ಏರ್'ಟೆಲ್'ನ  349ರೂ.ಗಳ ಈ ಯೋಜನೆಯಲ್ಲಿ ನಿತ್ಯ 1.5 ಜಿಬಿ ಇಂಟರ್'ನೆಟ್ ಹಾಗೂ ಅನಿಯಮಿತ ಕರೆಗಳು, ದಿನಕ್ಕೆ 3000 ಸಾವಿರ ಸಂದೇಶಗಳು ಒಳಗೊಂಡಿರುತ್ತವೆ.

ಮುಂಬೈ(ನ.14): ವೊಡಾಫೋನ್ ಜಿಯೋ ಹಾಗೂ ಏರ್'ಟೆಲ್'ಗಿಂತ ಉತ್ತಮ ಆಫರ್ ಪ್ರಕಟಿಸಿದ್ದು, 458 ಹಾಗೂ 509 ರೂ.ಗಳ ಆಫರ್ ಇದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

458 ರೂ.ಗಳ ಯೋಜನೆಯಲ್ಲಿ 70 ದಿನಗಳವರೆಗೆ ನಿತ್ಯ ಒಂದು ಜಿಬಿ ಡಾಟಾ ಅನಿಯಮಿತ ಕರೆ, 100 ಸಂದೇಶವಿರುತ್ತದೆ. 509ರೂ.ಗಳ ಆಫರ್'ನಲ್ಲಿ 84 ದಿನಗಳವರೆಗೆ ಉಚಿತ ಡಾಟಾ ಅನಿಯಮಿತ ಕರೆ, 100 ಸಂದೇಶಗಳಿರುತ್ತವೆ. ಎರಡೂ ಆಫರ್'ನಲ್ಲಿ 1ಜಿಬಿ ಮುಗಿದ ನಂತರ ಡಾಟಾ ವೇಗ ಕಡಿಮೆಯಾಗುತ್ತದೆ. ಇದು ಪ್ರಿಪೇಯ್ಡ್ ಚಂದಾದಾರರಿಗೆ ಮಾತ್ರ ಅನ್ವಯವಾಗುತ್ತದೆ. ಜಿಯೋ 399 ರೂ.ಗಳಿಗೆ ಇದೇ ರೀತಿಯ ಯೋಜನೆ ಪ್ರಕಟಿಸಿದ್ದು, ಆದರೆ ಡಾಟಾ 4ಜಿ ನೆಟ್'ವರ್ಕ್'ಗೆ ಲಭ್ಯವಿರುತ್ತದೆ. ವೊಡಾಫೋನ್ 3ಜಿ ಹಾಗೂ 4ಜಿ ಎರಡಕ್ಕೂ ಸಿಗುತ್ತದೆ.

ಐಡಿಯಾದಲ್ಲಿ 498 ರೂ.ಗಳ ಆಫರ್'ನಲ್ಲಿ ಇದೇ ರೀತಿಯ ಕೊಡುಗೆಗಳಿವೆ. ಏರ್'ಟೆಲ್'ನ 349ರೂ.ಗಳ ಈ ಯೋಜನೆಯಲ್ಲಿ ನಿತ್ಯ 1.5 ಜಿಬಿ ಇಂಟರ್'ನೆಟ್ ಹಾಗೂ ಅನಿಯಮಿತ ಕರೆಗಳು, ದಿನಕ್ಕೆ 3000 ಸಾವಿರ ಸಂದೇಶಗಳು ಒಳಗೊಂಡಿರುತ್ತವೆ. ಯೋಜನೆಯ ಕಾಲಾವಧಿ 28 ದಿನಗಳು. ಜಿಯೋದ 'ಧನ್ ಧನಾ ಧನ್' ಯೋಜನೆಗೆ ಕೌಂಟರ್ ಕೊಡುವ ಸಲುವಾಗಿ ಈ ಯೋಜನೆಯನ್ನು ಪ್ರಕಟಿಸಿದೆ.