ಉಬರ್ ನಿಂದ ನ್ಯಾನೋ ಆ್ಯಪ್: ಗಾತ್ರ ಕೇವಲ..!

technology | Tuesday, June 12th, 2018
Suvarna Web Desk
Highlights

ಉಬರ್ ನಿಂದ ಅತ್ಯಂತ ಕಡಿಮೆ ಗಾತ್ರದ  ಆ್ಯಪ್

ಕೇವಲ ೫ ಎಂಬಿ ಗಾತ್ರದ  ಆ್ಯಪ್ ಬಿಡುಗಡೆ

ಮೊದಲು ಭಾರತದಲ್ಲಿ ಬಿಡುಗಡೆಗೊಂಡ  ಆ್ಯಪ್

ನವದೆಹಲಿ(ಜೂ.12): ಉಬರ್ ಕ್ಯಾಬ್ ಸಂಸ್ಥೆ ಅತ್ಯಂತ ಕಡಿಮೆ ಗಾತ್ರದ ಆ್ಯಪ್ ವೊಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಈ ಆ್ಯಪ್ ನ್ನು ಮೊದಲು ಭಾರತದಲ್ಲೇ ಬಿಡುಗಡೆ ಮಾಡಲಿದೆ. ಸ್ಯಾನ್ ಫ್ರಾಕ್ಸಿಸ್ಕೋದಲ್ಲಿ ಕೇಂದ್ರ ಕಚೇರಿ ಹೊಂದಿರುವ ಉಬರ್ ಕ್ಯಾಬ್ ಸಂಸ್ಥೆ ಕೇವಲ 5 ಎಂಬಿಗಳಷ್ಟು ಗಾತ್ರವುಳ್ಳ ಆ್ಯಪ್ ನ್ನು ಬಿಡುಗಡೆ ಮಾಡಿದೆ. 

ಮೊದಲ ಹಂತದಲ್ಲಿ ಭಾರತದ ಆಂಡ್ರಾಯ್ಡ್ ಮೊಬೈಲ್ ಫೋನ್ ಬಳಕೆದಾರರಿಗೆ ಈ ಕಡಿಮೆ ಗಾತ್ರದ ಆ್ಯಪ್ ಲಭ್ಯವಿರಲಿದೆ. ಈ ಕುರಿತು ಮ್ಯಾಪ್, ಪ್ರಾಡಕ್ಟ್ ಹಾಗೂ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಮಾಣಿಕ್ ಗುಪ್ತ ಮಾಹಿತಿ ನೀಡಿದ್ದು, ಹಳೆಯ, ಕಡಿಮೆ ಮೆಮೊರಿ ಇರುವ ಫೋನ್ ಗಳಿಗಾಗಿಯೇ ಕಡಿಮೆ ಗಾತ್ರದ ಆ್ಯಪ್ ನ್ನು ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ. 

ಭಾರತದಲ್ಲಿ ಪ್ರಾಯೋಗಿಕವಾಗಿ ದೆಹಲಿ, ಜೈಪುರ, ಹೈದರಾಬಾದ್ ನಗರಗಳಲ್ಲಿ ಆ್ಯಪ್ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಬೇರೆ ನಗರಗಳಲ್ಲಿಯೂ ಈ ಆ್ಯಪ್ ನ್ನು ಬಿಡುಗಡೆ ಮಾಡಲಾಗುವುದು ಎಂದು ಗುಪ್ತ ತಿಳಿಸಿದ್ದಾರೆ. ಉಬರ್ ಗೆ 75 ಮಿಲಿಯನ್ ಸಕ್ರಿಯ ಗ್ರಾಹಕರಿದ್ದು, ಪ್ರತಿ ದಿನ 15 ಮಿಲಿಯನ್ ಟ್ರಿಪ್ ಗಳು ದಾಖಲಾಗುತ್ತವೆ. ಆ್ಯಪ್ ಗಳಲ್ಲಿ ಶೀಘ್ರವೇ ಎಲ್ಲಾ ಭಾಷೆಗಳನ್ನೂ ಅಳವಡಿಸಲಾಗುತ್ತದೆ ಎಂದು ಮಾಣಿಕ್ ಗುಪ್ತ ತಿಳಿಸಿದ್ದಾರೆ.

Comments 0
Add Comment

  Related Posts

  India Today Karnataka Prepoll 2018 Part 5

  video | Friday, April 13th, 2018

  Tips To Purchase Android Phone

  video | Thursday, February 22nd, 2018

  India Today Karnataka Prepoll 2018 Part 5

  video | Friday, April 13th, 2018
  nikhil vk