ಈ ವಾಹನಕ್ಕೆ ಸ್ಟೇರಿಂಗ್‌ ವ್ಹೀಲ್‌ ಇಲ್ಲ! ಅತ್ಯಾಧುನಿಕ ಕೃತಕ ಬುದ್ಧಿಮತ್ತೆಯೊಂದಿಗೆ ಸ್ವಯಂ ಚಾಲನಾ ಸಾಮರ್ಥ್ಯ ಹೊಂದಿರುವ ಇದು ಎಲ್ಲ ಬಗೆಯ ವಾತಾವರಣ, ಭೌಗೋಳಿಕ ಸನ್ನಿವೇಶದಲ್ಲಿ ಸಂಚರಿಸಬಲ್ಲದು.

ಬೆಂಗಳೂರು (ಜೂ.5) : ಈ ವಾಹನಕ್ಕೆ ಸ್ಟೇರಿಂಗ್‌ ವ್ಹೀಲ್‌ ಇಲ್ಲ! ಅತ್ಯಾಧುನಿಕ ಕೃತಕ ಬುದ್ಧಿಮತ್ತೆಯೊಂದಿಗೆ ಸ್ವಯಂ ಚಾಲನಾ ಸಾಮರ್ಥ್ಯ ಹೊಂದಿರುವ ಇದು ಎಲ್ಲ ಬಗೆಯ ವಾತಾವರಣ, ಭೌಗೋಳಿಕ ಸನ್ನಿವೇಶದಲ್ಲಿ ಸಂಚರಿಸಬಲ್ಲದು.

ಭಾನುವಾರ ಇಲ್ಲಿನ ಎಂಬೆಸ್ಸಿ ಟೆಕ್‌ ವಿಲೇಜ್‌ನಲ್ಲಿ ಮೀನಸ್‌ ಝೀರೋ ಕಂಪನಿ ಝಡ್‌ ಡೇ ಕಾರ್ಯಕ್ರಮದ ಮೂಲಕ ಬಿಡುಗಡೆ ಮಾಡಿರುವ ‘ಝಡ್‌ ಪಾಡ್‌’ ವಾಹನ ಕ್ಯಾಂಪಸ್‌ನಲ್ಲಿ ಪ್ರಯಾಣಿಕರನ್ನು ಹೊತ್ತು ಪ್ರಾಯೋಗಿಕ ಚಾಲನೆ ಮಾಡಿತು.

ಚಾಲಕರಿಲ್ಲದೆ, ಸ್ವಯಂ ಚಾಲನಾ ಸಾಮರ್ಥ್ಯ ಹೊಂದಿರುವ ಜೊತೆಗೆ ದೇಶದ ಮೊಟ್ಟಮೊದಲ ಕ್ಯಾಮೆರಾ ಸೆನ್ಸಾರ್‌ ಸ್ಯೂಟ್‌ ತಂತ್ರಜ್ಞಾನ ಆಧಾರಿತ ನಿರ್ಮಿತ ಎಂಬ ಹೆಗ್ಗಳಿಕೆ ಈ ವಾಹನದ್ದು. ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ಜೊತೆಗೆ ನೇಚರ್‌ ಇನ್‌ಸ್ಪೈಯರ್ಡ್‌ ಎಐ (ಎನ್‌ಎಐ) ಮೂಲಕ ಟ್ರೂ ವಿಶನ್‌ ಅಟಾನಮಿ (ಟಿವಿಎ) ಪರಿಕಲ್ಪನೆಯೊಂದಿಗೆ ಈ ವಾಹನ ರೂಪಿಸಲಾಗಿದೆ. ಈವರೆಗಿನ ಸಾಂಪ್ರದಾಯಿಕ ಎಐ ತಂತ್ರಜ್ಞಾನಕ್ಕಿಂತ ಇದು ಭಿನ್ನವಾಗಿದೆ. ‘ಝಡ್‌ ಪಾಡ್‌’ ಯಾವುದೇ ಚಾಲಕನ ನಿಯಂತ್ರಣ ಇಲ್ಲದೆ ಕೇವಲ ಮೊನೊಕ್ಯುಲರ್‌ ಕ್ಯಾಮೆರಾದ ಸೆನ್ಸಾರ್‌ ಮೂಲಕ ಸಂಚರಿಸುತ್ತದೆ.

ಅಂಡರ್‌ ಪಾಸ್‌ ಪರಿಶೀಲನೆ ನಿಲ್ಲಿಸಿದ ಬಿಬಿಎಂಪಿ!

ಈ ವೇಳೆ ಮಾತನಾಡಿದ ಮೀನಸ್‌ ಸಹ ಸಂಸ್ಥಾಪಕ ಗಗನ್‌ದೀಪ್‌ ರೀಹಾಲ್‌, ವಾಹನ ಉದ್ಯಮ ಎದುರಿಸುತ್ತಿರುವ ಸುರಕ್ಷಿತ ಸ್ವಾಯತ್ತ ವಾಹನ ಪರಿಹಾರಗಳ ಕೊರತೆಯಿಂದಾಗಿ ಪ್ರತಿ ವರ್ಷ ಸಾಕಷ್ಟುಜೀವಹಾನಿ ಆಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕಂಪನಿ ವಾಹನ ರೂಪಿಸಿದೆ. ಸಾಂಪ್ರದಾಯಿಕ ರೋಬೋಟಿಕ್ಸ್‌ ಎಐ ಆಧಾರಿತ ವಾಹನಗಳು ರಸ್ತೆಗಿಳಿದಾಗ ಸಂಚಾರದ ನೈಜ ಸಮಸ್ಯೆಗಳನ್ನು ಎದುರಿಸಲಾಗದೆ ವಿಫಲಗೊಳ್ಳುತ್ತಿವೆ. ಇದನ್ನು ‘ಝಡ್‌ಪಾಡ್‌’ ಯಶಸ್ವಿಯಾಗಿ ಪರಿಹರಿಸಿದೆ ಎಂದು ತಿಳಿಸಿದರು.

ಗುರ್‌ಸಿಮ್ರನ್‌ ಕಲ್ರಾ ಮಾತನಾಡಿ, ವಾಹನ ಉದ್ಯಮದಲ್ಲಿ ಈ ತಂತ್ರಜ್ಞಾನದ ಅಳವಡಿಕೆ ಹೊಸ ಕ್ರಾಂತಿಗೆ ಕಾರಣವಾಗಲಿದೆ. ವಾಹನ ಚಾಲನೆಯ ಚಿಂತೆ ಇಲ್ಲದೆ ಸುರಕ್ಷಿತ ಭಾವದಿಂದ ಇದರಲ್ಲಿ ಪ್ರಯಾಣ ಮಾಡಬಹುದು. ಮುಂದಿನ ದಿನಗಳಲ್ಲಿ ಸಾರ್ವಜನಿಕ ರಸ್ತೆ ಪ್ರಾಯೋಗಿಕ ಸಂಚಾರ ಮಾಡಿಕೊಂಡು ವಾಹನ ವಿನ್ಯಾಸ ಸೇರಿ ಮತ್ತಷ್ಟುಅಭಿವೃದ್ಧಿಯಾಗಲಿದೆ. ಮುಂದಿನ ಎರಡು ವರ್ಷದಲ್ಲಿ ಜಾಗತಿಕ ಮಾರುಕಟ್ಟೆಯ ದೃಷ್ಟಿಕೋನದಿಂದ ಇದನ್ನು ರೂಪಿಸಲಾಗುವುದು ಎಂದರು.

ಸ್ಮಾರ್ಟ್‌ವಾಚ್‌ ಮಾರುಕಟ್ಟೆಗೆ ಕ್ರಾಸ್‌ಬೀಟ್ಸ್‌ ಇಗ್ನೈಟ್‌ ಹಸ್ಲ್‌ ಎಂಟ್ರಿ, ಬೆಲೆ ಕೇವಲ 1,799 ರೂ!