ಪ್ರಸಿದ್ಧ ಶೀಘ್ರ ಸಂದೇಶ ತಾಣ ವಾಟ್ಸಾಪ್ ಆಪ್ ಕೆಲ ಹಳೆಯ ವರ್ಶನ್ ಸ್ಮಾರ್ಟ್ ಫೋನ್`ಗಳಲ್ಲಿ ಕಾರ್ಯ ಸ್ಥಗಿತಗೊಳಿಸಿದೆ. ಆಂಡ್ರಾಯ್ಡ್ 2.2 FROYO ಅಥವಾ ಆಂಡ್ರ್ಯಾಯ್ಡ್ ಹಳೆಯ ವರ್ಶನ್ ಇರುವ ಸ್ಮಾರ್ಟ್ ಫೋನ್`ಗಳು. ಐಫೋನ್ 3ಜಿಎಸ್ ಅಥವಾ ಐಓಎಸ್ 6 ಮತ್ತು ಕಡಿಮೆ ವರ್ಶನ್ನಿನ ಐಓಎಸ್ ಸ್ಮಾರ್ಟ್ ಫೋನ್`ಗಳಲ್ಲಿ ಈಗಾಗಲೇ ವಾಟ್ಸಾಪ್ ತನ್ನ ಕಾರ್ಯಸ್ಥಗಿತಗೊಳಿಸಿದೆ.ಈ ಮಾದರಿಯ ಫೋನ್`ಗಳಲ್ಲಿ ವಾಟ್ಸಾಪ್ ಬಳಕೆದಾರರ ಸಂಖ್ಯೆ ಶೇ.01ರಷ್ಟಿದೆ. ಹೀಗಾಗಿ ವಾಟ್ಸಾಪ್ ಈ ನಿರ್ಧಾರಕ್ಕೆ ಬಂದಿದೆ.

ಈ ಮೇಲಿನ ವರ್ಶನ್ ಮೊಬೈಲ್`ಗಳನ್ನ ಹೊಂದಿರುವವರು ವಾಟ್ಸಾಪ್ ಬಳಕೆ ಮುಂದುವರೆಸಲು ಹೊಸ ವರ್ಶನ್ನಿನ ಮೊಬೈಲ್ ಕೊಳ್ಳುವಂತೆ ಸಂಸ್ಥೆ ಸಲಹೆ ನೀಡಿದೆ. ಈ ಹಿಂದೆ ಡಿಸೆಂಬರ್ ಅಂತ್ಯಕ್ಕೆ ಆಂಡ್ರ್ಯಾಯ್ಡ್ ಇಲ್ಲದ ಕೆಲ ಬ್ಲಾಕ್ ಬೆರ್ರಿ ಮತ್ತು ನೋಕಿಯಾ ಸೆಟ್`ಗಳಲ್ಲೂ ವಾಟ್ಸಾಪ್ ಸ್ಥಗಿತಗೊಳಿಸುವ ಸೂಚನೆ ನೀಡಿತ್ತು. ಬಳಿಕ ಜೂನ್ 30ರವರೆಗೆ ಇದನ್ನ ವಿಸ್ತರಿಸಲಾಗಿದೆ.