ಶನಿ ಗ್ರಹದ ಬಳೆಗಳಿಗೆ ಶುರುವಾಯ್ತು ಶನಿ ಕಾಟ| ಸಾವಿನ ಕದ ತಟ್ಟುತ್ತಿರುವ ಶನಿ ಗ್ರಹದ ಬಳೆಗಳು| 100 ಮಿಲಿಯನ್ ವರ್ಷಗಳಲ್ಲಿ ಶನಿಯ ಬಳೆಗಳು ಮಾಯ| 1,70,000 ಮೈಲುಗಳ ಅಗಾಧ ಪ್ರದೇಶ ಮಂಗಮಾಯ

ವಾಷಿಂಗ್ಟನ್(ಡಿ.20): ಇತ್ತೀಚಿಗಷ್ಟೇ ನಾಸಾದ ಕ್ಯಾಸಿನಿ ನೌಕೆ ಶನಿಗೆ ಡಿಕ್ಕಿ ಹೊಡೆದು ತನ್ನ ಯಾತ್ರೆ ಅಂತಿಮಗೊಳಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಸೌರಮಂಡಲದ ಅತ್ಯಂತ ಆಕರ್ಷಕ ಮತ್ತು ಪ್ರಮುಖ ಗ್ರಹಗಳಲ್ಲಿ ಒಂದಾದ ಶನಿಗೆ ಮಾನವ ಇತಿಹಾಸದಲ್ಲಿ ಅತ್ಯಂತ ಮಹತ್ವದ ಸ್ಥಾನವಿದೆ.

ಶನಿ ಗ್ರಹದ ಆಕರ್ಷಣೆಗೆ ಕಾರಣ ಅದರ ಸುಂದರ ಬಳೆಗಳು. ಸಹಸ್ರಾರು ವರ್ಷಗಳಿಂದ ಶನಿಯ ಸುತ್ತ ಸುತ್ತುತ್ತಿರುವ ಈ ಬಳೆಗಳು ನಾರಿಯ ಕೈ ಬಳೆಗಳಷ್ಟೇ ಸುಂದರ. ಆದರೆ ಈ ಬಳೆಗಳು ಇದೀಗ ಸಾವಿನಂಚಿನಲ್ಲಿದ್ದು, ಇನ್ನೂ ಕೆಲವೇ ಮಿಲಿಯನ್ ವರ್ಷಗಳಲ್ಲಿ ಈ ಬಳೆಗಳು ಮಾಯವಾಗಲಿವೆ ಎಂದು ನಾಸಾ ತಿಳಿಸಿದೆ.

Scroll to load tweet…

ಸುಮಾರು 100 ಮಿಲಿಯನ್ ವರ್ಷಗಳ ಹಿಂದೆ ರಚಿತವಾಗಿದ್ದ ಶನಿ ಗ್ರಹದ ಈ ಬಳೆಗಳು, ಮುಂದಿನ 100 ವರ್ಷಗಳ ಅವಧಿಯಲ್ಲಿ ನಾಶ ಹೊಂದಲಿವೆ. ಅಂದರೆ ಪ್ರಸ್ತುತ ಮಾನವ ಜನಾಂಗ ಶನಿಯ ಈ ಸುಂದರ ಬಳೆಗಳನ್ನು ಕಂಡ ಅದೃಷ್ಟಶಾಲಿ ಎಂದು ಹೇಳಬಹುದು.

ಶನಿಯ ಸುತ್ತ ಸುಮಾರು 1,70,000 ಮೈಲುಗಳ ಅಗಾಧ ಪ್ರದೇಶವನ್ನು ಒಳಗೊಂಡಿರುವ ಈ ಬಳೆಗಳು ಬಹುತೇಕ ಈ ಬಳೆಗಳನ್ನು ನಿರ್ಮಿಸಿರುವ ಘನ ವಸ್ತುಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ಈಗಾಗಲೇ ಸಾವಿನ ಅಂಚಿಗೆ ಬಂದಿವೆ. ಇನ್ನು 100 ಮಿಲಿಯನ್ ವರ್ಷದಲ್ಲಿ ಈ ಬಳೆಗಳು ಮಾಯವಾಗಲಿವೆ ಎಂದು ಖೋಳ ವಿಜ್ಷಾನಿಗಳು ತಿಳಿಸಿದ್ದಾರೆ.