ಇದು ಬಡವರ ಬಾದಾಮಿ ‘ಸ್ಮಾರ್ಟ್‌ಫೋನ್‌’! ಕಡಿಮೆ ಕಾಸಿಗೆ ಲಕ್ಷುರಿ ಫೋನು

  • 16+8+2 ಮೆಗಾಫಿಕ್ಸೆಲ್‌ನ ಮೂರು ಕ್ಯಾಮೆರಾಗಳ ಜೊತೆಗೆ 32 ಮೆಗಾಪಿಕ್ಸೆಲ್‌ನ ಸೆಲ್ಫೀ ಕ್ಯಾಮೆರಾ 
  • 3500 ಎಂಎಎಚ್‌ ಬ್ಯಾಟರಿ; ಟೆಕ್ನೋ ಫ್ಯಾಂಟಮ್‌ 9; ಹದಿನೈದು ಸಾವಿರದ ಸರದಾರ
Tecno Phantom 9 Smartphone Launched Price Features

ಬೆಂಗಳೂರು (ಜು.29): ಹಾಂಗ್‌ಕಾಂಗಿನ ಟ್ರಾನ್ಸಿಷನ್‌ ಹೋಲ್ಡಿಂಗ್ಸ್‌ ಸಂಸ್ಥೆ ಟೆಕ್ನೋ ಬ್ರಾಂಡ್‌ನ ಸ್ಮಾರ್ಟ್‌ಫೋನ್‌ಗಳನ್ನು ನೀವು ಯಾರ ಕೈಯಲ್ಲಾದರೂ ನೋಡಿದ್ದೀರಾ? ಈ ಪ್ರಶ್ನೆಗೆ ಸಾಮಾನ್ಯವಾಗಿ ಇಲ್ಲ ಎಂಬ ಉತ್ತರ ಬರುತ್ತದೆ. ಆದರೆ ಭಾರತದ ಗ್ರಾಮೀಣ ಮಾರುಕಟ್ಟೆಯಲ್ಲಿ ಈ ಫೋನಿಗೆ ಒಳ್ಳೆಯ ಬೇಡಿಕೆ ಇದೆಯಂತೆ. ಹೀಗಾಗಿ ಟೆಕ್ನೋ ಮೂರು ತಿಂಗಳಿಗೊಂದು ಹೊಸ ಬ್ರಾಂಡನ್ನು ಮಾರುಕಟ್ಟೆಗೆ ಬಿಡುತ್ತಲೇ ಬಂದಿದೆ. ಇದೀಗ ಅದು 15000 ರೂಪಾಯಿಯೊಳಗಿನ ಸ್ಮಾರ್ಟ್‌ಫೋನ್‌ ಫ್ಯಾಂಟಮ್‌-9ನ್ನು ಫ್ಲಿಫ್‌ಕಾರ್ಟ್‌ ಗ್ರಾಹಕರಿಗೋಸ್ಕರ ಬಿಡುಗಡೆ ಮಾಡಿದೆ.

ಇದು ಬಡವರ ಬಾದಾಮಿ ಎಂದು ಕರೆಯಬಹುದಾದ ಸ್ಮಾರ್ಟ್‌ಫೋನ್‌. 14,999 ರೂಪಾಯಿ ಬೆಲೆಯ ಇದರಲ್ಲಿ ಇನ್‌ ಡಿಸ್‌ಪ್ಲೇ ಫಿಂಗರ್‌ ಪ್ರಿಂಟ್‌ ಸೆನ್ಸರ್‌ ಇದೆ. ಮೂರು ಕ್ಯಾಮೆರಾಗಳಿವೆ. 16+8+2 ಮೆಗಾಫಿಕ್ಸೆಲ್‌ನ ಮೂರು ಕ್ಯಾಮೆರಾಗಳ ಜೊತೆಗೆ 32 ಮೆಗಾಪಿಕ್ಸೆಲ್‌ನ ಸೆಲ್ಫೀ ಕ್ಯಾಮೆರಾ ಕೂಡ ಇದರಲ್ಲಿದೆ. ವೈಡ್‌ ಆ್ಯಂಗಲ್‌, ಡೆಪ್ತ್ ಸೆನ್ಸರ್‌ನಂಥ ಅನುಕೂಲಗಳನ್ನೂ ನೀಡಿದೆ. ಗೂಗಲ್‌ ಲೆನ್ಸ್‌ ಫೀಚರ್‌ಗಳನ್ನೂ ಇದು ಅಳವಡಿಸಿಕೊಂಡಿದೆ.

ಇದನ್ನೂ ಓದಿ | ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಅತೀ ಕಡಿಮೆ ಬೆಲೆಯ 3 ಕ್ಯಾಮೆರಾಗಳ ಫೋನ್!

ಸೆಲ್ಫೀ ಪ್ರಿಯರಿಗಾಗಿ ಎರಡು ಫ್ಲಾಷ್‌ಲೈಟ್‌ಗಳನ್ನೂ ಸೆಲ್ಫೀ ಕ್ಯಾಮೆರಾದ ಪಕ್ಕದಲ್ಲೇ ನೀಡಲಾಗಿದೆ. ಹೀಗಾಗಿ ರಾತ್ರಿ ಹೊತ್ತಲ್ಲೂ ಸೊಗಸಾದ ಫೋಟೋ ತೆಗೆಯಬಹುದು, ವಿಡಿಯೋ ಚಾಟ್‌ ಮಾಡಬಹುದು ಎಂಬಿತ್ಯಾದಿ ಆಮಿಷಗಳನ್ನೂ ಇದು ಒಡ್ಡಿದೆ.

ಸಿನಿಮಾ ನೋಡುವುದಕ್ಕೆ ಅನುಕೂಲವಾಗುವಂತೆ 6.4 ಇಂಚ್‌ ಡಿಸ್‌ಪ್ಲೇ ಜೊತೆಗೇ 91.47 ಸ್ಕ್ರೀನ್‌ ಟು ಬಾಡಿ ಅನುಪಾತವನ್ನೂ ಇದು ಹೊಂದಿದೆ. ಎಂದಿನಂತೆ ಹೀಲಿಯೋ ಪಿ35 ಮೀಡಿಯಾಟೆಕ್‌ ಪ್ರಾಸೆಸರ್‌, ಆಂಡ್ರಾಯಿಡ್‌ 9 ಆಪರೇಟಿಂಗ್‌ ಸಿಸ್ಟಮ್‌, 3500 ಎಂಎಎಚ್‌ ಬ್ಯಾಟರಿ, 1080X2340 ಸ್ಕ್ರೀನ್‌ ರೆಸಲ್ಯೂಷನ್‌ ಕೂಡ ಇದೆ. 6 ಜಿಬಿ RAM ಮತ್ತು 128 ಜಿಬಿ ಮೆಮರಿ, 4ಜಿ ವೋಲ್ಟ್  ಕನೆನ್ಟಿವಿಟಿ, ಚೆಂದದ ರೂಪು- ಎಲ್ಲವೂ ಇದೆ.

ಕಡಿಮೆ ಕಾಸಿಗೆ ಲಕ್ಷುರಿ ಫೋನು ಬೇಕು ಅನ್ನುವವರಿಗೆ ಇದು ಒಳ್ಳೆಯ ಆಯ್ಕೆ.

Latest Videos
Follow Us:
Download App:
  • android
  • ios