150ನೇ ವರ್ಷದ ಸಂಭ್ರಮ: ಕಾರುಗಳಿಗೆ ಭಾರೀ ರಿಯಾಯಿತಿ ಘೋಷಿಸಿದ ಟಾಟಾ ಮೋಟಾರ್

Tata Motors Celebrates 150 Years Of The Tata Group With Discounts On Cars
Highlights

ಕಾರು ಕೊಳ್ಳಬೇಕು ಅಂದುಕೊಂಡ ಗ್ರಾಹಕರಿಗೆ ಟಾಟಾ ಮೋಟಾರ್ ವಿಶೇಷ ಕೊಡುಗೆ ನೀಡಿದೆ. ಟಾಟಾ ನೀಡಿರುವ ವಿಶೇಷ ಕೊಡುಗೆ ನಿಮ್ಮ ಕಾರು ಕನಸನ್ನ ನನಸಾಗಿಸಲಿದೆ. ಹಾಗಾದರೆ ಟಾಟಾ ನೀಡಿರುವ ವಿಶೇಷ ಆಫರ್ ವಿವರ ಇಲ್ಲಿದೆ.

ಬೆಂಗಳೂರು(ಜೂನ್.8) ಟಾಟಾ ಮೋಟಾರ್ 150ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಹೀಗಾಗಿ ಗ್ರಾಹಕರಿಗೆ ಬಂಬರ್ ಕೊಡುಗೆ ಘೋಷಿಸಿದೆ. ಟಾಟಾ ಕಾರು ಕೊಳ್ಳುವ ಗ್ರಾಹಕರಿಗೆ ಗರಿಷ್ಠ 1 ಲಕ್ಷ ರೂಪಾಯಿವರೆಗೆ ರಿಯಾಯಿತಿ , ಕೇವಲ 1 ರೂಪಾಯಿಗೆ ಕಾರಿನ ಇನ್ಶೂರೆನ್ಸ್ ಸೌಲಭ್ಯದ ಜೊತೆಗೆ ಎಕ್ಸ್‌ಚೇಂಜ್ ಸವಲತ್ತುಗಳನ್ನ ಟಾಟಾ ಘೋಷಿಸಿದೆ.

ಟಾಟಾದ ಯಾವುದೇ ಕಾರು ಕೊಳ್ಳುವ ಗ್ರಾಹಕರಿಗೆ ಈ ಸೌಲಭ್ಯ ಅನ್ವಯವಾಗಲಿದೆ. ಆದರೆ ಈ ಕೊಡುಗೆ ಜೂನ್ 25 ವರೆಗೆ ಮಾತ್ರ ಲಭ್ಯ. ಹೀಗಾಗಿ ಟಾಟಾ ಕಾರು ಕೊಳ್ಳುವ ಗ್ರಾಹಕರಿಗೆ ಇದು ಸೂಕ್ತ ಸಮಯ. 1 ಲಕ್ಷದ ವರೆಗೆ ರಿಯಾತಿ ಜೊತೆಗೆ ಕೇವಲ 1 ರೂಪಾಯಿಗೆ ಒಂದು ವರ್ಷದ ಇನ್ಶೂರೆನ್ಸ್‌ನಿಂದ ಟಾಟಾ ಕಾರು ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಅಗ್ರಪಾಲು ಪಡೆಯಲಿದೆ.

 

ಟಾಟಾ ಮೋಟಾರ್ ಸಂಸ್ಥೆ 150ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಇದರ ಜೊತೆಗೆ ಟಾಟಾ ಸಂಸ್ಥೆಯ ಸಂತಸ ಕೂಡ ಇಮ್ಮಡಿಗೊಂಡಿದೆ. ಕಾರಣ 2018ರಲ್ಲಿ ಟಾಟಾ ಕಾರುಗಳ ಮಾರಾಟದಲ್ಲಿ ಶೇಕಡಾ 60 ರಷ್ಟು ಏರಿಕೆಯಾಗಿದೆ. ಹೀಗಾಗಿ ಇದೀಗ ಗ್ರಾಹಕರಿಗೆ ಬಾರಿ ಕೊಡುಗೆ ನೀಡಿದೆ.

ಟಾಟಾ ಟಿಯಾಗೋ, ಟಿಗೋರ್, ನೆಕ್ಸಾನ್ ಹಾಗೂ ಹೆಕ್ಸಾನ್ ಕಾರುಗಳಿಗೆ ಸದ್ಯ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆಯಿದೆ. ಶೀಘ್ರದಲ್ಲೇ ಇನ್ನಷ್ಟು ಕಾರುಗಳನ್ನ ಟಾಟಾ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸಿದೆ.

loader