ಬೆಂಗಳೂರು(ಅ.04): TVS ಮೋಟಾರ್ ಕಂಪೆನಿ ಹಬ್ಬದ ಪ್ರಯುಕ್ತ TVS ಜುಪಿಟರ್ ಸ್ಪೆಷಲ್ ಎಡಿಶನ್ ಸ್ಕೂಟರ್ ಬಿಡುಗಡೆ ಮಾಡಿದೆ. TVS ಜುಪಿಟರ್ ಗ್ರ್ಯಾಂಡೆ ಹೆಸರಿನ ಈ ಸ್ಕೂಟರ್ ಹಲವು ವಿಶೇಷತೆ ಒಳಗೊಂಡಿದೆ.

ಎಲ್ಇಡಿ ಲೈಟ್, ಡಿಜಿಟಲ್ ಅನಾಲಾಗ್ ಮೀಟರ್, ಡೈಮಂಡ್ ಕಟ್ ಅಲೋಯ್ ವೀಲ್ಸ್, ಹೊಂದಾಣಿಕೆ ಶಾಕ್ಸ್ ಹೆಚ್ಚುವರಿ ಫೀಚರ್ಸ್ ಹೊಂದಿದೆ. ಸ್ಪೆಷಲ್ ಎಡಿಶನ್ ಸ್ಕೂಟರ್ ಬ್ಲೂ ಹಾಗೂ ಮರೂನ್ ಬಣ್ಣದಲ್ಲಿ ಲಭ್ಯವಿದೆ. 

ಸ್ಪೆಷಲ್ ಎಡಿಶನ್ ಡ್ರಮ್ ಬ್ರೇಕ್ ವೆರಿಯೆಂಟ್ ಸ್ಕೂಟರ್ ಬೆಲೆ 55,936(ಎಕ್ಸ್ ಶೋ ರೂಂ ಹಾಗೂ ಡಿಸ್ಕ್ ಬ್ರೇಕ್ ವೆರಿಯೆಂಟ್ ಬೆಲೆ 59,648 (ಎಕ್ಸ್ ಶೋ ರೂಂ). ಇದರ ಮೈಲೇಜ್ ಪ್ರತಿ ಲೀಟರ್ ಪೆಟ್ರೋಲ್‌ಗೆ 62 ಕೀ.ಮಿ ನೀಡಲಿದೆ.

2013ರಲ್ಲಿ ಟಿವಿಎಸ್ ಜುಪಿಟರ್ ಸ್ಕೂಟರ್ ಬಿಡುಗಡೆಯಾಗಿತ್ತು. ಬಿಡುಗಡೆಯಾದ 30 ತಿಂಗಳಲ್ಲಿ 1 ಮಿಲಿಯನ್ ಸ್ಕೂಟರ್ ಮಾರಾಟವಾಗೋ ಮೂಲಕ ದಾಖಲೆ ಬರೆದಿತ್ತು. ಇದೀಗ ಸ್ಪೆಷಲ್ ಎಡಿಶನ್ ಸ್ಕೂಟರ್ ಮತ್ತೊಮ್ಮೆ ಗ್ರಾಹಕರನ್ನ ಮೋಡಿ ಮಾಡಲಿದೆ ಅನ್ನೋ ವಿಶ್ವಾಸ ಕಂಪೆನಿಯದ್ದು.