ಸಾಮಾಜಿಕ ಆಡಿಯೊ ಅಪ್ಲಿಕೇಶನ್ ಕ್ಲಬ್‌ ಹೌಸ್ "ವೈಲ್ಡ್ ಕಾರ್ಡ್ಸ್" ಎಂಬ ಆಟವನ್ನು ಹೊರತಂದಿದೆ, ಇದು‌ ಕೇಳುಗರ ನುಡವೆ ಸಂಭಾಷಣೆಗಳನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾದ ಪ್ರಶ್ನೆಗಳ ಸರಣಿಯನ್ನು ಪ್ರಸ್ತುತಪಡಿಸುತ್ತದೆ.

Clubhouse Gaming: ಕೋವಿಡ್‌ ಸಮಯದಲ್ಲಿ ಮುನ್ನೆಲೆಗೆ ಬಂದಿದ್ದ ಕ್ಲಬ್‌ ಹೌಸ್‌ ಆ್ಯಪ್‌ (Club House)ಈಗ ಹೊಸ ವೈಶಿಷ್ಟ್ಯವೊಂದನ್ನು ಬಿಡುಗಡೆ ಮಾಡಲಿದೆ ಎಂದು ವರದಿಗಳು ಸೂಚಿಸಿವೆ. ಐಓಎಸ್ (iOS) ಮತ್ತು ಆ್ಯಂಡ್ರಾಯ್ಡ್ (Android) ಸಾಧನಗಳಲ್ಲಿ ಕ್ಲಬ್‌ಹೌಸ್ ಹೊಸ ಇನ್-ರೂಮ್ ಗೇಮಿಂಗ್ ವೈಶಿಷ್ಟ್ಯ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದ್ದು ಸದ್ಯಕ್ಕೆ ಹೊಸ ಫೀಚರನ್ನು ಪರೀಕ್ಷಿಸುತ್ತಿದೆ ಎಂದು ಟೆಕ್‌ಕ್ರಂಚ್‌ (TechCrunch) ವರದಿ ಮಾಡಿದೆ.

"ವೈಲ್ಡ್ ಕಾರ್ಡ್ಸ್" (Wild Cards) ಎಂಬ ಆಟದ ಬಿಡುಗಡೆ‌ ಬಗ್ಗೆ ಸಾಮಾಜಿಕ ಆಡಿಯೊ ಅಪ್ಲಿಕೇಶನ್ ಕ್ಲಬ್‌ ಹೌಸ್ ಮಾಹಿತಿ ನೀಡಿದೆ. ಇದು ಜನರು ಅಪ್ಲಿಕೇಶನಲ್ಲಿ ಪರಸ್ಪರ ಬೆರೆಯುವಲ್ಲಿ ಹಾಗೂ ಕೇಳುಗರ ಮಧ್ಯೆ ಇನ್ನಷ್ಟು ಸಂಭಾಷಣೆಗಳನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾದ ಪ್ರಶ್ನೆಗಳ ಸರಣಿಯನ್ನು ಪ್ರಸ್ತುತಪಡಿಸುತ್ತದೆ. 

ಬಳಸುವುದು ಹೇಗೆ?: ಅಪ್ಲಿಕೇಶನ್‌ನ ಡೀಫಾಲ್ಟ್ ಪೇಜ್‌ನಲ್ಲಿರುವ “+ Start a room” ಬಟನ್ ಕ್ಲಿಕ್ ಮಾಡುವ ಮೂಲಕ ಕ್ಲಬ್‌ಹೌಸ್‌ನಲ್ಲಿ ಆಟವನ್ನು ಪ್ರಾರಂಭಿಸಬಹುದು. ಇದರ ನಂತರ, "Games" ಕ್ಲಿಕ್ ಮಾಡಬೇಕು. ಅಪ್ಲಿಕೇಶನ್‌ನಲ್ಲಿ ವೈಲ್ಡ್ ಕಾರ್ಡ್ಸ್ ಪ್ರಸ್ತುತ ಲಭ್ಯವಿರುವ ಏಕೈಕ ಆಟವಾಗಿರುವುದರಿಂದ, ನಿಮಗೆ ಆ ಆಯ್ಕೆಯನ್ನು ಮಾತ್ರ ನೀಡಲಾಗುತ್ತದೆ.

ಇದನ್ನೂ ಓದಿ:WhatsApp Latest Feature: ಲಾಸ್ಟ್‌ ಸೀನ್‌, ಪ್ರೊಫೈಲ್‌ ಫೋಟೋ ಹೈಡ್‌ ಮಾಡಲು ಬರ್ತಿದೆ ಜಬರದಸ್ತ್‌ ಫೀಚರ್‌

ವೈಲ್ಡ್ ಕಾರ್ಡ್ಸ್‌ ಆಯ್ಕೆ ನಂತರ, ನಿಮ್ಮನ್ನು ಬೇರೆ ಸ್ಕ್ರೀನ್‌ಗೆ ಕರೆದೊಯ್ಯಲಾಗುತ್ತದೆ ಅಲ್ಲಿ ನಿಮಗೆ "Start Room" ಬಟನ್‌ನೊಂದಿಗೆ ಪ್ರಾಂಪ್ಟ್ ಮಾಡಲಾಗುತ್ತದೆ. ಒಮ್ಮೆ ನೀವು ಅದರ ಮೇಲೆ ಕ್ಲಿಕ್ ಮಾಡಿದರೆ, ಹೊಸ ರೂಮ್‌ ತೆರೆದುಕೊಳ್ಳುತ್ತದೆ. ಬಳಿಕ ನೀವು ಹೆಚ್ಚಿನ ಜನರನ್ನು ಸೇರಿಸಲು ಮತ್ತು ಅವರೊಂದಿಗೆ ಆಟವನ್ನು ಆಡಲು ಸಾಧ್ಯವಾಗುತ್ತದೆ. 

ಗೇಮ್‌ ಏನು?: ಟೆಕ್‌ಕ್ರಂಚ್ ವರದಿ ಪ್ರಕಾರ, ಕ್ಲಬ್‌ಹೌಸ್ ಆಟದ ಸಮಯದಲ್ಲಿ ಪ್ರಶ್ನೆಗಳ ಪಟ್ಟಿಯನ್ನು ಒದಗಿಸುತ್ತದೆ. 60 ಸೆಕೆಂಡುಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಹೊಸ ಚಲನಚಿತ್ರ ಅಥವಾ ಸಿರೀಸ್‌ ಬಗ್ಗೆ ನಿಮ್ಮ ಕಲ್ಪನೆಯ ಐಡಿಯಾ ಪಿಚ್ ಮಾಡಲು ನಿಮ್ಮನ್ನು ಕೇಳಬಹುದು. ಅಥವಾ, ಮೂರು ನಿಮಿಷ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಇಡೀ ಗುಂಪು ಇಷ್ಟಪಡುವ ಚಲನಚಿತ್ರವನ್ನು ಹುಡುಕಲು ಪ್ರಯತ್ನಿಸಲು ನಿಮ್ಮನ್ನು ಕೇಳಬಹುದು. 

ಅತವಾ ನಿಮ್ಮ‌ ಸರ್ಚ್ ಹಿಸ್ಟರಿಯಲ್ಲಿರುವ ಕೊನೆಯ ಐದು ವಿಷಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಅಥವಾ ನಿಮ್ಮ ವ್ಯಕ್ತಿತ್ವಕ್ಕೆ ಯಾವ ರೀತಿಯ ನಾಯಿ ಹೊಂದಾಣಿಕೆಯಾಗುತ್ತದೆ ಎಂಬುದನ್ನು ವಿವರಿಸಲು ಕೇಳಬಹುದು. ಈ ರೀತಿ ಕುತೂಹಲ ಕೆರಳಿಸವ ಪ್ರಶ್ನೆಗಳನ್ನು ಕೇಳಬಹುದು ಎಂದು ವರದಿ ಸೂಚಿಸಿದೆ. ಸಾಮಾನ್ಯ ಬಳಕೆದಾರರಿಗೆ ಈ ವೈಶಿಷ್ಟ್ಯ ಬಿಡುಗಡೆಯಾದ ಬಳಿಕವೇ ಈ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳಲಿದೆ. 

ಕ್ಲಬ್‌ಹೌಸ್ ಜನಪ್ರಿಯತೆ: ಕೋವಿಡ್ ಸಮಯದಲ್ಲಿ ಕ್ಲಬ್‌ಹೌಸ್ ನಂಬಲಾಗದಷ್ಟು ಜನಪ್ರಿಯತೆಯನ್ನು ಪಡೆದಿತ್ತು. ಕೊರೋನಾ ನಿರ್ಬಂಧಗಳಿಂದಾಗಿ ಒಂಟಿತನ ಕಾಡುತ್ತಿದ್ದ ಜನಸಾಮನ್ಯರಿಗೆ ಕ್ಲಬ್‌ಹೌಸ್ ವಿಚಾರ ವಿನಿಮಯಕ್ಕೆ ಅವಕಾಶ ನೀಡಿತ್ತು. ಜಗತ್ತಿನಾದ್ಯಂತ ಈಗ ಕೋವಿಡ್ ನಿರ್ಬಂಧಗಳನ್ನು ಈಗ ಸಡಿಲಗೊಂಡಿವೆ. 

ಇದನ್ನೂ ಓದಿWhatsApp Communities ಎಂದರೇನು?: ಹೇಗೆ ಕೆಲಸ ಮಾಡುತ್ತೆ ಈ ಹೊಸ ಫೀಚರ್?

ಹೀಗಾಗಿ ಕ್ಲಬ್‌ಹೌಸ್‌ನಲ್ಲಿ ಹೊಸತರಲ್ಲಿದ್ದ ಉತ್ಸಾಹ ಈಗಿಲ್ಲ. ಆದರೆ ಈ ಹೊಸ ಗೇಮ್‌ಗಳ ವೈಶಿಷ್ಟ್ಯವು ಅಪ್ಲಿಕೇಶನ್ ಆರಂಭದಲ್ಲಿ ಹೊಂದಿದ್ದ ಬಳಕೆದಾರರ ನೆಲೆಯನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ತೋರುತ್ತದೆ.

ಕ್ಲಬ್‌ಹೌಸ್‌ ಡಾರ್ಕ್ ಮೋಡ್: ಬಳಕೆದಾರರಿಂದ ಅನೇಕ ವಿನಂತಿಗಳ ನಂತರ, ಕ್ಲಬ್‌ಹೌಸ್ ಅಂತಿಮವಾಗಿ ಏಪ್ರಿಲ್ 12 ರಂದು ಅಪ್ಲಿಕೇಶನ್‌ಗಾಗಿ ಡಾರ್ಕ್ ಮೋಡನ್ನು ಸಹ ಪರಿಚಯಿಸಿದೆ. ಬಳಕೆದಾರರು "Always Dark Mode" ಅಥವಾ "User Device Settings" ನಡುವೆ ಆಯ್ಕೆ ಮಾಡಬಹುದಾಗಿದೆ. 

User Device Settings ಆಯ್ಕೆ ಮಾಡುವುದರಿಂದ ಅಪ್ಲಿಕೇಶನ್‌ನ ಮೋಡ್ ಬಳಕೆದಾರರ ಸಾಧನದ ಮೋಡ್‌ಗೆ ಹೊಂದಿಕೆಯಾಗುತ್ತದೆ ಅಂದರೆ, ಬಳಕೆದಾರರ ಸಾಧನವು ಡಾರ್ಕ್ ಮೋಡ್‌ನಲ್ಲಿದ್ದರೆ, ಅಪ್ಲಿಕೇಶನ್ ಸ್ವಯಂಚಾಲಿತವಾಗಿ ಡಾರ್ಕ್‌ ಮೋಡ್‌ ಆನ್‌ ಆಗುತ್ತದೆ. 

ಇನ್ನು ಏಪ್ರಿಲ್ 7 ರಂದು, ಸಾಮಾಜಿಕ ಮಾಧ್ಯಮ ಕಂಪನಿಯು ಹೆಡ್-ರಿಲೇಟೆಡ್ ಟ್ರಾನ್ಸ್‌ಫರ್ ಫಂಕ್ಷನ್ (HRTF) ತಂತ್ರಜ್ಞಾನವನ್ನು ಬಳಸಿಕೊಂಡು ಅಪ್ಲಿಕೇಶನ್‌ಗೆ ಸ್ಪೇಷಿಯಲ್ ಆಡಿಯೊವನ್ನು ಪರಿಚಯಿಸುತ್ತಿದೆ ಎಂದು ಘೋಷಿಸಿದೆ. ಈ ವೈಶಿಷ್ಟ್ಯದಲ್ಲಿ ನಿರ್ದಿಷ್ಟ ಜಾಗದಿಂದ ಆಡಿಯೋ ಬರುವಂತೆ ಸಿಗ್ನಲ್‌ಗಳನ್ನು ಪ್ರಕ್ರಿಯೆಗೊಳಿಸುತ್ತದೆ. ಈ ವೈಶಿಷ್ಟ್ಯದ ಹೆಚ್ಚಿನ ಮಾಹಿತಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.