Asianet Suvarna News Asianet Suvarna News

Netflix Password Share: ನೆಟ್‌ಫ್ಲಿಕ್ಸ್‌ ಲಾಗಿನ್‌ ಐಡಿ, ಪಾಸ್‌ವರ್ಡ್‌ ಶೇರ್‌ ಮಾಡಿದ್ರೂ ಇನ್ಮುಂದೆ ಚಾರ್ಜ್‌!

ವರದಿಯ ಪ್ರಕಾರ, ನೆಟ್‌ಫ್ಲಿಕ್ಸ್ ತನ್ನ ನಿಧಾನಗತಿಯ ಬೆಳವಣಿಗೆಯ ಹಿಂದಿನ ಕಾರಣಗಳಲ್ಲಿ ಪಾಸ್‌ವರ್ಸ್‌ ಶೇರಿಂಗ್‌ ಸಮಸ್ಯೆಯನ್ನೂ ಉಲ್ಲೇಖಿಸಿದೆ. ಒಟಿಟಿಯ ದೈತ್ಯ ಕಂಪನಿ ಮೂರನೇ ತ್ರೈಮಾಸಿಕದಲ್ಲಿ ಮುನ್ಸೂಚನೆಗಳನ್ನು ಮೀರಿ 24.1 ಲಕ್ಷ ಹೊಸ ಗ್ರಾಹಕರನ್ನು ಸೇರಿಸಿಕೊಂಡಿದೆ. ಹಾಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ನೆಟ್‌ಫ್ಲಿಕ್ಸ್‌ ಇನ್ನೂ ನಿಧಾನಗತಿಯ ಬೆಳವಣಿಗೆಯಲ್ಲಿದೆ ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದೆ.

Sharing Netflix password will incur extra charge  Additional fees will be levied from 2023 san
Author
First Published Oct 20, 2022, 3:45 PM IST

ನವದೆಹಲಿ (ಅ.20): ಒಟಿಟಿಯ ದೈತ್ಯ ವೇದಿಕೆಯಾಗಿರುವ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳುವ ಬಳಕೆದಾರರಿಂದ ಹೆಚ್ಚುವರಿ ಶುಲ್ಕವನ್ನು ವಿಧಿಸಲು ಸಿದ್ಧವಾಗಿದ.ೆ  ಪ್ಲಾಟ್‌ಫಾರ್ಮ್‌ನ ನಿಧಾನಗತಿಯ ಬೆಳವಣಿಗೆಗೆ ಪಾಸ್‌ವರ್ಡ್ ಹಂಚಿಕೆಯೇ ದೊಡ್ಡ ಕಾರಣ ಎಂದು ಕಂಪನಿ ಹೇಳಿಕೊಂಡಿದೆ. ಒಟಿಟಿ ಪ್ಲಾಟ್‌ಫಾರ್ಮ್ ಈಗ ಭವಿಷ್ಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಕಂಪನಿಯು 2023 ರ ಆರಂಭದಿಂದ ತಮ್ಮ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಹಂಚಿಕೊಳ್ಳುವ ಬಳಕೆದಾರರಿಂದ ಹೆಚ್ಚುವರಿ ಶುಲ್ಕವನ್ನು ವಿಧಿಸಲು ಆರಂಭಿಸಲಿದೆ. ನೆಟ್‌ಫ್ಲಿಕ್ಸ್‌ನ ತ್ರೈಮಾಸಿಕ ವರದಿ ಮಂಗಳವಾರ ಬಿಡುಗಡೆ ಮಾಡಲಾಗಿದೆ. ವರದಿಯ ಬಿಡುಗಡೆಯೊಂದಿಗೆ, ನೆಟ್‌ಫ್ಲಿಕ್ಸ್, 'ಅಂತಿಮವಾಗಿ, ಖಾತೆಯನ್ನು ಹಂಚಿಕೊಳ್ಳುವ ಬಳಕೆದಾರರಿಗೆ ಹೆಚ್ಚುವರಿ ಶುಲ್ಕ ವಿಧಿಸಲು ನಾವು ನಿರ್ಧರಿಸಿದ್ದಾಗಿ ತಿಳಿಸಿದೆ. 2023 ರ ಆರಂಭದಿಂದ ಹೆಚ್ಚಿನ ಪ್ರಮಾಣದಲ್ಲಿ ಈ ಬಳಕೆದಾರರಿಂದ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆ.

ಖಾತೆ ಹಂಚಿಕೆ ಆಗುತ್ತಿರುವ ಕಾರಣ, ಹೊಸ ಬಳಕೆದಾರರು ಬರುತ್ತಿಲ್ಲ: ನೆಟ್‌ಫ್ಲಿಕ್ಸ್‌ನ ಉತ್ಪನ್ನ ನಾವೀನ್ಯತೆ ನಿರ್ದೇಶಕ ಚೆಂಘೈ ಲಾಂಗ್ ಹೇಳಿರುವ ಪ್ರಕಾರ, ನೆಟ್‌ಫ್ಲಿಕ್ಸ್‌ನ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ಬಹಳಷ್ಟು ಆನಂದಿಸುತ್ತಾರೆ. ಎಷ್ಟರಮಟ್ಟಿಗೆಂದರೆ ಅವರು ಅವುಗಳನ್ನು ಹೆಚ್ಚು ಹೆಚ್ಚು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಾರೆ. ಆದಾಗ್ಯೂ, ಸ್ನೇಹಿತರ ನಡುವೆ ಖಾತೆ ಹಂಚಿಕೆಯಿಂದಾಗಿ, ಹೆಚ್ಚಿನ ಸದಸ್ಯರು ನೆಟ್‌ಫ್ಲಿಕ್ಸ್‌ಗೆ (Netflix ) ಚಂದಾದಾರರಾಗುವುದಿಲ್ಲ. ಇದು ಬಳಕೆದಾರರನ್ನು ಹೆಚ್ಚಿಸುವುದಿಲ್ಲ ಮತ್ತು ಕಂಪನಿಯು ನಷ್ಟವನ್ನು ಅನುಭವಿಸುತ್ತದೆ ಎಂದಿದ್ದಾರೆ.

ನೆಟ್‌ಫ್ಲಿಕ್ಸ್‌ ಮುಂದಿನ ಭವಿಷ್ಯ: ನೆಟ್‌ಫ್ಲಿಕ್ಸ್ ಕಾರ್ಯನಿರ್ವಾಹಕ ಚೆಂಘೈ ಲಾಂಗ್‌ ಹೇಳುವ ಪ್ರಕಾರ, 'ಒಟಿಟಿ ಪ್ಲಾಟ್‌ಫಾರ್ಮ್‌ಗಳು (OTT Platform) ಮನರಂಜನಾ ಉದ್ಯಮದ ಭವಿಷ್ಯವಾಗಿದೆ. ಇತರ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಮಾಲೀಕರು ತಮ್ಮ ಉತ್ಪನ್ನಗಳನ್ನು ಬೆಳೆಯಲು ಶತಕೋಟಿ ಡಾಲರ್‌ಗಳನ್ನು ಖರ್ಚು ಮಾಡುತ್ತಿದ್ದಾರೆ. ಸದ್ಯ ಅವರಿಗೆ ಲಾಭ ಸಿಗುತ್ತಿಲ್ಲ. ಆದರೆ ಭವಿಷ್ಯದಲ್ಲಿ ಇದು ಸಾಕಷ್ಟು ಲಾಭವನ್ನು ಪಡೆಯಲಿದೆ ಎಂದಿದ್ದಾರೆ.

ಒಟಿಟಿ ದೈತ್ಯ ಮೂರನೇ ತ್ರೈಮಾಸಿಕದಲ್ಲಿ ನಿರೀಕ್ಷೆಯನ್ನೂ ಮೀರಿ 24.1 ಲಕ್ಷ ಹೊಸ ಗ್ರಾಹಕರನ್ನು ಸೇರಿಸಿಕೊಂಡಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ನೆಟ್‌ಫ್ಲಿಕ್ಸ್ ಇನ್ನೂ ನಿಧಾನಗತಿಯ ಬೆಳವಣಿಗೆಯಲ್ಲಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. 2022 ರ ಮೊದಲಾರ್ಧದಲ್ಲಿ ಇದು 12 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ.. ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಸ್ಪೆನ್ಸರ್ ನ್ಯೂಮನ್ ಅವರು ಕಂಪನಿಯು ನಿರೀಕ್ಷೆಯಷ್ಟು ವೇಗವಾಗಿ ಬೆಳೆಯುತ್ತಿಲ್ಲ ಎಂದು ಹೇಳಿದ್ದಾರೆ.

ಡಿಯರ್ ನೆಟ್‌ಫ್ಲಿಕ್ಸ್, ನಯನತಾರಾಗೆ ಮಗು ಆಯ್ತು, ಮದುವೆ ವಿಡಿಯೋ ಎಲ್ಲಿ? ಕಾಲೆಳೆಯುತ್ತಿರುವ ನೆಟ್ಟಿಗರು

ಎಷ್ಟಿರಲಿದೆ ಚಾರ್ಜ್‌: ಪಾಸ್‌ವರ್ಡ್‌ (Password) ಹಾಗೂ ಲಾಗಿನ್‌ ಐಡಿ (Login ID) ಶೇರ್‌ ಮಾಡುವ ಗ್ರಾಹಕರಿಗೆ ಎಷ್ಟು ಚಾರ್ಜ್‌ ಮಾಡಲಿದೆ ಎಂದು ಕಂಪನಿ ತಿಳಿಸಿಲ್ಲ. ಮೂಲಗಳ ಪ್ರಕಾರ, ತಿಂಗಳಿಗೆ ಮಾಸಿಕ ಬೆಲೆ 3 ರಿಂದ 4 ಡಾಲರ್ (ಸುಮಾರು 249 ರಿಂದ 332 ರೂಪಾಯಿಗಳು) ಇರಬಹುದು ಎಂದು ವರದಿಗಳಲ್ಲಿ ಹೇಳಲಾಗುತ್ತಿದೆ. ಹೆಚ್ಚುವರಿ ಶುಲ್ಕವನ್ನು ಪಾವತಿಸಲು ಬಯಸದ ಬಳಕೆದಾರರು ನೆಟ್‌ಫ್ಲಿಕ್ಸ್‌ನ ಮೈಗ್ರೇಷನ್‌ ಟೂಲ್‌ (Netflix Migration Tool) ಬಳಸಬಹುದು. ಈ ಟೂಲ್‌ ಸಹಾಯದಿಂದ, ಬಳಕೆದಾರರು ತಮ್ಮ ಪ್ರೊಫೈಲ್‌ಗಳನ್ನು ಸುಲಭವಾಗಿ ವರ್ಗಾಯಿಸಲು ಸಾಧ್ಯವಾಗುತ್ತದೆ.

ಕೊನೆಗೂ ನಯನತಾರ ಮದುವೆ ವಿಡಿಯೋ ರಿಲೀಸ್: ನೋಡಲು ದುಡ್ಡು ಕೊಡ್ಬೇಕು!

ದೊಡ್ಡ ಮತ್ತು ಲಾಭದಾಯಕ ಸ್ಟ್ರೀಮಿಂಗ್ ವ್ಯವಹಾರವನ್ನು ನಿರ್ಮಿಸುವುದು ಕಷ್ಟ ಎಂದು ಒಪ್ಪಿಕೊಂಡ ನೆಟ್‌ಫ್ಲಿಕ್ಸ್, ಈ ವರ್ಷ ಸ್ಟ್ರೀಮಿಂಗ್ ವೇದಿಕೆಗಳ  ಒಟ್ಟು ವಾರ್ಷಿಕ ನೇರ ಕಾರ್ಯಾಚರಣೆಯ ನಷ್ಟ 10 ಶತಕೋಟಿ ಅಮೆರಿಕನ್‌ ಡಾಲರ್‌ಗಿಂತ ಹೆಚ್ಚಿದೆ ಎಂದು ಹೇಳಿದೆ. ಇದಕ್ಕೂ ಮುನ್ನ ಈ ನಷ್ಟ 5-6 ಶತಕೋಟಿ ಅಮೆರಿಕನ್‌ ಡಾಲರ್‌ನಷ್ಟಿತ್ತು. ನೆಟ್‌ಫ್ಲಿಕ್ಸ್‌ ಸೇರಿದಂತೆ ವಿಶ್ವದ ಇತರ ಎಲ್ಲಾ ವೇದಿಕೆಗಳೂ ಸ್ಟ್ರೀಮಿಂಗ್‌ನಲ್ಲಿ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದೆ.

Follow Us:
Download App:
  • android
  • ios