ವೊಡಾಫೋನ್ ನಿಂದ ಭರ್ಜರಿ ರಂಜಾನ್ ಆಫರ್

First Published 4, Jun 2018, 11:30 AM IST
Vodafone launches Ramzan special packs
Highlights

ವೊಡಾಫೋನ್ ಇಂಡಿಯಾ ಇದೇ ಮೊದಲ ಬಾರಿಗೆ ರಂಜಾನ್ ಪ್ರಯುಕ್ತ 90 ದಿನಗಳ ಅವಧಿಯ ಈದ್ ಉಲ್ ಜುಹಾ ಯೋಜನೆ ಪ್ರಕಟಿಸಿದೆ. 
 

ಬೆಂಗಳೂರು: ವೊಡಾಫೋನ್ ಇಂಡಿಯಾ ಇದೇ ಮೊದಲ ಬಾರಿಗೆ ರಂಜಾನ್ ಪ್ರಯುಕ್ತ 90 ದಿನಗಳ ಅವಧಿಯ ಈದ್ ಉಲ್ ಜುಹಾ ಯೋಜನೆ ಪ್ರಕಟಿಸಿದೆ. 

ಇದರ ಅನ್ವಯ 509 ರೂ.ಗೆ ರೀಚಾರ್ಜ್ ಮಾಡಿಸಿದ್ದಲ್ಲಿ ನಿತ್ಯ  1.4 ಜಿ.ಬಿ. ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯ ಪಡೆಯಬಹುದು. 

ಮೇ 16 ರಿಂದ ಆಗಸ್ಟ್ ತಿಂಗಳವರೆಗೆ ಈ ಸೌಲಭ್ಯ ಲಭ್ಯವಿರಲಿದೆ. ಗ್ರಾಹಕರು ವೊಡಾಫೋನ್ ಪ್ಲೇ ಆ್ಯಪ್ ಡೌನ್‌ಲೋಡ್ ಮಾಡಿ ಕೊಂಡು ಮೆಕ್ಕಾ- ಮದೀನಾ ನೇರವಾಗಿ ವೀಕ್ಷಿಸಬಹುದು. 

ಜತೆಗೆ ರಮ್ಜಾನ್ ವಿಶೇಷ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದುಎಂದು ವೊಡಾಫೋನ್ ಇಂಡಿಯಾ (ಕರ್ನಾಟಕ) ಬ್ಯುಸಿನೆಸ್ ಮುಖ್ಯಸ್ಥ ಅಮಿತ್ ಕಪೂರ್ ತಿಳಿಸಿದ್ದಾರೆ.

loader