Asianet Suvarna News Asianet Suvarna News

ನಾವೂ ಯಾರಿಗಿಂತಲೂ ಕಮ್ಮಿಯಿಲ್ಲ ಎಂದ ವೊಡಾಫೋನ್‌ನಿಂದ 'ಡೇಟಾ'ಧಾರೆ!

ಹೊಸ-ಹೊಸ ಹೆಚ್ಚೆಚ್ಚು ಗ್ರಾಹಕರನ್ನು ಪಡೆಯುವಷ್ಟೇ ಹಳೆಯ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಟೆಲಿಕಾಂ ಕಂಪನಿಗಳು ಕಸರತ್ತು ಮಾಡಬೇಕು. ಗ್ರಾಹಕನನ್ನು ಓಲೈಸಬೇಕಾದರೆ, ತಂತ್ರಜ್ಞಾನ ಹಾಗೂ ಸೇವೆಯ ಗುಣಮಟ್ಟ ಮಾತ್ರವಲ್ಲ, ಟಾರಿಫ್ ಪ್ಲಾನ್‌ ಹಾಗೂ ಆಫರ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ.
 

Vodafone launches two plans for 84 days with data offers
Author
Bengaluru, First Published Oct 17, 2018, 7:52 PM IST

ಆಫರ್‌ಗಳನ್ನು ಕೊಡುವುದರಲ್ಲಿ ರಿಲಾಯನ್ಸ್ ಜಿಯೋ, ಏರ್‌ಟೆಲ್‌ಗಿಂತ ತಾನು ಕಡಿಮೆಯಿಲ್ಲ ಎಂದು ವೊಡಾಪೋನ್ ಇನ್ನೊಮ್ಮೆ ಸಾಬೀತುಪಡಿಸಿದೆ. ಈದೀಗ 2 ಹೊಸ ಪ್ಲಾನ್‌ಗಳನ್ನು ಬಿಡುಗಡೆ ಮಾಡಿರುವ ವೊಡಾಫೋನ್ ತನ್ನ ಗ್ರಾಹಕರ ಮೇಲೆ 'ಡೇಟಾ'ಧಾರೆ ಹರಿಸಲು ಮುಂದಾಗಿದೆ.

ವೊಡಾಫೋನ್ ಬಿಡುಗಡೆ ಮಾಡಿರುವ ಮೊದಲ ಪ್ಲಾನ್, ರೂ. 511ರದ್ದು. ಇದರಲ್ಲಿ ಗ್ರಾಹಕರು ಅನಿಯಮಿತ ಕಾಲ್ಸ್, 100 ಎಸ್ಸೆಮ್ಮೆಸ್, ಹಾಗೂ ಪ್ರತಿನಿತ್ಯ 2 ಜಿಬಿ ಡೇಟಾ,  ಪಡೆಯಬಹುದು.  ಆ ಮೂಲಕ 84 ದಿನಗಳ ಈ ಪ್ಲಾನ್‌ನಲ್ಲಿ 168 ಜಿಬಿ ಡೇಟಾ ಪಡೆಯಬಹುದು.

ಇನ್ನೊಂದು ಪ್ಲಾನ್‌ ರೂ.569ಕ್ಕೆ ಲಭ್ಯವಿದ್ದು, 84 ದಿನಗಳ ಅವಧಿಗೆ ಅನ್‌ಲಿಮಿಟೆಡ್ ಕಾಲ್, 100ಎಸ್ಸೆಮ್ಮೆಸ್ ಜೊತೆಗೆ ಪ್ರತಿದಿನ 3 ಜಿಬಿ ಡೇಟಾ, ಅಂದರೆ 252 ಜಿಬಿ ಡೇಟಾ ಪಡೆಯಬಹುದು. 

BSNLನಿಂದ ಭರ್ಜರಿ ದಸರಾ ಆಫರ್; ಜಿಯೋ-ಏರ್‌ಟೆಲ್‌ಗೆ ಸೆಡ್ಡು!

ಆದರೆ ಈ ಹೊಸ ಪ್ಲಾನ್ ಗಳಲ್ಲಿ ವಾಯ್ಸ್ ಕಾಲ್ಸ್ ಅನ್‌ಲಿಮಿಟೆಡ್ ಆಗಿದ್ದರೂ  ಪ್ರತಿದಿನ 250 ನಿಮಿಷ ಹಾಗೂ ವಾರಕ್ಕೆ 1000 ನಿಮಿಷದ ಮಿತಿಯನ್ನು ಹೇರಲಾಗಿದೆ.

ಈ ತಿಂಗಳಾರಂಭದಲ್ಲಿ ವೊಡಾಫೋನ್ ಪ್ರೀಪೇಯ್ಡ್ ಗ್ರಾಹಕರಿಗೆ, ರೂ.99 ಹಾಗೂ ರೂ. 109ರ  2 ಹೊಸ ಪ್ಲಾನ್‌ಗಳನ್ನು ಪರಿಚಯಿಸಿತ್ತು.. 

Follow Us:
Download App:
  • android
  • ios