ಭಾರತದ ಮೊಬೈಲ್ ಸೇವಾ ಕ್ಷೇತ್ರಕ್ಕೆ ರಿಲಾಯನ್ಸ್ ಜಿಯೋ ಭರ್ಜರಿ ಎಂಟ್ರಿ ಕೊಟ್ಟಿದೆ. ಕೋಟ್ಯಂತರ ಜಿಯೋ ಸಿಮ್'ಗಳು ಮಾರಾಟವಾಗಿವೆ. ವರ್ಷಗಟ್ಟಲೆ ಉಚಿತ ಡೇಟಾದ ಕೊಡುವ ಜಿಯೋದ ಆಫರ್'ಗಳಿಗೆ ಜನರು ಮಾರುಹೋಗಿದ್ದಾರೆ. ಆದರೆ, ಗ್ರಾಹಕರ ಸಂಖ್ಯೆ ಹೆಚ್ಚಾದಂತೆ ಜಿಯೋದ ನೆಟ್ವರ್ಕ್ ಸಮಸ್ಯೆ ಕಾಡುತ್ತಿರುವ ಪ್ರಕರಣಗಳು ಹೆಚ್ಚಿವೆ. ಜಿಯೋ ಹೇಳಿಕೊಂಡಂಥ ಸ್ಪೀಡು ಸಿಗುತ್ತಿಲ್ಲವೆಂಬ ದೂರುಗಳು ಬರುತ್ತಿವೆ. ಜಿಯೋದ ಸ್ಪೀಡು ಹೆಚ್ಚಿಸುವ ಅನೇಕ ವಿಧಾನಗಳು, ಟ್ರಿಕ್'ಗಳು ಎಲ್ಲೆಡೆ ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಬಹಳ ಸರಳವಾದ ಉಪಾಯವೊಂದನ್ನು ಆರಿಸಿ ಇಲ್ಲಿ ನೀಡಿದ್ದೇವೆ.

ಎಪಿಎನ್ ಸೆಟಿಂಗ್'ನಲ್ಲಿ ಕೆಲ ಬದಲಾವಣೆ ಮಾಡುವ ಮೂಲಕ ಜಿಯೋ ಸ್ಪೀಡನ್ನು ಹೆಚ್ಚಿಸಬಹುದಾಗಿದೆ. ಇದರ ವಿಧಾನ ಇಲ್ಲಿದೆ.

1) ಮೊಬೈಲ್'ನಲ್ಲಿ "ಸೆಟಿಂಗ್ಸ್" ಒತ್ತಿರಿ. ಬಳಿಕ "ಸೆಲೂಲಾರ್ ನೆಟ್ವರ್ಕ್ಸ್" ಅಥವಾ "ಮೊಬೈಲ್ ನೆಟ್ವರ್ಕ್ಸ್"ಗೆ ಹೋಗಿರಿ. ನಂತರ, "ಅಕ್ಸೆಸ್ ಪಾಯಿಂಟ್ ನೇಮ್ಸ್" ಒತ್ತಿರಿ.

2) ಅಲ್ಲಿ ನಿಮಗೆ "ಜಿಯೋ 4ಜಿ" ಎಂಬ ಪ್ರೊಫೈಲ್ ಕಾಣುತ್ತದೆ. ಅದನ್ನು ಒತ್ತಿದರೆ ಹಲವು ಸೆಟಿಂಗ್'ಗಳು ಪ್ರತ್ಯಕ್ಷವಾಗುತ್ತವೆ. ಅಷ್ಟು ಸೆಟ್ಟಿಂಗ್'ಗಳ ಪೈಕಿ ಈ ಕೆಳಕಂಡವನ್ನು ಮಾತ್ರ ಬದಲಿಸಿರಿ.

* ಸರ್ವರ್: www.google.com
* ಅಥೆಂಟಿಕೇಶನ್ ಟೈಪ್: None
* ಎಪಿಎನ್ ಟೈಪ್: ಡೀಫಾಲ್ಟ್
* ಬೇರರ್: LTE

3) ಇದಾದ ನಂತರ ಸೆಟಿಂಗ್ಸ್ ಸೇವ್ ಮಾಡಿರಿ. ನಂತರ ಮತ್ತೊಮ್ಮೆ ಪ್ರೊಫೈಲ್ ಆಯ್ಕೆ ಮಾಡಿರಿ.