ಬೆಂಗಳೂರು(ಅ.05): ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಗಳಿಗಾಗಿ ಹ್ಯುಂಡೈ ಹಾಗೂ ಹೊಂಡಾ ಕಾರು ಭರ್ಜರಿ ಆಫರ್ ನೀಡಿದೆ. ಹ್ಯುಂಡೈ ಕಾರುಗಳಿಗೆ ಗರಿಷ್ಠ 90,000 ರೂಪಾಯಿ ರೂಪಾಯಿ ಕ್ಯಾಶ್ ಡಿಸ್ಕೌಂಟ್ ನೀಡಿದರೆ, ಹೊಂಡಾ ಬರೋಬ್ಬರಿ 1.5 ಲಕ್ಷ ರೂಪಾಯಿ ಕ್ಯಾಶ್ ಡಿಸ್ಕೌಂಟ್ ನೀಡಿದೆ. 

ಹ್ಯುಂಡೈ ಐ10 ಕಾರಿಗೆ ಗರಿಷ್ಠ ಡಿಸ್ಕೌಂಟ್ ನೀಡಿದೆ. ಕ್ಯಾಶ್ ಡಿಸ್ಕೌಂಟ್ 90,000 , 40,000 ಎಕ್ಸ್‌ಚೇಂಜ್ ಬೋನಸ್ ಹಾಗೂ 5,000 ರೂಪಾಯಿ ಹೆಚ್ಚುವರಿ ಡಿಸ್ಕೌಂಟ್ ಕೂಡ ನೀಡಿದೆ. ಈ ಮೂಲಕ ಐ10 ಕಾರಿಗೆ 1.35 ಲಕ್ಷ ಡಿಸ್ಕೌಂಟ್ ಆಫರ್ ನೀಡಿದೆ. 

ಹ್ಯುಂಡೈ ಕಾರಿನ ಡಿಸ್ಕೌಂಟ್ ಆಫರ್ ವಿವರ:

ಮಾಡೆಲ್ ಕ್ಯಾಶ್ ಡಿಸ್ಕೌಂಟ್ ಎಕ್ಸ್‌ಚೇಂಜ್ ಡಿಸ್ಕೌಂಟ್ ಹೆಚ್ಚುವರಿ ಡಿಸ್ಕೌಂಟ್
ಇಯಾನ್ 40,000 ರೂ 10,000 ರೂ -
ಗ್ರ್ಯಾಂಡ್ ಐ10 90,000 ರೂ 40,000 ರೂ 5,000 ರೂ
ಐ20 25,000 ರೂ 30,000 ರೂ 5,000 ರೂ
ವರ್ನಾ 20,000 ರೂ 20,000 ರೂ 20,000 ರೂ
ಎಲಾಂಟ್ರಾ - 25,000 ರೂ 35,000 ರೂ
ಟಕ್ಸನ್   30,000 ರೂ 50,000 ರೂ
ಎಕ್ಸೆಂಟ್ 40,000 ರೂ 45,000 ರೂ 5000 ರೂ

ಹೊಂಡಾ ಕಾರು ಸಂಸ್ಥೆ ಕೂಡ ಆಫರ್ ಮೇಲೆ ಆಫರ್ ನೀಡಿದೆ. ಹೊಂಡಾ ಸಿಆರ್‌ವಿ ಕಾರಿಗೆ ಗರಿಷ್ಠ 1.5 ಲಕ್ಷ ರೂಪಾಯಿ ಕ್ಯಾಶ್ ಡಿಸ್ಕೌಂಟ್ ನೀಡಿದೆ. ಇನ್ನು ಹೊಂಡಾ ಬ್ರಿಯೋ ಕಾರಿಗೆ 19,000 ರೂಪಾಯಿ ಕ್ಯಾಶ್ ಡಿಸ್ಕೌಂಟ್ ನೀಡಿದೆ. ಇನ್ನುಳಿದ ಹೊಂಡಾ ಕಾರುಗಳಿಗೆ ಕ್ಯಾಶ್ ಡಿಸ್ಕೌಂಟ್ ಬದಲು ಎಕ್ಸ್‌ಚೇಂಜ್ ಬೋನಸ್ ನೀಡಿದೆ.

ಹೊಂಡಾ ಕಾರಿನ ಡಿಸ್ಕೌಂಟ್ ಆಫರ್ ವಿವರ

ಮಾಡೆಲ್ ಕ್ಯಾಶ್ ಡಿಸ್ಕೌಂಟ್ ಎಕ್ಸ್‌ಚೇಂಜ್ ಡಿಸ್ಕೌಂಟ್ ಹೆಚ್ಚುವರಿ ಡಿಸ್ಕೌಂಟ್
ಬ್ರಿಯೋ 19,000 ರೂ - 1 ವರ್ಷ ಇನ್ಶೂರೆನ್ಸ್
ಹೊಂಡಾ WR-V - 32,000 ರೂ 1 ವರ್ಷ ಇನ್ಶೂರೆನ್ಸ್
ಹೊಂಡಾ ಸಿಟಿ - 62,000 ರೂ -
ಹೊಂಡಾ ಜಾಝ್   32,500 ರೂ -
ಹೊಂಡಾ BR-V   1,00,000 ರೂ -
ಹೊಂಡಾ ಅಮೇಜ್ - - -
ಹೊಂಜಾ CR-V 1,50,000 - -