ಫೋಕ್ಸ್‌ವ್ಯಾಗನ್ ಸಂಸ್ಥೆಯಿಂದ ಸ್ಪೋರ್ಟ್ಸ್ ಕಾರು ಬಿಡುಗಡೆ

Volkswagen launches sporty versions of Polo, Ameo & Vento
Highlights

ಫೋಕ್ಸ್‌ವ್ಯಾಗನ್ ಸಂಸ್ಥೆಯಿಂದ ನೂತನ ಪೋಲೋ, ಎಮೋ ಹಾಗೂ ವೆಂಟೋ ಸ್ಪೋರ್ಟೀವ್ ಎಡಿಶನ್ ಬಿಡುಗಡೆ. ಹೊಸ ಕಾರಿಗೆ ನೀವು ಹೆಚ್ಚು ಬೆಲೆ ತೆರಬೇಕಾಗಿಲ್ಲ. ಸ್ಪೋರ್ಟೀವ್ ವರ್ಶನ್ ವಿಶೇಷತೆ ಇಲ್ಲಿದೆ.

ಬೆಂಗಳೂರು(ಜೂನ್.9): ಯುರೋಪಿಯನ್ ಕಾರು ಸಂಸ್ಥೆ ಫೋಕ್ಸ್‌ವ್ಯಾಗನ್ ತನ್ನ ಜನಪ್ರೀಯ ಕಾರುಗಳಾಜದ ಪೋಲೋ, ಎಮೋ ಹಾಗೂ ವೆಂಟೋ ಕಾರುಗಳಲ್ಲಿ ಸ್ಪೋರ್ಟೀವ್ ವರ್ಶನ್ ಲಾಂಚ್ ಮಾಡಿದೆ.

ಭಾರತದಲ್ಲಿ ಫೋಕ್ಸ್‌ವ್ಯಾಗನ್ ಜನಪ್ರೀಯಗೊಳ್ಳುತ್ತಿರುವ ಹಿನ್ನಲೆಯಲ್ಲಿ ಯುರೋಪಿಯನ್ ಕಾರು ಸಂಸ್ಥೆ ಗ್ರಾಹಕರಿಗೆ ಮತ್ತಷ್ಟು ಕಾರುಗಳನ್ನ ಪರಿಚಯಿಸಲು ಮುಂದಾಗಿದೆ. ಪೋಲೋ, ಎಮೋ ಹಾಗೂ ವೆಂಟೂ ಸ್ಪೋರ್ಟೀವ್ ವರ್ಶನ್ ಕಾರುಗಳಿಗೆ ಯಾವುದೆ ಹೆಚ್ಚಿನ ಬೆಲೆ ವಿಧಿಸಿಲ್ಲ. ಫೋಕ್ಸ್‌ವ್ಯಾಗನ್ ಮಿಡ್ ವೇರಿಯೆಂಟ್ ಕಾರುಗಳ ಬೆಲೆಯಲ್ಲೇ ಸ್ಪೋರ್ಟೀವ್ ವರ್ಶನ್ ಕೂಡ ಲಭ್ಯವಾಗಲಿದೆ ಎಂದು ಸಂಸ್ಥೆ ಹೇಳಿದೆ.

ನೂತನ ವರ್ಶನ್ ಭಾರತದ ಎಲ್ಲಾ ಫೋಕ್ಸ್‌ವ್ಯಾಗನ್ ಕಾರು ಶೋ ರೂಮ್‌ಗಳಲ್ಲಿ ಸ್ಪೋರ್ಟೀವ್ ವರ್ಶನ್ ಲಭ್ಯವಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ನೂತನ ಸ್ಪೋರ್ಟೀವ್ ವರ್ಶನ್ ತಯಾರಿಸಲಾಗಿದೆ ಎಂದು ಫೋಕ್ಸ್‌ವ್ಯಾಗನ್ ಹೇಳಿದೆ.

loader