ರಚೆನಾಯಯ್ತು ಒಂದು ಅಪರೂಪದ ಇತಿಹಾಸ| ಇನ್ಮುಂದೆ ನೀವೂ ಹೋಗಬಹುದು ದಿಗಂತದ ಅಂಚಿಗೆ| ಭೂಮಿಯಿಂದ 51.4 ಮೈಲು ಎತ್ತರದಲ್ಲಿ ಹಾರಾಟ ನಡೆಸಿದ ಖಾಸಗಿ ವಿಮಾನ| ಇತಿಹಾಸ ನಿರ್ಮಿಸಿದ ವರ್ಜಿನ್ ಗ್ಯಾಲೆಕ್ಟಿಕ್ ವಿಮಾನಯಾನ ಸಂಸ್ಥೆ| ಪೈಲೆಟ್‌ಗಳನ್ನು ಅಭಿನಂದಿಸಿದ ಅಮೆರಿಕದ ಪೇಡರಲ್ ಏವಿಯೇಶನ್ ಇಲಾಖೆ   

ವಾಷಿಂಗ್ಟನ್(ಫೆ.08): ಇಬ್ಬರು ಸೇರಿ ಏನು ತಾನೆ ಮಾಡಿಯಾರು ಅಂತಾ ಉಡಾಫೆ ಮಾಡೋರಿಗೆ, ಅಮೆರಿಕದ ಇಬ್ಬರು ಖಾಸಗಿ ಪೈಲೆಟ್‌ಗಳು ಜವಾಬು ನೀಡಿದ್ದಾರೆ.

ಇಬ್ಬರು ಧೈರ್ಯವಂತರು ಸೇರಿಸಿದರೆ ವಿಮಾನವನ್ನು ದಿಗಂತದ ಅಂಚಿಗೆ ಕೊಂಡೊಯ್ಯಬಹುದು ಎಂಬುದನ್ನು ಈ ಪೈಲೆಟ್‌ಗಳು ಸಾಬೀತು ಮಾಡಿದ್ದಾರೆ.

Scroll to load tweet…

ಹೌದು, ಅಮೆರಿಕದ ವರ್ಜಿನ್ ಗ್ಯಾಲೆಕ್ಟಿಕ್ ಎಂಬ ಖಾಸಗಿ ವಿಮಾನಯಾನ ಸಂಸ್ಥೆಯ ಪೈಲೆಟ್‌ಗಳಾದ ಮಾರ್ಕ್ ಫೋರ್ಜರ್ ಸ್ಟಕಿ ಮತ್ತು ಸಿಜೆ ಸ್ಟ್ರಕೋವ್ ತಮ್ಮ ವಿಮಾನವನ್ನು ಭೂಮಿಯಿಂದ ಸುಮಾರು 51.4 ಮೈಲಿ ಎತ್ತರದಲ್ಲಿ ಹಾರಾಟ ನಡೆಸಿ ದಾಖಲೆ ಬರೆದಿದ್ದಾರೆ.

Scroll to load tweet…

ರಿಚರ್ಡ್ ಬ್ರ್ಯಾನ್ಸನ್ ಎಂಬುವವರು ಸ್ಥಾಪಿಸಿದ್ದ ವರ್ಜಿನ್ ಗ್ಯಾಲೆಕ್ಟಿಕ್ ಸಂಸ್ಥೆ, ಕಳೆದ 14 ವರ್ಷಗಳಿಂದ ಪ್ರಯಾಣಿಕರನ್ನು ದಿಗಂತದ ಅಂಚಿಗೆ ಕೊಂಡೊಯ್ಯಬಲ್ಲ ಸಾಮಾನ್ಯ ವಿಮಾನ ನಿರ್ಮಾಣದಲ್ಲಿ ಕಾರ್ಯೋನ್ಮುಖವಾಗಿದೆ.

Scroll to load tweet…

ಇನ್ನು ಮೊಜಾವೆ ಮರಭೂಮಿ ಮೇಲೆ ಭೂಮಿಯ ಅಂಚಿಗೆ ಹೋಗಿ ಮರಳಿ ಬಂದ ಪೈಲೆಟ್‌ಗಳಾದ ಮಾರ್ಕ್ ಫೋರ್ಜರ್ ಸ್ಟಕಿ ಮತ್ತು ಸಿಜೆ ಸ್ಟ್ರಕೋವ್ ವರಿಗೆ ಅಮೆರಿಕದ ಫೆಡರಲ್ ಏವಿಯೇಶನ್ ಇಲಾಖೆ ಪುರಸ್ಕರಿಸಿದೆ.

Scroll to load tweet…

ಅಮೆರಿಕದಲ್ಲಿ ಹಲವಾರು ಖಾಸಗಿ ವಿಮಾನಯಾನ ಸಂಸ್ಥೆಗಳು ಭೂಮಿಯ ಗುರುತ್ವ ಬಲ ದಾಟಿ ಮುನ್ನುಗ್ಗಬಲ್ಲ ವಿಮಾನ ತಯಾರಿಕೆಯಲ್ಲಿ ನಿರತವಾಗಿದ್ದು, ಪ್ರಮುಖವಾಗಿ ಎಲಾನ್ ಮಸ್ಕ್ ಸ್ಪೇಸ್ ಎಕ್ಸ್, ಬೋಯಿಂಗ್ ಮತ್ತು ಅಮೆಜಾನ್ ಮಾಲೀಕ ಜೆಫ್ ಬೆಜೋಸ್ ಅವರ ಬ್ಲೂ ಓರಿಜಿನ್ ಸಂಸ್ಥೆಗಳು ಕೂಡ ಇದರಲ್ಲಿ ಮಗ್ನವಾಗಿವೆ.