ಇದರ ಜೊತೆಗೆ ಕೇವಲ 7 ರೂಪಾಯಿಯಲ್ಲಿ ವೊಡಾಫೋನ್ ಟು ವೊಡಾಫೋನ್ ಅನ್`ಲಿಮಿಟೇಡ್ ವಾಯ್ಸ್ ಕಾಲ್ ಆಫರನ್ನ ವೊಡಾಫೋನ್ ನೀಡಿದೆ. ಪ್ರೀಪೇಯ್ಡ್ ಗ್ರಾಹಕರು ಇದರ ಅನುಕೂಲತೆ ಪಡೆಯಬಹುದಾಗಿದ್ದು, ಇದೇ ಲಾಂಚ್ ಆಗಿದೆ. ಜನವರಿ9ಕ್ಕೆ ಗ್ರಾಹಕರಿಗೆ ಸಿಗಲಿದೆ.

ನವದೆಹಲಿ(ಜ.07): ಟೆಲಿಕಾಂ ಕ್ಷೇತ್ರಕ್ಕೆ ಜಿಯೋ ಎಂಟ್ರಿ ಕೊಟ್ಟ ಬಳಿಕ ಅಕ್ಷರಶಃ ಬೆಲೆ ಸಮರ ಶುರುವಾಗಿದೆ. ಜಿಯೋ ಫ್ರೀ ಆಫರ್ ಬಳಿಕ ಕಂಗೆಟ್ಟಿರುವ ಇತರೆ ಸಂಸ್ಥೆಗಳು ಆಫರ್`ಗಳ ಮೇಲೆ ಆಫರ್ ನೀಡುತ್ತಿವೆ. ಇದೀಗ, ವೊಡಾಫೋನ್ ಸರದಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೊಡಾಫೋನ್ ಕೇವಲ 16 ರೂಪಾಯಿಯಲ್ಲಿ ಅನಿಯಮಿತ 3ಜಿ ಮತ್ತು 4ಜಿ ಡೇಟಾ ಆಫರ್ ನೀಡುತ್ತಿದೆ. ಅದು ಕೇವಲ ಒಂದು ಗಂಟೆ ಮಾತ್ರ. 16 ರೂಪಾಯಿಯಲ್ಲಿ ಒಂದು ಗಂಟೆ ಎಷ್ಟು ಬೇಕಾದರೂ 3ಜಿ/4ಜಿ ಡೇಟಾ ಬಳಸಬಹುದಾಗಿದೆ.ಇದಕ್ಕೆ ಸೂಪರ್ ಅವರ್ ಎಂದು ಹೆಸರಿಡಲಾಗಿದ್ದು, ದಿನಕ್ಕೆ ಎಷ್ಟು ಬಾರಿಯಾದರೂ ಸೂಪರ್ ಅವರ್ ಆಕ್ಟಿವ್ ಮಾಡಿಕೊಂಡು ಡೌನ್ ಲೋಡ್ ಸೇರಿದಂತೆ ಯಾವುದೇ ರೀತಿಯಲ್ಲಿ ನಿಮಗೆ ಇಷ್ಟಬಂದಷ್ಟು ಡೇಟಾ ಬಳಸಬಹುದು.

ಇದರ ಜೊತೆಗೆ ಕೇವಲ 7 ರೂಪಾಯಿಯಲ್ಲಿ ವೊಡಾಫೋನ್ ಟು ವೊಡಾಫೋನ್ ಅನ್`ಲಿಮಿಟೇಡ್ ವಾಯ್ಸ್ ಕಾಲ್ ಆಫರನ್ನ ವೊಡಾಫೋನ್ ನೀಡಿದೆ. ಪ್ರೀಪೇಯ್ಡ್ ಗ್ರಾಹಕರು ಇದರ ಅನುಕೂಲತೆ ಪಡೆಯಬಹುದಾಗಿದ್ದು, ಇದೇ ಲಾಂಚ್ ಆಗಿದೆ. ಜನವರಿ9ಕ್ಕೆ ಗ್ರಾಹಕರಿಗೆ ಸಿಗಲಿದೆ.