-ಹೊಸ ವ್ಷದ ಮುನ್ನ ದಿನ ತುಸು ಕಾಲ ಕುಸಿತಗೊಂಡಿದ್ದ ವಾಟ್ಸ್ ಆ್ಯಪ್ ಸೇವೆ- ಭಾರತೀಯರಿಂದಲೇ ಅತೀ ಹೆಚ್ಚು ಸಂದೇಶ ರವಾನೆ.- ಅತೀ ಹೆಚ್ಚು ಮಾರುಕಟ್ಟೆ ಹೊಂದಿದೆ ವಾಟ್ಸ್ ಆ್ಯಪ್.

ಹೊಸ ವರ್ಷದ ಮುನ್ನಾ ದಿನ ಬಹು ಪ್ರಖ್ಯಾತ ವಾಟ್ಸ್ ಆ್ಯಪ್‌ನಲ್ಲಿ ವಿಶ್ವದ್ಯಾಂತ 7500 ಕೋಟಿ ಸಂದೇಶಗಳು ರವಾನೆಯಾಗಿದ್ದು, ಇದೀಗ ಈ ಕಂಪನಿ ಮತ್ತೊಂದು ಮೈಲಿಗಲ್ಲು ಮುಟ್ಟಿದೆ. ಅದರಲ್ಲಿ 2000 ಕೋಟಿ ಸಂದೇಶಗಳನ್ನು ಭಾರತೀಯರಿಂದಲೇ ಶೇರ್ ಆಗಿದ್ದವು. 

Add Asianetnews Kannada as a Preferred SourcegooglePreferred

ಭಾರತದಲ್ಲಿ ಹೊಸ ವರ್ಷದ ಮುನ್ನಾ ದಿನ ವಾಟ್ಸ್ ಆ್ಯಪ್ ಕುಸಿತಗೊಂಡಿದ್ದಕ್ಕೂ ಭಾರತೀಯರು ಸಿಕ್ಕಾಪಟ್ಟೆ ಸಂದೇಶಗಳನ್ನು ಶೇರ್ ಮಾಡಿಕೊಂಡಿದ್ದೇ ಕಾರಣವೆಂದೂ ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ರಾಯಟರ್ಸ್‌ಗೆ ಸುದ್ದಿ ಸಂಸ್ಥೆಗೆ ಮೇಲ್ ಮೂಲಕ ಮಾಹಿತಿ ಹಂಚಿಕೊಂಡ ಫೇಸ್‌ಬುಕ್ ಸ್ವಾಮ್ಯದ ವಾಟ್ಸ್‌ಆ್ಯಪ್, 'ಹೊಸ ವರ್ಷದ ಮುನ್ನ ದಿನದಷ್ಟು ಸಂದೇಶಗಳು ಯಾವತ್ತೂ ಹಂಚಿಕೆಯಾಗಿರಲಿಲ್ಲ. ಆ ದಿನ ಭಾರದಲ್ಲಿಯೇ 1300 ಕೋಟಿ ಚಿತ್ರಗಳು, 500 ಕೋಟಿ ವೀಡಿಯೋಗಳು ರವಾನೆಯಾಗಿದ್ದು, ಸೇವೆಯಲ್ಲಿ ವ್ಯತ್ಯಯವಾಗಿದ್ದಕ್ಕೆ ಇಷ್ಟು ಸಂಖ್ಯೆಯ ಸಂದೇಶಗಳು ಒಟ್ಟಿಗೇ ಶೇರ್ ಆಗಿದ್ದೇ ಕಾರಣ,' ಎಂದು ಕಂಪನಿ ವಕ್ತಾರರು ಹೇಳಿದ್ದಾರೆ.

ಈ ಸಂದೇಶ ರವಾನೆ ಆ್ಯಪ್‌ಗೆ ಭಾರತವೇ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿದ್ದು, ತಿಂಗಳಿಗೆ 20 ಕೋಟಿಗಿಂತಲೂ ಹೆಚ್ಚು ಮಂದಿ ಈ ಆ್ಯಪ್‌ಅನ್ನು ಸಕ್ರಿಯವಾಗಿ ಬಳಸುತ್ತಾರೆಂದು ಕಂಪನಿ ಹೇಳಿದೆ.