ನವದೆಹಲಿ(ಅ.1): ಬಹು ನಿರೀಕ್ಷಿತ ಬೃಹತ್ ಟೆಲಿಕಾಂ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ಮುಂದುವರಿದಿದ್ದು, ಮೊದಲನೇ ದಿನವೇ . 55,000 ಕೋಟಿ ಸಂಗ್ರಹವಾಗಿದೆ ಎಂದು ಮೂಲಗಳು ತಿಳಿಸಿವೆ. ಬಹುತೇಕ ಶೇ. 90ರಷ್ಟುಹರಾಜುಗಳು ನಾಲ್ಕನೇ ಹಂತಕ್ಕೆ ತಲುಪಿದ್ದವು ಎಂದು ‘ಬಿಸಿನೆಸ್ ಲೈನ್’ ವರದಿ ಮಾಡಿದೆ. ದಿನದ ಅಂತ್ಯದ ವೇಳೆಗೆ ನಾಲ್ಕನೆ ಹಂತದಲ್ಲಿ ಕೊನೆಯಲ್ಲಿ 2,300 ಮೆಗಾಹಟ್ಸ್‌ರ್ ಬ್ಯಾಂಡ್ ಸಂಪೂರ್ಣ ಮಾರಾಟವಾಗಿದೆ ಎಂದು ಮೂಲಗಳು ತಿಳಿಸಿವೆ.
ಬಹುತೇಕ ಬಿಡ್ಡಿಂಗ್‌ಗಳು 1,800 ಮೆಗಾಹಟ್ಸ್‌ರ್ ಮತ್ತು 2,300 ಮೆಗಾಹಟ್ಸ್‌ರ್ ಬ್ಯಾಂಡ್ ಕೇಂದ್ರಿತವಾಗಿದ್ದವು. 2100 ಮೆಗಾಹಟ್ಸ್‌ರ್, 2300 ಮೆಗಾಹಟ್ಸ್‌ರ್ ಮತ್ತು 2500 ಮೆಗಾಹಟ್ಸ್‌ರ್ ಬ್ಯಾಂಡ್‌ಗಳ ಕುರಿತ ಪ್ರಕ್ರಿಯೆಯ ಚಟುವಟಿಕೆಗಳು ನಡೆದಿವೆ. 1,800 ಮೆಗಾಹಟ್ಸ್‌ರ್ ಬ್ಯಾಂಡ್ ಕುರಿತಂತೆ ಚಟುವಟಿಕೆ ತೀವ್ರವಾಗಿತ್ತು. ಆದರೆ 700 ಮೆಗಾಹಟ್ಸ್‌ರ್ ಬ್ಯಾಂಡ್ ಕುರಿತಂತೆ ಯಾವುದೇ ಚಟುವಟಿಕೆಗಳು ನಡೆದಿಲ್ಲ ಎಂದು ಉದ್ಯಮ ಮೂಲಗಳು ಹೇಳಿವೆ.
1,800 ಮೆಗಾಹಟ್ಸ್‌ರ್ ಬ್ಯಾಂಡ್ ಕುರಿತ ಚಟುವಟಿಕೆ ಗರಿಷ್ಠ ಪ್ರಮಾಣದಲ್ಲಿ ನಡೆದಿದ್ದು, ವಿಶೇಷವಾಗಿ ಮುಂಬೈ ವಲಯದಲ್ಲಿ ಇದು ತೀವ್ರಗೊಂಡಿದೆ. 2,100 ಮೆಗಾಹಟ್ಸ್‌ರ್ ಬ್ಯಾಂಡ್‌ಗೆ 10 ಬಿಡ್‌ಗಳು ನಡೆದಿವೆ.
