ನವದೆಹಲಿ[ಜು.02]: ರಿಲಯನ್ಸ್ ಜಿಯೋ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟ ಬಳಿಕ ಇತರ ಕಂಪೆನಿಗಳು ದಿನಕ್ಕೊಂದರಂತೆ ನೂತನ ರೀಚಾರ್ಜ್ ಪ್ಲಾನ್ ಗಳನ್ನು ಪರಿಚಯಿಸುವುದರೊಂದಿಗೆ, ಈ ಹಿಂದೆ ಜಾರಿಗೊಳಿಸಿರುವ ಪ್ಲಾನ್ ಗಳಲ್ಲಿ ಬದಲಾವಣೆ ತರುತ್ತಿವೆ. ಇದೀಗ ಜಿಯೋಗೆ ಟಕ್ಕರ್ ನೀಡಲು ವೋಡಾಫೋನ್ ಸಜ್ಜಾಗಿದ್ದು, ತನ್ನ ಈ ಹಿಂದಿನ ಪ್ರೀಪೇಡ್ ಪ್ಲನ್ ನಲ್ಲಿ ಬದಲಾವಣೆ ತರುವ ಮೂಲಕ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ.

ಏನು ಬದಲಾವಣೆ?

ವೋಡಾಫೋನ್ 129 ರೂಪಾಯಿಗಳ ಪ್ರೀಪೇಡ್ ಪ್ಲಾನ್ ನಲ್ಲಿ ಕಂಪೆನಿ 2ಜಿಬಿ ಡೇಟಾ ನೀಡುತ್ತಿದೆ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಹಿಂದೆ ಈ ಪ್ಲಾನ್ ಪ್ಲಾನ್ ನಲ್ಲಿ ಕೇವಲ 1.5ಜಿಬಿ ಡೇಟಾ ಸಿಗುತ್ತಿತ್ತು. ಇತರ ಕಂಪೆನಿಗಳ ಆಕರ್ಷಕ ಪ್ಲಾನ್ ಗಳನ್ನು ಗಮನಿಸಿ ವೋಡಾಫೋನ್ ಈ ಬದಲಾವಣೆ ತಂದಿದೆ ಎನ್ನಲಾಗಿದೆ. ಬಳಕೆದಾರರು ಇದರಲ್ಲಿ ಫ್ರೀ ಲೈವ್ ಟಿವಿ, ಮೂವೀಸ್ ನಂತಹ ಹಲವಾರು ಲಾಭಗಳೂ ಸಿಗಲಿವೆ.

ಏರ್ಟೆಲ್ 129 ರೂಪಾಯಿಗಳ ಪ್ರೀಪೇಡ್ ಪ್ಲಾನ್ 

ಏರ್ಟೆಲ್ ಕೂಡಾ ಇಂತಹುದೇ ಪ್ಲಾನ್ ಜಾರಿಗೆ ತಂದಿದೆ. ಇದರಲ್ಲಿ ಬಳಕೆದಾರರಿಗೆ 2ಜಿಬಿ ಡೇಟಾ ಹಾಗೂ 300 ಉಚಿತ SMS ಸೌಲಭ್ಯ ಸಿಗುತ್ತದೆ. ಈ ಪ್ಲಾನ್ 28 ದಿನಗಳ ಮವ್ಯಾಲಿಡಿಟಿ ಹೊಂದಿದೆ. ಇಷ್ಟೇ ಅಲ್ಲದೇ, ಅನಿಯಮಿತ ಲೋಕಲ್ ಹಾಗೂ STD ಕರೆ ಹಾಗೂ ಅಂತರಾಷ್ಟ್ರೀಯ ಕರೆಗಳನ್ನೂ ಮಾಡಬಹುದು. ಈ ಪ್ಲಾನ್ ನಡಿಯಲ್ಲಿ ಏರ್ಟೆಲ್ ಟಿವಿ Subscription ಹಾಗೂ ಫ್ರೀ ವಿಂಕ್ ಮ್ಯೂಸಿಕ್  Subscription ಕೂಡಾ ಸಿಗುತ್ತದೆ.

ರಿಲಯನ್ಸ್ ಜಿಯೋ 149 ರೂಪಾಯಿಗಳ ಪ್ರೀಪೇಡ್ ಪ್ಲಾನ್ 

28 ದಿನಗಳ ವ್ಯಲಿಡಿಟಿ ಹೊಂದಿರುವ ಈ ಪ್ಲಾನ್ ನ್ಲಲಿ ಒಟ್ಟು 42 ಜಿಬಿ ಡೇಟಾ ಸಿಗುತ್ತದೆ. ಒಂದು ದಿನಕ್ಕೆ ಕೇವಲ 1.5ಜಿಬಿ ಡೇಟಾ ಗ್ರಾಹಕರು ಬಳಸಬಹುದಾಗಿದೆ. ಡೇಟಾದೊಂದಿಗೆ ಇದರಲ್ಲಿ ಅನಿಯಮಿತ ಕರೆ ಹಾಗೂ ಪ್ರತಿದಿನ 100 ಉಚಿತ SMS ಕೂಡಾ ಸಿಗುತ್ತದೆ. 149 ರೂಪಾಯಿಗಳ ಈ ಪ್ಲಾನ್ ನಲ್ಲಿ ಮೈ ಜಿಯೋ, ಜಿಯೋ ಸಿನಿಮಾ, ಜಿಯೋ ನ್ಯೂಸ್ ಹಾಗೂ ಜಿಯೋ ಕ್ಲೌಡ್ ಆ್ಯಪ್ ಸೇವೆಯೂ ಸಿಗುತ್ತದೆ.