ಟಿಗೋರ್ ಬಿಡುಗಡೆ ಬೆನ್ನಲ್ಲೇ ಫೋರ್ಡ್ ಆಸ್ಪೈರ್‌ಗೆ ಟ್ರೋಲ್ ಮಾಡಿದ ಟಾಟಾ!

First Published 5, Oct 2018, 5:57 PM IST
Tata tigor sedan car trolls Ford Aspire before launch
Highlights

ಟಾಟಾ ಸಂಸ್ಥೆ ನೂತನ ಟಿಗೋರ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಹ್ಯುಂಡೈ ಎಕ್ಸೆಂಟ್, ಫೋರ್ಡ್ ಆಸ್ಪೈರ್ ಸೇರಿದಂತೆ ಮಿಡ್ ಸೆಡಾನ್ ಕಾರುಗಳಿಗೆ ಪೈಪೋಟಿ ನೀಡಲು ಇದೀಗ ಟಿಗೋರ್ ಬಿಡುಗಡೆಯಾಗುತ್ತಿದೆ. ಬಿಡುಗಡೆಗೂ ಮುನ್ನ ಫೋರ್ಡ್ ಆಸ್ಪೈರ್ ಕಾರಿಗೆ ಟ್ರೋಲ್ ಮಾಡೋ ಮೂಲಕ ಭಾರಿ ಸುದ್ದಿಯಾಗಿದೆ.

ಬೆಂಗಳೂರು(ಅ.05): ನೂತನ ಫೋರ್ಡ್ ಆಸ್ಪೈರ್ ಸೆಡಾನ್ ಕಾರು ಈಗಾಗಲೇ ಭಾರತದಲ್ಲಿ ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ, ಟಾಟಾ ಮೋಟಾರ್ಸ್ ಅಕ್ಟೋಬರ್ 10ಕ್ಕೆ ನೂತನ ಟಾಟಾ ಟಿಗೋರ್ ಸೆಡಾನ್ ಕಾರು ಬಿಡುಗಡೆ ಮಾಡುತ್ತಿದೆ.

ಬಿಡುಗಡೆಗೂ ಮುನ್ನ ಟಾಟಾ ಸಂಸ್ಥೆ ಪೋರ್ಡ್ ಆಸ್ಪೈರ್ ಕಾರನ್ನ ಟ್ರೋಲ್ ಮಾಡಿದೆ. ಕೇವಲ ಆಸ್ಪೈರ್ ಅಲ್ಲ, ಟಾಟಾ ಟಿಗೋರ್‌ನಿಂದ ಸ್ಪೂರ್ತಿ ಪಡೆಯಿರಿ. ಶೀಘ್ರದಲ್ಲೇ ಬಿಡುಗಡೆ ಎಂದು ಟಾಟಾ ಟ್ರೋಲ್ ಮಾಡಿದೆ.

ನೂತನ ಟಾಟಾ ಟಿಗೋರ್ ಹಲವು ವಿಶೇಷತೆಗಳನ್ನೊಳಗೊಂಡಿದೆ. ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 6.5 ಡಿಸ್‌ಪ್ಲೇ (ಟಾಟಾ ನೆಕ್ಸಾನ್ ಡಿಸ್‌ಪ್ಲೇ ಗಾತ್ರ) ಹೊಂಜಿದೆ. ಇದು ಆಪಲ್ ಕಾರ್‌ಪ್ಲೇ ಹಾಗೂ ಆಂಡ್ರಾಯಿಡ್ ಆಟೋಗೆ ಸಪೂರ್ಟ್ ಮಾಡಲಿದೆ. 

ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಹ್ಯುಂಡೈ-ಹೊಂಡಾ ಕಾರುಗಳಿಗೆ 1.5 ಲಕ್ಷ ಡಿಸ್ಕಂಟ್ ಆಫರ್!

ನೂತನ ಟಿಗೋರ್ ಕಾರಿನ ಹೊರವಿನ್ಯಾಸದಲ್ಲೂ ಕೆಲ ಬದಲಾವಣೆ ಮಾಡಲಾಗಿದೆ. ಆದರೆ ಹೆಚ್ಚಿನ ವಿವರವನ್ನ ಬಹಿರಂಗ ಪಡಿಸಿಲ್ಲ. ಟ್ವೀಕೆಡ್ ಹೆಡ್‌ಲ್ಯಾಂಪ್ಸ್ , ಮುಂಭಾಗದ ಬಂಪರ್ ಹಾಗೂ ಗ್ರಿಲ್‌ ಬದಲಾವಣೆ ಮಾಡೋ ಸಾಧ್ಯತೆ ಇದೆ. ಇಷ್ಟೇ ಅಲ್ಲ ಸುರಕ್ಷತಾ ದೃಷ್ಟಿಯಿಂದ ಬೇಸ್ ವೆರಿಯೆಂಟ್‌ಗಳಲ್ಲೂ ಏರ್‌ಬ್ಯಾಗ್ ಹಾಗೂ ಎಬಿಎಸ್ ಅಳವಡಿಸೋ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಗುಜರಾತ್ ಸರ್ಕಾರದಿಂದ ಟಾಟಾಗೆ 584 ಕೋಟಿ ಸಾಲ ಮಂಜೂರು!

ಕಾರಿನ ಇಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. 1.2 ಪೆಟ್ರೋಲ್ ಇಂಜಿನ್, 83 ಬಿಹೆಚ್‌ಪಿ ಪವರ್ ಹಾಗೂ 1.5 ಲೀಟರ್ ಡೀಸೆಲ್ ಇಂಜಿನ್ 98 ಬಿಹೆಚ್‌ಪಿ ಪವರ್ ಹೊಂದಿದೆ. 5 ಸ್ವೀಡ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ ಪೆಟ್ರೋಲ್ ಇಂಜಿನ್‌ನಲ್ಲಿ ಆಟೋ ಟ್ರಾನ್ಸ್‌ಮಿಶನ್(AMT) ಹೊಂದಿದೆ.

ಇದನ್ನೂ ಓದಿ: TVS ಜುಪಿಟರ್ ಸ್ಪೆಷಲ್ ಎಡಿಶನ್ ಸ್ಕೂಟರ್ ಬಿಡುಗಡೆ!

ನೂತನ ಟಿಗೋರ್ ಬೆಲೆ ಬಹಿರಂಗ ಪಡಿಸಿಲ್ಲ. ಆದೆರೆ ಈ ಹಿಂದೆ ಬಿಡುಗಡೆಯಾದ ಟಿಗೋರ್ ಪೆಟ್ರೋಲ್ ಬೆಲೆ 4.70 ಲಕ್ಷದಿಂದ 6.19 ಲಕ್ಷ ರೂಪಾಯಿ(ಎಕ್ಸ್ ಶೋರೂಂ)ವರೆಗೆ ಇದೆ. ಇನ್ನು ಡೀಸೆಲ್ 5.60 ರಿಂದ 7.09 ಲಕ್ಷ(ಎಕ್ಸ್ ಶೋ ರೂಂ) ವರೆಗಿದೆ. ಬಹುತೇಕ ಇದೆ ಬೆಲೆಯಲ್ಲಿ ನೂತನ ಟಿಗೋರ್ ಬಿಡುಗಡೆಯಾಗಲಿದೆ.

loader