ಉಚಿತ ಇಂಟರ್'ನೆಟ್,ಕರೆ ಮುಂತಾದ ಸೌಲಭ್ಯ ನೀಡಿದ ರಿಲಯನ್ಸ್ ಜಿಯೊ ಈಗ ಗ್ರಾಹಕರಿಗೆ ಮತ್ತೊಂದು ಸುವರ್ಣವಾಕಾಶ ಕಲ್ಪಿಸಿದೆ.

ದೇಶದ ಮೊಬೈಲ್ ಗ್ರಾಹಕರಿಗೆ 6 ತಿಂಗಳಿಗೂ ಹೆಚ್ಚು ಕಾಲ ಉಚಿತ ಇಂಟರ್'ನೆಟ್,ಕರೆ ಮುಂತಾದ ಸೌಲಭ್ಯ ನೀಡಿದ ರಿಲಯನ್ಸ್ ಜಿಯೊ ಈಗ ಗ್ರಾಹಕರಿಗೆ ಮತ್ತೊಂದು ಸುವರ್ಣವಾಕಾಶ ಕಲ್ಪಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ವಿವೊ ಸ್ಮಾರ್ಟ್'ಫೋನ್ ಹೊಂದಿರುವವರು ಮಾತ್ರ 168ಜಿಬಿ ಉಚಿತ ಇಂಟರ್'ನೆಟ್ ಪಡೆಯಲು ಅವಕಾಶವಿದೆ. ಜಿಯೊ ಹಾಗೂ ವಿವೊ ಒಟ್ಟುಗೂಡಿವಿವೊ-ಜಿಯೊ ಕ್ರಿಕೆಟ್ ಮೇನಿಯಾ ಎಂಬ ಸ್ಪರ್ಧೆ ಏರ್ಪಡಿಸಿದೆ.ಮೇ 10 ಹಾಗೂ ಅದಕ್ಕಿಂತ ಮುಂಚೆ ಈ ಸ್ಪರ್ಧೆಯಲ್ಲಿ ನೋಂದಾಯಿತರಾಗಿ ಐಪಿಎಲ್ 10ರಲ್ಲಿ ತಂಡಗಳಲ್ಲಿ ಯಾವ ತಂಡ ಅತ್ಯುತ್ತಮವಾಗಿ ಆಡಲಿದೆ ಎಂಬುದನ್ನು ನೀವು ಆಯ್ಕೆ ಮಾಡಿ ಅಂಕಗಳನ್ನು ನೀಡಬೇಕು.

ನೀವು ಈ ಮೇನಿಯದಲ್ಲಿ ಗೆದ್ದರೆ 3 ಅಥವಾ 4ಜಿಬಿ, ಡ್ರಾ ಮಾಡಿಕೊಂಡರೆ 2ಜಿಬಿ ಅಥವಾ ಸೋತರೆ 1 ಜಿಬಿ ಇಂಟರ್'ನೆಟ್ ಉಚಿತವಾಗಿ ಪಡೆಯಬಹುದು. ನೀವು ಆಯ್ಕೆ ಮಾಡುವ ಅತ್ಯುತ್ತಮ ತಂಡ ಒಂದಕ್ಕಿಂತ ಹೆಚ್ಚು ಬಾರಿ ಗೆದ್ದರೆ ನೀವು 4 ಜಿಬಿ ಡಾಟಾವನ್ನುಹೆಚ್ಚು ಬಾರಿ ಪಡೆದುಕೊಳ್ಳಬಹುದು. ಒಟ್ಟು 168 ಜಿಬಿವರೆಗೂ ಗೆಲ್ಲುವ ಅವಕಾಶವಿದೆ.

ವಿವೊ ಸ್ಮಾರ್ಟ್ ಇದ್ದವರು VJ <Space> Team Name - to 59009. ಎಸ್'ಎಂಎಸ್ ಮಾಡಿ ಸದಸ್ಯರಾಗಿ 168 ಜಿಬಿವರೆಗೂ ಇಂಟರ್'ನೆಟ್ ಉಚಿತವಾಗಿ ಪಡೆಯಿರಿ.