ಪರಿಣಾಮ ನೆಟ್ಟಗಿರಲ್ಲ: ಟ್ವಿಟರ್‌ಗೆ ಕೇಂದ್ರದ ಕೊನೇ ವಾರ್ನಿಂಗ್!

* ಹೊಸ ಐಟಿ ಕಾನೂನು ಜಾರಿಗೊಳಿಸದ ಟ್ವಿಟರ್

* ಕಾನೂನು ಜಾರಿಗೊಳಿಸದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದ ಕೇಂದ್ರ

* ಕೇಂದ್ರದಿಂದ ಟ್ವಿಟರ್‌ಗೆ ಕೊನೇ ವಾರ್ನಿಂಗ್

Twitter Given One Last Notice In Government Warning On Digital Rules pod

ನವದೆಡಹಲಿ(ಜು.05): ಟ್ವಿಟರ್‌ ಹಾಗೂ ಕೇಂದ್ರದ ನಡುವಿನ ವಿವಾದ ಕೊನೆಯಾಗುವ ಲಕ್ಷಣ ಕಾಣುತ್ತಿಲ್ಲ. ಕೇಂದ್ರ ಸರ್ಕಾರ ಮೈಕ್ರೋ ಬ್ಲಾಗಿಂಗ್ ಸೈಟ್‌ ಟ್ವಿಟರ್‌ಗೆ ಕೊನೇ ಎಚ್ಚರಿಕೆ ನೀಡಿದ್ದು, ಡಿಜಿಟಲ್ ನಿಯಮವನ್ನು ಕೂಡಲೇ ಜಾರಿಗೊಳಿಸಿ ಇಲ್ಲವಾದಲ್ಲಿ, ಪರಿಣಾಮ ನೆಟ್ಟಗಿರಲ್ಲ ಎಂದು ಖಡಕ್‌ ಆಗೇ ಹೇಳಿದೆ. 

ಇನ್ನು ಇದಕ್ಕೂ ಮುನ್ನ ಟ್ವಿಟರ್ ಇಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಸೇರಿ ಮೂವರು ಪ್ರಮುಖ ನಾಯಕರ ಟ್ವಿಟರ್ ಅಕೌಂಟ್‌ ಅನ್‌ವೆರಿಫೈಡ್‌ ಮಾಡಿತ್ತು. ಅಲ್ಲದೇ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡುರವರ ವೈಯುಕ್ತಿಕ ಖಾತೆಯಿಂದ ಬ್ಯೂ ಟಿಕ್‌ ತೆಗೆದು ಹಾಕಿತ್ತು. ಆಧರೆ ಕೆಲ ಸಮಯದ ಬಳಿಕ ವೆಂಕಯ್ಯ ನಾಯ್ಡುರವರ ಖಾತೆಯ ಬ್ಲೂ ಟಿಕ್ ಮತ್ತೆ ಹಾಕಿದೆ.

ಇನ್ನು ಮಾಹಿತಿ ಹಾಗೂ ತಂತ್ರಜ್ಞಾನ ಇಲಾಖೆಯ ಗ್ರೂಪ್ ಕಾರ್ಡಿನೇಟರ್ ರಾಕೇಶ್ ಮಹೇಶ್ವರಿ ಟ್ವಿಟರ್‌ಗೆ ಜೂನ್ದ 5 ರಂದು ಪತ್ರ ಬರೆದಿದ್ದು, ಇದರಲ್ಲಿ ಟ್ವಿಟರ್ ಹೊಸ ಕಾನೂನು ಜಾರಿಗೊಳಿಸುವ ಬಗ್ಗೆ ಟ್ವಿಟರ್ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದಿದ್ದಾರೆ. 

ಐಟಿ ನಿಯಮ ಪಾಲಿಸದ್ದಕ್ಕೆ ಬಳಕೆದಾರರ ಖಂಡನೆ

ಡಿಜಿಟಲ್ ಇಂಡಿಯಾದ ಸಂಸ್ಥಾಪಕ ಸದಸ್ಯ ಅರವಿಂದ್ ಗುಪ್ತಾ ಈ ಸಂಬಂಧ ಟ್ವೀಟ್ ಮಾಡಿದ್ದು, ಸಕ್ರಿಯರಾಗಿಲ್ಲ ಎಂದು ಖಾತೆ ಡಿವೆರಿಫೈ ಮಾಡುತ್ತದೆ. ಕೆಲವರ ಖಾತೆಯನ್ನು ಕೆಲ ದೂರುಗಳನ್ನಾಧರಿಸಿ ನಿಷ್ಕ್ರಿಯಗೊಳಿಸಲಾಗುತ್ತದೆ. ಪೂರ್ವಾಗ್ರಹಪೀಡಿತರಾಗಿ ಕಾರ್ಯ ನಿರ್ವಹಿಸುತ್ತದೆ. ಆದರೆ ಭಾರತದ ಕಾನೂನು ಮಾತ್ರ ಪಾಲಿಸುತ್ತಿಲ್ಲ ಎಂದಿದ್ದಾರೆ

Latest Videos
Follow Us:
Download App:
  • android
  • ios