ಭಾರತದಲ್ಲಿರುವ ಅತ್ಯಂತ ದುಬಾರಿ 5 ಬೈಕ್ ಯಾವುದು?

Top 5 most expensive bikes you can buy in India
Highlights

ನೀವು ದುಬಾರಿ ಬೈಕ್ ಕೊಳ್ಳೋ ಪ್ಲಾನ್‌ನಲ್ಲೀದ್ದೀರಾ? ಅಥವಾ ಭಾರತದಲ್ಲಿರೋ ದುಬಾರಿ ಬೈಕ್ ಯಾವುದು ಅನ್ನೋ ಕುತೂಹಲದಲ್ಲಿದ್ದೀರಾ? ಭಾರತದ ಮಾರುಕಟ್ಟೆಯಲ್ಲಿರುವ ಅತ್ಯಂತ ದುಬಾರಿ 5 ಬೈಕ್‌ಗಳ ವಿವರ.

ಬೆಂಗಳೂರು(ಜೂ.17): ಬೈಕ್ ರೈಡಿಂಗ್ ಪ್ರತಿಯೊಬ್ಬರಿಗೂ ಇಷ್ಟ. ಅದರಲ್ಲೂ ಸ್ಪೋರ್ಟ್ಸ್ ಬೈಕ್, ದುಬಾರಿ ಬೈಕ್‌ಗಳೆಂದರೆ ಎಲ್ಲಿಲ್ಲದ ಪ್ರೀತಿ. ಭಾರತದ ಮಾರುಕಟ್ಟೆಯಲ್ಲಿರೋ ಅತ್ಯಂತ ದುಬಾರಿ ಬೈಕ್ ಡಿಟೇಲ್ಸ್ ಇಲ್ಲಿದೆ.

ಕವಾಸಕಿ ನಿಂಜಾ H2R:
ಬೆಲೆ: 69.80 ಲಕ್ಷ

ಭಾರತದಲ್ಲಿರೋ ಅತ್ಯಂತ ದುಬಾರಿ ಬೈಕ್ ಕವಾಸಕಿ ನಿಂಜಾ H2R.ಇದರ ಬೆಲೆ ಬರೋಬ್ಬರಿ 69.80 ಲಕ್ಷ ರೂಪಾಯಿ. ಸದ್ಯ ಕವಾಸಕಿ ನಿಂಜಾ H2Rಗೆ ಸ್ಪರ್ಧೆ ನೀಡಬಲ್ಲ ಬೈಕ್ ಭಾರತದಲ್ಲಿಲ್ಲ. ಇದರ ಪರ್ಫಾಮೆನ್ಸ್ ಸಣ್ಣ ಕಾರಿಗೆ ಸಮವಾಗಿದೆ.

ಬಿಗ್ ಡಾಗ್ ಕೆ9 ರೆಡ್:
ಬೆಲೆ: 59 ಲಕ್ಷ

ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಬೈಕ್‌ಗಳ ಪೈಕಿ ಬಿಗ್ ಡಾಗ್ ಕೆ9 ರೆಡ್ 2ನೇ ಸ್ಥಾನದಲ್ಲಿದೆ. ಬೆಲೆ 59 ಲಕ್ಷ ರೂಪಾಯಿ. 1807 ಸಿಸಿ ಇಂಜಿನ್ ಹೊಂದಿರುವ ಕೆ9 ರೆಡ್, ಬೈಕ್ ಪ್ರೀಯರನ್ನ ಆಕರ್ಷಿಸದೇ ಇರದು.

ಡ್ಯುಕಾಟಿ 1299 ಪ್ಯಾನಿಗಾಲೆ:
ಬೆಲೆ : 51.82 ಲಕ್ಷ

ದುಬಾರಿ ಬೈಕ್‌ಗಳಲ್ಲಿ 3ನೇ ಸ್ಥಾನದಲ್ಲಿರುವ ಡ್ಯುಕಾಟಿ 1299 ಪ್ಯಾನಿಗಾಲೆ ಫೈನಲ್ ಎಡಿಶನ್ ಬೆಲೆ 51.82 ಲಕ್ಷ ರೂಪಾಯಿ. 1299 ಪ್ಯಾನಿಗಾಲೆ ಬೈಕ್1285 ಸಿಸಿ ಇಂಜಿನ ಹೊಂದಿದೆ.

MV ಆಗಸ್ಟಾ F4 Rc
ಬೆಲೆ: 50.10 ಲಕ್ಷ

ಎಮ್ ವಿ ಅಗಸ್ಟಾ ಎಫ್4 ಆರ್ ಸಿ ಬೈಕ್ 998 ಸಿಸಿ ಇಂಜಿನ್ ಹೊಂದಿದೆ. 50.10 ಲಕ್ಷ ರೂಪಾಯಿ ಬೆಲೆಬಾಳುವ ಈ ಬೈಕ್, ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಹರ್ಲೇ ಡೇವಿಡ್ಸನ್ CVO
ಬೆಲೆ: 49.99 ಲಕ್ಷ

ಭಾರತದಲ್ಲಿ ಹೆಚ್ಚು ಜನಪ್ರೀಯವಾಗಿರೋ ಹರ್ಲೆ ಡೇವಿಡ್ಸನ್ CVO ಲಿಮಿಟೆಡ್ ಎಡಿಶನ್ ಬೈಕ್ 49.99 ಲಕ್ಷ ರೂಪಾಯಿ ಬೆಲೆ ಹೊಂದಿದೆ.  ಈ ಬೈಕ್ ದುಬಾರಿ ಬೈಕ್‌ಗಳಲ್ಲಿ 5ನೇ ಸ್ಥಾನ ಪಡೆದಿದೆ.
 

loader