Asianet Suvarna News Asianet Suvarna News

ಏ ಗ್ಯಾಲಕ್ಸಿ, ಯಾಕಿಷ್ಟು ಜೋರು ತಿರುಗುತಿ?: ಹಬಲ್ ಕಣ್ಣಿಗೆ ಬಿತ್ತು ಬಾಹ್ಯಾಕಾಶದ ಒಡತಿ!

ಅತ್ಯಂತ ವೇಗವಾಗಿ ತಿರುಗುವ ಗ್ಯಾಲಕ್ಸಿ ಪತ್ತೆ ಹಚ್ಚಿದ ಹಬಲ್| ಊಹಿಸದಷ್ಟು ವೇಗದಲ್ಲಿ ಸುತ್ತುತ್ತಿದೆ ಯುಜಿಸಿ 12591 ಗ್ಯಾಲಕ್ಸಿ| ಪ್ರತಿ ಸೆಕೆಂಡಿಗೆ ಸುಮಾರು 480 ಕಿ.ಮೀ ವೇಗದಲ್ಲಿ ತಿರುಗುತ್ತಿರುವ ಯುಜಿಸಿ 12591| ನಮ್ಮ ಕ್ಷೀರಪಥ(ಮಿಲ್ಕಿ ವೇ)ಗ್ಯಾಲಕ್ಸಿಗಿಂತ ಎರಡು ಪಟ್ಟು ಹೆಚ್ಚು ವೇಗ| ಭೂಮಿಯಿಂದ ಸುಮಾರು 400 ಮಿಲಿಯನ್ ಜ್ಯೋತಿರ್ವರ್ಷ ದೂರ| 

UGC 12591 The Fastest Rotating Galaxy Ever Known
Author
Bengaluru, First Published Feb 20, 2020, 3:35 PM IST

ವಾಷಿಂಗ್ಟನ್(ಫೆ.20): ಇದುವರೆಗೂ ಬ್ರಹ್ಮಾಂಡದ ಸಹಸ್ರಾರು ಗ್ಯಾಲಕ್ಸಿಗಳನ್ನು ಗುರಿತಿಸಿರುವ ನಾಸಾದ ಹಬಲ್ ಬಾಹ್ಯಾಕಾಶ ಟೆಲಿಸ್ಕೋಪ್, ಇದೇ ಮೊದಲ ಬಾರಿಗೆ ಅಪರೂಪದಲ್ಲೇ ಅಪರೂಪದ ಗ್ಯಾಲ್ಸಕಿಯೊಂದನ್ನು ಪತ್ತೆ ಹಚ್ಚಿದೆ.

ಸಾವಿರಾರು ಜ್ಯೋತಿರ್ವರ್ಷದ ಸುತ್ತಳತೆ ಹೊಂದಿರುವ ಗ್ಯಾಲಕ್ಸಿಗಳು ಸಾಮಾನ್ಯವಾಗಿ ಅತ್ಯಂತ ನಿಧಾನವಾಗಿ ಸುತ್ತುತ್ತವೆ. ಆದರೆ ಹಬಲ್ ಪತ್ತೆ ಹಚ್ಚಿದ ಈ ಗ್ಯಾಲಕ್ಸಿ ಇದುವರೆಗೂ ಊಹಿಸದಷ್ಟು ವೇಗದಲ್ಲಿ ಸುತ್ತುತ್ತಿದೆ.

ತಲುಪಲಾಗದಷ್ಟು ದೂರದಲ್ಲಿದೆ ಈ ಗ್ಯಾಲಕ್ಸಿ: ವಿಶ್ವ ರಚನೆಯ ಆರಂಭದ ನಕ್ಷತ್ರಪುಂಜ!

ಹೌದು, ಹಬಲ್ ಟೆಲಿಸ್ಕೋಪ್ ಸೆರೆಹಿಡಿದ ಯುಜಿಸಿ 12591 ಗ್ಯಾಲಕ್ಸಿ ಅತ್ಯಂತ ಅಪರೂಪದ ಗ್ಯಾಲಕ್ಸಿಯಾಗಿದ್ದು, ಇದು ಪ್ರತಿ ಸೆಕೆಂಡಿಗೆ ಸುಮಾರು 480 ಕಿ.ಮೀ ವೇಗದಲ್ಲಿ ತಿರುಗುತ್ತಿದೆ.

 ಸುರುಳಿಯಾಕಾರದ ನಕ್ಷತ್ರಪುಂಜ ಧೂಳಿನ ಕಣಗಳ ಕಡಿದಾದ ದಾರಿಯಂತೆ ತೋರುತ್ತಿದ್ದು, ಪ್ರತಿ ಸೆಕೆಂಡಿಗೆ ಸುಮಾರು 480 ಕಿ.ಮೀ ವೇಗದಲ್ಲಿ ಸುತ್ತುತ್ತಿದೆ. ಇದು ನಮ್ಮ ಕ್ಷೀರಪಥ(ಮಿಲ್ಕಿ ವೇ)ಗ್ಯಾಲಕ್ಸಿಗಿಂತ ಎರಡು ಪಟ್ಟು ಹೆಚ್ಚು ವೇಗದಲ್ಲಿ ಸುತ್ತುತ್ತಿದೆ.

ಇಷ್ಟು ವೇಗವಾಗಿ ಸುತ್ತುತ್ತಿದ್ದರೂ, ಗ್ಯಾಲಕ್ಸಿಯಲ್ಲಿರುವ ನಕ್ಷತ್ರಗಳು ಹಾಗೂ ಗ್ರಹಕಾಯಗಳು ದುರುತ್ವ ಬಲ ಕಳೆದುಕೊಳ್ಳದೇ ಸ್ಥಿತ್ಯಂತರವಾಗಿರುವುದು ಖಗೋಳ ವಿಜ್ಞಾನಿಗಳ ಕುತೂಹಲ ಕೆರಳಿಸಿದೆ.

ಭೂಮಿಯಿಂದ ಸುಮಾರು 400 ಮಿಲಿಯನ್ ಜ್ಯೋತಿರ್ವರ್ಷ ದೂರದಲ್ಲಿರವ ಯುಜಿಸಿ 12591 ಗ್ಯಾಲಕ್ಸಿ, ವಿಶ್ವದಲ್ಲಿ ಇದುವರೆಗೂ ನಾವು ಗುರುತಿಸಿರುವ ಗ್ಯಾಲಕ್ಸಿಗಳಲ್ಲೇ ಅತ್ಯಂತ ವೇಗವಾಗಿ ತಿರುಗುತ್ತಿರುವ ಗ್ಯಾಲಕ್ಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ತೀವ್ರ ಚಟುವಟಿಕೆಯ ಕೇಂದ್ರ: ಹಬಲ್ ಗುರುತಿಸಿದ ವಿಶಿಷ್ಟ ಸ್ಪೈರಲ್ ಗ್ಯಾಲಕ್ಸಿ!

ನಾವು ನೋಡುತ್ತಿರುವ ಯುಜಿಸಿ 12591 ಗ್ಯಾಲಕ್ಸಿಯ ಇಂದಿನ ಬೆಳಕು ಸುಮಾರು 400 ದಶಲಕ್ಷ ವರ್ಷಗಳ ಹಿಂದಿನದ್ದಾಗಿದ್ದು, ಈ ವೇಳೆ ಭೂಮಿಯ ಮೇಲೆ ಮರಗಳು ಆಗಷ್ಟೇ ಉಗಮವಾಗುತ್ತಿದ್ದವು.

Follow Us:
Download App:
  • android
  • ios