ಸ್ವಲ್ಪ ತಡ್ಕಳ್ಳಿ: ನಾಸಾ ಏಲಿಯನ್ ತೋರಿಸುತ್ತೆ ನೋಡ್ಕಳ್ಳಿ!
ಶೀಘ್ರದಲ್ಲೇ ಏಲಿಯನ್ ಜಗತ್ತಿನ ಅನ್ವೇಷಣೆಯಾಗಲಿದೆಯಂತೆ| ನಾಸಾದ ಸಂಶೋಧನಾ ವರದಿಯಲ್ಲೇನಿದೆ ಗೊತ್ತಾ? ಮತ್ತೊಂದು ಜೀವ ಜಗತ್ತಿನ ಇರುವಿಕೆಯ ಕುರುಹು ಶೀಘ್ರದಲ್ಲೇ ಸಿಗಲಿದೆ|
ವಾಷಿಂಗ್ಟನ್(ಫೆ.13): ಬ್ರಹ್ಮಾಂಡದಲ್ಲಿ ನಾವೋಬ್ಬರೇ ಇದ್ದೀವಲ್ಲ ಅನ್ನೋ ಏಕಾಂಗಿತನ ನಿಮ್ಮನ್ನು ಕಾಡುತ್ತಿದ್ದಯೇ?. ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ಈ ಒಂಟಿತನ ದೂರವಾಗಲಿದೆ.
ಹೌದು, ಬ್ರಹ್ಮಾಂಡದ ಅಧ್ಯಯನದಲ್ಲಿ ನಿರತವಾಗಿರುವ ನಾಸಾ, ಇನ್ನು ಕೆಲವೇ ವರ್ಷಗಳಲ್ಲಿ ಏಲಿಯನ್ ಜಗತ್ತನ್ನು ಕಂಡು ಹಿಡಿಯಲಿರುವುದಾಗಿ ಮೂಲಗಳು ತಿಳಿಸಿವೆ.
ನಾಸಾದ ಗೊಡ್ಡಾರ್ಡ್ ಸ್ಪೇಸ್ ಸ್ಟಡೀಸ್ ಬಿಡುಗಡೆ ಮಾಡಿರುವ ಬಯೊಸಿಗ್ನೇಚರ್ ಫಾಲ್ಸ್ ಪಾಸಿಟಿವ್ಸ್ ಸಂಶೋಧನಾ ವರದಿಯಲ್ಲಿ ಈ ಅಚ್ಚರಿಯ ಅಂಶ ಬಯಲಾಗಿದ್ದು, ಕೆಲವೇ ವರ್ಷಗಳಲ್ಲಿ ಮತ್ತೊಂದು ಜೀವ ಜಗತ್ತಿನ ಇರುವಿಕೆಯನ್ನು ದೃಢೀಕರಿಸಲಾಗುವುದು ಎನ್ನಲಾಗಿದೆ.
ನಮ್ಮ ಸೌರಮಂಡಲದಲ್ಲಿ ಭೂಮಿಯನ್ನು ಹೊರತುಪಡಿಸಿದರೆ ಮಂಗಳ ಗ್ರಹದ ಮೇಲೆ ಜೀವಿಗಳಿರಬುದಾದ ಸಾಧ್ಯತೆ ಇದ್ದು, ಅದನ್ನು ಬಿಟ್ಟರೆ ಸೌರಮಂಡಲದ ಹೊರಗಿನ ಮತ್ತೊಂದು ಸ್ಟಾರ್ ಸಿಸ್ಟಮ್ ನಲ್ಲಿ ಜೀವಿಗಳ ಇರುವಿಕೆಯ ಕುರುಹು ಸಿಗಲಿದೆ ಎಂದು ನಾಸಾ ಹೇಳಿದೆ.