Asianet Suvarna News Asianet Suvarna News

Space Jellyfish: ಆಕಾಶದಲ್ಲಿ ಬೆರಗುಗೊಳಿಸುವ ದೃಶ್ಯ ಕಂಡ ಫ್ಲೋರಿಡಾ ನಿವಾಸಿಗಳು: ಏನಿದು ಚಮತ್ಕಾರ?

"ಸ್ಪೇಸ್ ಜೆಲ್ಲಿಫಿಶ್" ಎಂಬುದು ಮೂಲಭೂತವಾಗಿ ಬೆಳಗುವ ಅನಿಲಗಳ ಮೋಡವಾಗಿದೆ, ಇದು ಸೂರ್ಯೋದಯದ ಮುಂಚೆ ಕತ್ತಲೆಯ ವಿರುದ್ಧ ಗಮನಾರ್ಹವಾಗಿ ಗೋಚರಿಸುತ್ತದೆ. ಸ್ಪೇಸ್‌ಎಕ್ಸ್‌ನ ಫಾಲ್ಕನ್ ಸೂರ್ಯೋದಯಕ್ಕೆ ಮುನ್ನ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ 53 ಇಂಟರ್ನೆಟ್ ಉಪಗ್ರಹಗಳನ್ನು ಉಡಾವಣೆ ಮಾಡಿದ್ದು ಈ ಚಮತ್ಕಾರದ ಕಾರಣವಾಗಿದೆ. 

Space Jellyfish Lights Up The Florida Sky Courtesy to SpaceX satellites  mnj
Author
Bengaluru, First Published May 7, 2022, 2:49 PM IST

Space Jellyfish: ಶುಕ್ರವಾರದಂದು ಸ್ಪೇಸ್‌ಎಕ್ಸ್‌ನ ಫಾಲ್ಕನ್ ರಾಕೆಟ್ ಸೂರ್ಯೋದಯಕ್ಕೆ ಮುನ್ನ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ 53 ಇಂಟರ್ನೆಟ್ ಉಪಗ್ರಹಗಳನ್ನು ಉಡಾವಣೆ ಮಾಡಿದ್ದು, ಫ್ಲೋರಿಡಾದ ನಿವಾಸಿಗಳಿಗೆ ಆಕಾಶದಲ್ಲಿ ಬೆರಗುಗೊಳಿಸುವ ದೃಶ್ಯವೊಂದು ಕಂಡಿದೆ.  ಈ ಉಡಾವಣೆಯು "ಸ್ಪೇಸ್ ಜೆಲ್ಲಿಫಿಶ್" (space ಝellyfish) ಎಂದು ಕರೆಯಲ್ಪಡುವ ಪರಿಣಾಮವನ್ನು ಸೃಷ್ಟಿಸಿದೆ. 

ಸ್ಪೇಸ್‌ಎಕ್ಸ್ ಫ್ಲೋರಿಡಾದ ಕರಾವಳಿಯಲ್ಲಿ ಸ್ಟಾರ್‌ಲಿಂಕ್ಸ್ ಎಂದು ಕರೆಯಲ್ಪಡುವ 53 ಇಂಟರ್ನೆಟ್ ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಉಡಾವಣೆಗೆ ಕೆಲವೇ ಗಂಟೆಗಳ ಮೊದಲು, ಎಲೋನ್ ಮಸ್ಕ್ ಸ್ಥಾಪಿಸಿದ ಕಂಪನಿಯ ನಾಲ್ವರು ಗಗನಯಾತ್ರಿಗಳು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸುಮಾರು ಆರು ತಿಂಗಳ ಕಾಲ ಕಳೆದ ಬಳಿಕ ಭೂಮಿಗೆ ಮರಳಿದ್ದಾರೆ. ಸ್ಪೇಸ್‌ಎಕ್ಸ್‌ಗಾಗಿ ಈ ಬಿಡುವಿಲ್ಲದ ದಿನದ ನಡುವೆ, "ಸ್ಪೇಸ್ ಜೆಲ್ಲಿಫಿಶ್" ಎಂಬ ದೃಶ್ಯ ವಿದ್ಯಮಾನವು ಹಲವಾರು ಫ್ಲೋರಿಡಾ ನಿವಾಸಿಗಳನ್ನು ಬೆರಗುಗೊಳಿಸಿದೆ.

"ಸ್ಪೇಸ್ ಜೆಲ್ಲಿಫಿಶ್" ಎಂಬುದು ಮೂಲಭೂತವಾಗಿ ಬೆಳಗುವ ಅನಿಲಗಳ ಮೋಡವಾಗಿದೆ, ಇದು ಸೂರ್ಯೋದಯದ ಮುಂಚೆ ಕತ್ತಲೆಯ ವಿರುದ್ಧ ಗಮನಾರ್ಹವಾಗಿ ಗೋಚರಿಸುತ್ತದೆ.  ಈ ಬೆರಗುಗೊಳಿಸುವ ವಿದ್ಯಮಾನಗಳನ್ನು ವೀಕ್ಷಕರು ವೀಡಿಯೊಗಳು ಮತ್ತು ಚಿತ್ರಗಳಲ್ಲಿ ಸೆರೆಹಿಡಿದಿದ್ದಾರೆ. ಹಲವು ಬಳಕೆದಾರರು ಸಾಮಾಜಿಕ ಜಾಲಾತಾಣಗಳಲ್ಲಿ ಇದನ್ನು ಹಂಚಿಕೊಂಡಿದ್ದಾರೆ. 

 

 

"ಮೂಲತಃ ಏನಾಗುತ್ತಿದೆ ಎಂದರೆ, ಇನ್ನೂ ಹೊರಗೆ ಕತ್ತಲೆಯಾಗಿದೆ, ಆದರೆ ಬಾಹ್ಯಾಕಾಶದಲ್ಲಿರುವ ನಿಷ್ಕಾಸವನ್ನು ಸೂರ್ಯ ಬೆಳಕು   ಬೆಳಗಿಸಿದಾಗ ಈ ರೀತಿಯಾಗುತ್ತದೆ" ಎಂದು ಸ್ಪೇಸ್‌ಎಕ್ಸ್ ಅಧಿಕಾರಿ ಜೆಸ್ಸಿಕಾ ಜೆನ್ಸನ್ ಹೇಳಿದ್ದಾರೆ ಎಂದು ಫಾಕ್ಸ್ ನ್ಯೂಸ್‌ ವರದಿ ಮಾಡಿದೆ.  "ಇದನ್ನು ನಾನು ಬಾಹ್ಯಾಕಾಶ ಜೆಲ್ಲಿ ಫಿಶ್ ಎಂದು ಉಲ್ಲೇಖಿಸಲು ಇಷ್ಟಪಡುತ್ತೇನೆ" ಎಂದು ಅವರು ಹೇಳಿದ್ದಾರೆ. 

 

 

Follow Us:
Download App:
  • android
  • ios