವ ಸಮಸ್ಯೆ ಏನು ಎಂದು ತಿಳಿಯಲು ಟ್ವಟರ್‌ಗೆ ಆಗಮಿಸುತ್ತಿದ್ದರೆ, ಇನ್ನೂ ಕೆಲವರು ಮೆಸೇಜ್‌ ಕಳಿಸಲು ಫೇಸ್‌ಬುಕ್‌ ಮೆಸೆಂಜರ್‌ ಹಾಗೂ ಇನ್ಸ್‌ಟಾಗ್ರಾಮ್‌ ಮೆಸೇಜ್‌ ಪರ್ಯಾಯ ಕಂಡುಕೊಂಡಿದ್ದಾರೆ. ವಾಟ್ಸ್‌ಆಪ್‌ನ ಇಂಜಿನಿಯರ್‌ಗಳು ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ಪಡುತ್ತಿದ್ದರೆ, ಮೈಕ್ರೋಬ್ಲಾಗಿಂಗ್‌ ಅಭಿಮಾನಿಗಳು ವಾಟ್ಸ್‌ಆಪ್‌ ಕುರಿತಾಗಿ ಜೋಕ್‌ಗಳನ್ನು ಮೀಮ್‌ಗಳು ಸಿದ್ಧ ಮಾಡಿದ್ದಾರೆ. ಅನೇಕರು ಬಾಲಿವುಡ್ ಚಲನಚಿತ್ರಗಳ ಚಿತ್ರಗಳನ್ನು ಹಂಚಿಕೊಂಡರೆ, ಮಾರ್ಕ್ ಜುಕರ್‌ಬರ್ಗ್ ಅವರ ಚಿತ್ರಗಳನ್ನು ಸಂಪಾದಿಸಿ ಮತ್ತು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದವರೂ ಇದ್ದಾರೆ. ಅದರಲ್ಲಿನ ಕೆಲವು ಮೀಮ್ಸ್‌ಗಳು ಇಲ್ಲಿವೆ.

- ವಾಟ್ಸ್‌ಆಪ್‌ ಇಂಜಿಯರ್‌ ಕೆಲಸ ಮಾಡ್ತಿದ್ದಾರೆ..

Scroll to load tweet…


- ವಾಟ್ಸ್‌ಆಪ್‌ ಡೌನ್‌ ಆಗಿದ್ಯಾ ಅಥವಾ ಇಲ್ವಾ ಅಂತಾ ನೋಡೋಕೆ ನಾನು ಟ್ವಿಟರ್‌ಗೆ ಓಡುತ್ತಿರುವ ರೀತಿ..

Scroll to load tweet…


- ವಾಟ್ಸ್‌ಆಪ್‌ ಡೌನ್‌, ಟ್ವಿಟರ್‌ ಕೇಂದ್ರ ಕಚೇರಿಯಲ್ಲಿ ಸಂಭ್ರಮವಂತೆ..

Scroll to load tweet…


- ವಾಟ್ಸ್‌ಆಪ್‌ ಡೌನ್‌ ಆಗಿದ್ಯಾ ಇಲ್ವಾ ಅಂತಾ ನೋಡೋಕೆ ಟ್ವಿಟ್ಟರ್‌ಗೆ ಇಷ್ಟೆಲ್ಲಾ ಜನ ಬಂದ್ರಾ?

Scroll to load tweet…


- ಬೇಬಿ ವಾಟ್ಸ್‌ಆಪ್‌ ಬೇಕಾದ್ರೆ ಡೌನ್‌ ಆಗಬಹುದು, ಆದರೆ, ನಿನ್ನ ಮೇಲೆ ನಾನಿಟ್ಟಿರೋ ಪ್ರೀತಿ ಎಂದೂ ಡೌನ್‌ ಆಗೋದಿಲ್ಲ!

Scroll to load tweet…


- ವಾಟ್ಸ್ಅಪ್‌ ಡೌನ್‌ ಆದ್ರೆ ಪಬ್ಲಿಕ್‌ ರಿಯಾಕ್ಷನ್‌ ಹೀಗಿರುತ್ತೆ ಅಂತೆ..!

Scroll to load tweet…

- ಮಾರ್ಕೆಟ್‌ಅಲ್ಲಿ ಮಾರ್ಕೆಟಿಂಗ್‌ ಮಾಡಿದೋನೇ ಜಾಣ..!

Scroll to load tweet…

ಎಷ್ಟೊಂದು ದೊಡ್ಡ ಇಶ್ಯು ಇದು, ಈಗ ಗೊತ್ತಾಗ್ತಾ ಇದೆ: ಹಿಂದಿನ ಪತ್ರಕರ್ತರೊಬ್ಬರು ಈ ಕುರಿತಾಗಿ ಟ್ವೀಟ್‌ ಮಾಡಿದ್ದು, 'ವಾಟ್ಸ್‌ಆಪ್‌ ಡೌನ್‌ ಎಷ್ಟು ದೊಡ್ಡ ವಿಚಾರ ಅನ್ನೋದು ಈಗ ಗೊತ್ತಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. 'ಮೆಟಾ (ವಾಟ್ಸ್ಆಪ್‌ ಮಾಲೀಕತ್ವದ ಕಂಪನಿ), ಇಂಜಿನಿಯರ್‌ಗೆ ವರ್ಷಕ್ಕೆ 30 ಪ್ಲಸ್‌ ಲಕ್ಷದ ಪ್ಯಾಕೇಜ್‌ ನೀಡ್ತೀರಿ. ಆದ್ರೂ ಅವನು ಸರಿಯಾಗಿ ಕೆಲಸ ಮಾಡ್ತಿಲ್ಲ' ಎಂದು ಇನ್ನೊಬ್ಬ ಬಳಕೆದಾರ ಬರೆದುಕೊಂಡಿದ್ದಾರೆ.

ರಿಯಲ್‌ಟೈಮ್ ಮಾನಿಟರ್ ಡೌನ್‌ಡೆಕ್ಟರ್ ಪ್ರಕಾರ, ದೇಶದ ವಿವಿಧ ಭಾಗಗಳಲ್ಲಿ ವಾಟ್ಸ್‌ಆಪ್‌ ಸಮಸ್ಯೆಗಳನ್ನು ಎದುರಿಸಿದೆ. ಅಲ್ಲದೆ, 11,000 ಬಳಕೆದಾರರು ಔಟೇಜ್‌ಅನ್ನು ವರದಿ ಮಾಡಿದ್ದಾರೆ. 2021 ರ ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ ಜುಲೈನಲ್ಲಿ ಭಾರತದಲ್ಲಿ 23 ಲಕ್ಷಕ್ಕೂ ಹೆಚ್ಚು ಕೆಟ್ಟ ಖಾತೆಗಳನ್ನು WhatsApp ನಿಷೇಧಿಸಿದ ಕೆಲವೇ ದಿನಗಳಲ್ಲಿ ಈ ರೀತಿಯ ಘಟನೆಯಾಗಿದೆ. ಭಾರತದಲ್ಲಿ ಜುಲೈ ತಿಂಗಳಿನಲ್ಲಿ WhatsApp ಹೆಚ್ಚುವರಿಯಾಗಿ 574 ದೂರು ವರದಿಗಳನ್ನು ಸ್ವೀಕರಿಸಿದದು, 27 ದೂರುಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ.