ಸುಜುಕಿ ಆಕ್ಸೆಸ್ 125 ಸ್ಪೆಷಲ್ ಎಡಿಶನ್ ಬಿಡುಗಡೆಗೆ

Suzuki Access 125 Special Edition Launched With CBS
Highlights

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಬಿಡುಗಡೆಗೊಳಿಸಿರುವ ನೂತನ ಸುಜುಕಿ ಆಕ್ಸೆಸ್ 125 ಸ್ಕೂಟರ್ ವಿಶೇಷತೆ ಏನು? ಇದರ ಬೆಲೆ ಏಷ್ಟು? ಈ ಕುರಿತ ಗ್ರಾಹಕರ ಹಲವು ಪ್ರಶ್ನೆಗೆ ಇಲ್ಲಿದೆ ಉತ್ತರ.

ಬೆಂಗಳೂರು(ಜೂನ್.11): ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಸಂಸ್ಥೆ ನೂತನ ಸುಜುಕಿ ಆಕ್ಸೆಸ್ 125 ಸ್ಪೆಷಲ್ ಎಡಿಶನ್ ಸ್ಕೂಟರ್ ಬಿಡುಗಡೆ ಮಾಡಿದೆ. ಸಿಬಿಎಸ್(ಕಂಬೈನಡ್ ಬ್ರೆಕಿಂಗ್ ಸಿಸ್ಟಮ್) ಹೊಂದಿರುವ ಸುಜುಕಿ ಆಕ್ಸೆಸ್ ಗ್ರಾಹಕರನ್ನ ಸೆಳೆಯಲು ಹಲವು ವಿಶೇಷ ಸೌಲಭ್ಯಗಳನ್ನ ನೀಡಿದೆ.

ಸುಜುಕಿ ಆಕ್ಸೆಸ್ 125 ಸ್ಕೂಟರ್ ಬೆಲೆ 59,980 ರೂಪಾಯಿ(ಎಕ್ಸ್ ಶೋ ರೂಮ್. ಆದರೆ ಸ್ಪೆಷಲ್ ಎಡಿಶನ್ ಬೆಲೆ 60,580 ರೂಪಾಯಿ.(ಎಕ್ಸ್ ಶೋ ರೂಮ್) ಸಿಲ್ವರ್, ನೀಲಿ ಸೇರಿದಂತೆ ಹಲವು ಬಣ್ಣಗಳಲ್ಲಿ ಸುಜುಕಿ ಸ್ಪೆಷಲ್ ಎಡಿಶನ್ ಲಭ್ಯವಿದೆ.

ಸ್ಕೂಟರ್ ವಿಭಾಗದಲ್ಲಿ ಸುಜುಕಿ ಆಕ್ಸೆಸ್ ಶಕ್ತಿಶಾಲಿ ಹಾಗೂ ಅತ್ಯುತ್ತಮ ಸ್ಕೂಟರ್. ಸುಜುಕಿ ಸಂಸ್ಥೆ ಬೈಕ್ ಹಾಗೂ ಸ್ಕೂಟರ್ ತಯಾರಿಕೆಯಲ್ಲಿ ಅಗ್ರಗಣ್ಯ. ಜೊತೆಗೆ ಸ್ಪೆಷಲ್ ಎಡಿಶನ್ ಸುರಕ್ಷತೆಯಲ್ಲಿ ಇತರ ಎಲ್ಲಾ ಸಂಸ್ಥೆಗಳ ಸ್ಕೂಟರ್‌ಗಿಂತ ಪರಿಣಾಮಕಾರಿಯಾಗಿದೆ ಎಂದು ಸುಜುಕಿ ಸ್ಕೂಟರ್ ಸೇಲ್ಸ್ ಹಾಗೂ ಮಾರ್ಕೆಟಿಂಗ್ ಮ್ಯಾನೇಜರ್ ಸಾಜೀವ್ ರಾಜಶೇಕರನ್ ಹೇಳಿದ್ದಾರೆ.

6 ಕಲರ್‌ಗಳಲ್ಲಿ ಸುಜುಕಿ ಆಕ್ಸೆಸ್ ಸ್ಪೆಷಲ್ ಎಡಿಶನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ನೂತನ ಸ್ಕೂಟರ್ ಗ್ರಾಹಕರಿಗೆ ಸ್ಮೂತ್ ರೈಡಿಂಗ್ ಅನುಭವ ನೀಡಲಿದೆ. ಇಷ್ಟೇ ಅಲ್ಲ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 64 ಕೀಮಿ ಮೈಲೇಜ್ ನೀಡಲಿದೆ ಎಂದು ಸುಜುಕಿ ಮೋಟಾರ್ ಸಂಸ್ಥೆ ಹೇಳಿದೆ. 
 

loader