ಭೂಮಿಗಿಂತ 3 ಪಟ್ಟು ದೊಡ್ಡ ಗ್ರಹ: ಚೆಂದದ ನೆಲದ ಮೇಲೇಕೆ ನಾಸಾಗೆ ಮೋಹ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Jan 2019, 12:02 PM IST
Tess Discovers New Planet 3 Times The Size of Earth
Highlights

ಸೌರ ಮಂಡಲದ ಆಚೆ ಸಿಕ್ತೊಂದು ಸುಂದರ ಗ್ರಹ| ಭೂಮಿಗಿಂತ ಮೂರು ಪಟ್ಟು ದೊಡ್ಡದಿದೆ ಈ ಗ್ರಹ| ಹೊಸ ಗ್ರಹಕ್ಕೆ HD 21749b ಎಂದು ನಾಮಕರಣ| ನೂತನ ಗ್ರಹ ಶೋಧಿಸಿದ ನಾಸಾದ TESS ಟೆಲಿಸ್ಕೋಪ್

ವಾಷಿಂಗ್ಟನ್(ಜ.08): ತನ್ನದಲ್ಲದ ಜಗತ್ತನ್ನು ಕಾಣುವ ಹಂಬಲ ಮನುಷ್ಯನಿಗೆ ಮಾತ್ರ ಇರಲು ಸಾಧ್ಯ. ದೂರ ದೂರದ ನೆಲಗಳನ್ನು ಹುಡುಕಲು ಬ್ರಹ್ಮಾಂಡದಲ್ಲಿ ತಾನು ನಿರ್ಮಸಿದ ಅದ್ಭುತ ಆವಿಷ್ಕಾರಗಳನ್ನು ತೇಲಿ ಬಿಟ್ಟಿದ್ದಾನೆ.

ಅದರಂತೆ ನಾಸಾ ಹೊಸ ಗ್ರಹಗಳ ಶೋಧನೆಗೆ ಇತ್ತೀಚಿಗೆ ಹಾರಿ ಬಿಟ್ಟಿರುವ ಟ್ರಾನ್ಸಿಟಿಂಗ್ ಎಕ್ಸೋಪ್ಲ್ಯಾನೆಟ್ ಸರ್ವೆ ಸೆಟ್‌ಲೈಟ್(TESS), ಅತ್ಯಂತ ಗಮನಾರ್ಹ ಸಾಧನೆ ಮಾಡಿದೆ.

ನಮ್ಮ ಸೌರ ಮಂಡಲದ ಹೊರಗಿನ 3ನೇ ಸಣ್ಣ ಗ್ರಹವನ್ನು ಕಂಡುಹಿಡಿಯುವಲ್ಲಿ TESS ಯಶಸ್ವಿಯಾಗಿದೆ. ಹೊಸ ಗ್ರಹಕ್ಕೆ HD 21749b ಎಂದು ನಾಮಕರಣ ಮಾಡಲಾಗಿದೆ. ಈ ಗ್ರಹ ಭೂಮಿಗಿಂತ ಮೂರು ಪಟ್ಟು ದೊಡ್ಡದಿದ್ದು, ಸೌರ ಮಂಡಲದಿಂದ 53 ಜ್ಯೋತಿವರ್ಷ ದೂರ ಇರುವ ಬೃಹತ್ ನಕ್ಷತ್ರವೊಂದನ್ನು ಸುತ್ತುತ್ತಿದೆ.

ರೆಟಿಕ್ಯುಲಮ್ ನಕ್ಷತ್ರಪುಂಜದಲ್ಲಿರುವ ಪ್ರಕಾಶಮಾನವಾದ ನಕ್ಷತ್ರವನ್ನು ಸುತ್ತುತ್ತಿರುವ ಈ ಗ್ರಹ, ಅತ್ಯಂತ ದೀರ್ಘಾವಧಿ ಪರಿಭ್ರಮಣೆಯನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ ಈ ಗ್ರಹದ ಮೇಲ್ಮೆ ವಾತಾವರಣ ಸುಮಾರು 100 ಡಿಗ್ರಿ ಸೆಲ್ಸಿಯಸ್ ಇದೆ ಎಂದು ನಾಸಾ ತಿಳಿಸಿದೆ.

TESS ಟಿಲಿಸ್ಕೋಪ್ ಇದುವರೆಗೂ ಸೌರ ಮಂಡಲದ ಆಚೆ ಮೂರು ಹೊಸ ಗ್ರಹಗಳನ್ನು ಕಂಡು ಹಿಡಿದಿದ್ದು, ಸೂಪರ್ ಅರ್ಥ್ ಎಂದು ಕರೆಯಲ್ಪಡುವ Pi Mensae b ತನ್ನ ನಕ್ಷತ್ರವನ್ನು ಕೇವಲ 6.3 ದಿನಗಳಲ್ಲಿ ಪರಿಭ್ರಮಿಸುತ್ತಿದೆ.

ಅದರಂತೆ LHS 3844b ಗ್ರಹ ಕೇವಲ 11 ಗಂಟೆಯಲ್ಲಿ ತನ್ನ ನಕ್ಷತ್ರವನ್ನು ಪರಿಭ್ರಮಿಸುತ್ತಿದೆ. ಇನ್ನು ಇದೀಗ ಕಂಡು ಹಿಡಿದಿರುವ HD 21749b ಗ್ರಹ ತನ್ನ ನಕ್ಷತ್ರವನ್ನು 36 ದಿನಗಳಲ್ಲಿ ಪರಿಭ್ರಮಿಸುತ್ತಿದೆ.

loader