ನೀವು ಒಮ್ಮೆ ಕಳುಹಿಸಿದ ಸಂದೇಶವನ್ನ ರದ್ದು ಮಾಡುವ ಮತ್ತು ಎಡಿಟ್ ಮಾಡಬಹುದಾದ ಫೀಚರನ್ನ ವಾಟ್ಸಾಪ್ ಪರಿಚಯಿಸಲಿದೆ ಎಂದು WABetaInfo ಟ್ವಿಟ್ಟರ್ ಅಕೌಂಟಿನಲ್ಲಿ ತಿಳಿಸಲಾಗಿದೆ.

ಮುಂಬೈ(ಡಿ.16): ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಜನಪ್ರಿಯವಾದ ವಾಟ್ಸಾಪ್ ಆಗಿಂದ್ದಾಗ್ಗೆ ಹೊಸ ಹೊಸ ಫೀಚರ್`ಗಳನ್ನ ಪರಿಚಯಿಸುವ ಮೂಲಕ ಗ್ರಾಹಕರ ಮೆಚ್ಚುಗೆ ಗಳಿಸುತ್ತಿದೆ. ಇದೀಗ, ಬಳಕೆದಾರರ ಊಹೆಗೂ ಮೀರಿದ ಫೀಚರ್`ವೊಂದನ್ನ ಪರಿಚಯಿಸಲು ಸಿದ್ಧತೆ ನಡೆಸಿದೆ. ನೀವು ಒಮ್ಮೆ ಕಳುಹಿಸಿದ ಸಂದೇಶವನ್ನ ರದ್ದು ಮಾಡುವ ಮತ್ತು ಎಡಿಟ್ ಮಾಡಬಹುದಾದ ಫೀಚರನ್ನ ವಾಟ್ಸಾಪ್ ಪರಿಚಯಿಸಲಿದೆ ಎಂದು WABetaInfo ಟ್ವಿಟ್ಟರ್ ಅಕೌಂಟಿನಲ್ಲಿ ತಿಳಿಸಲಾಗಿದೆ.

ವಾಟ್ಸಾಪ್`ನಲ್ಲಿ ಮುಂಬರಲಿರುವ ಯೋಜನೆಗಳ ಕುರಿತಂತೆ ಅತ್ಯಂತ ವಿಶ್ವಾಸಾರ್ಹ ಮಾಹಿತಿ ನೀಡುವ ಜಾಲ ತಾಣ ಇದಾಗಿದೆ.