Asianet Suvarna News Asianet Suvarna News

ಪೋಸ್ಟ್‌ಪೇಡ್‌ ಗ್ರಾಹಕರಿಗೆ ಕಹಿ ಸುದ್ದಿ, ಈ ಒಂದು ಯೋಜನೆಗೆ ಬ್ರೇಕ್!

ಪೋಸ್ಟ್‌ಪೇಡ್‌ ಗ್ರಾಹಕರಿಗೆ ಹೈಸ್ಪೀಡ್‌ ಇಂಟರ್ನೆಟ್‌: ಯೋಜನೆಗೆ ಬ್ರೇಕ್‌| . ಏರ್‌ಟೆಲ್‌ನ ಪ್ಲಾಟಿನಂ ಹಾಗೂ ವೊಡಾಫೋನ್‌ನ ರೆಡೆಕ್ಸ್‌ ಪ್ರೀಮಿಯಂ ಯೋಜನೆಗಳು ಟ್ರಾಯ್‌ ನಿಯಮಗಳ ಉಲ್ಲಂಘನೆ

Trai blocks Airtel Vodafone Idea premium plans on violation of service norms
Author
Bangalore, First Published Jul 14, 2020, 3:55 PM IST
  • Facebook
  • Twitter
  • Whatsapp

ನವದೆಹಲಿ(ಜು.14): ಮಾಸಿಕ 499 ರು. ಮತ್ತು ಅದಕ್ಕಿಂತ ಹೆಚ್ಚಿನ ಬಿಲ್‌ ಪಾವತಿಸುವ ಪೋಸ್ಟ್‌ಪೇಡ್‌ ಗ್ರಾಹಕರಿಗೆ ಅತಿಹೆಚ್ಚು ವೇಗದ ಇಂಟರ್ನೆಟ್‌ ಸೇವೆ ಕಲ್ಪಿಸುವ ವೊಡಾಫೋನ್‌ ಐಡಿಯಾ ಮತ್ತು ಭಾರ್ತಿ ಏರ್‌ಟೆಲ್‌ ಕ್ರಮಕ್ಕೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌) ಅಂಕುಶ ಹಾಕಿದೆ.

ಪೋಸ್ಟ್‌ಪೇಡ್‌ ಗ್ರಾಹಕರಿಗೆ ಕಹಿ ಸುದ್ದಿ, ಈ ಒಂದು ಯೋಜನೆಗೆ ಬ್ರೇಕ್!

ಏರ್‌ಟೆಲ್‌ನ ಪ್ಲಾಟಿನಂ ಹಾಗೂ ವೊಡಾಫೋನ್‌ನ ರೆಡೆಕ್ಸ್‌ ಪ್ರೀಮಿಯಂ ಯೋಜನೆಗಳು ಟ್ರಾಯ್‌ ನಿಯಮಗಳ ಉಲ್ಲಂಘನೆಯಷ್ಟೇ ಅಲ್ಲದೆ, ಇತರ ಗ್ರಾಹಕರಿಗೆ ಒದಗಿಸಲಾಗುತ್ತಿರುವ ಸೇವೆ ಮೇಲೆ ಪರಿಣಾಮ ಬೀರಲಿದೆ ಎಂದು ಟ್ರಾಯ್‌ ಹೇಳಿದೆ.

ಈ ನಡುವೆ ಟ್ರಾಯ್‌ ಆದೇಶದ ವಿರುದ್ಧ ಎರಡೂ ಕಂಪನಿಗಳು ದೂರ ಸಂಪಕ ಮೇಲ್ಮನವಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಿವೆ.

Follow Us:
Download App:
  • android
  • ios