ಮಹಿಳಾ ವರದಿಗಾರ್ತಿಯನ್ನು ಅನುಚಿತವಾಗಿ ಸ್ಪರ್ಶಿಸಿದ ಸೌದಿಯ ಮೊದಲ ಪುರುಷ ರೋಬೋಟ್! ವಿಡಿಯೋ ವೈರಲ್
ಮಹಿಳೆಯೊಂದಿಗೆ ಕೆಲ ಪುರುಷರು ಅನುಚಿತವಾಗಿ ವರ್ತಿಸಿ ಆಗಾಗ ಸುದ್ದಿಯಾಗುತ್ತಾರೆ. ಆದರೆ, ಸೌದಿ ಅರೋಬಿಯದ ಪುರುಷ ರೋಬೋಟ್ ಕೂಡಾ ಪತ್ರಕರ್ತೆಯನ್ನು ಅನುಚಿತವಾಗಿ ಸ್ಪರ್ಶಿಸಿ ಮುಜುಗರಕ್ಕೀಡು ಮಾಡಿದೆ.
ಸೌದಿ ಅರೇಬಿಯಾದ ಮೊದಲ ಪುರುಷ ರೋಬೋಟ್ ಇದು. ಅಲ್ಲಿನ ಪುರುಷರಂತೆಯೇ ಸಾಂಪ್ರದಾಯಿಕ ಬಿಳಿ ಥಾಬ್ ಮತ್ತು ಕೆಂಪು ಕೆಫಿಯೆಹ್ ವೇಷಭೂಷಣ ಧರಿಸಿ ಸಿದ್ಧಗೊಂಡಿದೆ. ಹೆಮ್ಮೆಯಿಂದ ಈ ರೋಬೋಟ್ ಬಗ್ಗೆ ಪತ್ರಕರ್ತೆ ಪರಿಚಯಿಸುತ್ತಿರಬೇಕಾದರೆ, ಇದ್ದಕ್ಕಿದ್ದಂತೆ ರೋಬೋಟ್ ಆಕೆಯನ್ನು ಅನುಚಿತವಾಗಿ ಸ್ಪರ್ಶಿಸಿದೆ. ರೋಬೋಟ್ ಮಾಡಿದ ಈ ಎಡವಟ್ಟಿನ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.
ರಿಯಾದ್‌ನಲ್ಲಿ ನಡೆದ ಎರಡನೇ ಡೀಪ್‌ಫಾಸ್ಟ್ ಈವೆಂಟ್‌ನಲ್ಲಿ ಸೌದಿ ಅರೇಬಿಯಾದ ಮೊದಲ ಪುರುಷ ಹುಮನಾಯ್ಡ್ ರೋಬೋಟ್ 'ಮುಹಮ್ಮದ್'ನ ಚೊಚ್ಚಲ ಪ್ರದರ್ಶನವು ಅಂದುಕೊಂಡಿದ್ದೇ ಒಂದು ಆಗಿದ್ದೇ ಒಂದು ಎಂದಾಗಿದೆ. ರೋಬೋಟ್‌ನ ಈ ವರ್ತನೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
ಆಸ್ಕರ್ಸ್ ನಾಮಿನಿಗಳಿಗಾಗಿ ಸಿದ್ಧವಾದ 1.4 ಕೋಟಿ ರೂ. ಮೌಲ್ಯದ ಉಡುಗೊರೆ ಬ್ಯಾಗ್‌ನಲ್ಲಿ ಏನೇನಿದೆ?
ಪತ್ರಿಕಾ ಸಮಾರಂಭದಲ್ಲಿ ಚಿತ್ರೀಕರಿಸಲಾದ ಘಟನೆಯು ಎಷ್ಟು ವೈರಲ್ ಆಗಿದೆಯೋ ಅಷ್ಟೇ ವಿವಾದವನ್ನು ಹುಟ್ಟು ಹಾಕಿದೆ. ವೀಡಿಯೊವು ವಿವಿಧ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.
ತುಣುಕಿನಲ್ಲಿ, ವರದಿಗಾರ್ತಿ ರಾವ್ಯಾ ಕಸ್ಸೆಮ್ ಮಾತಾನಾಡುತ್ತಿರುವಂತೆಯೇ ಪಕ್ಕದಲ್ಲಿ ನಿಂತಿದ್ದ ರೋಬೋಟ್ ತನ್ನ ಕೈಯಲ್ಲಿ ಅವಳ ಪೃಷ್ಠವನ್ನು ಸ್ಪರ್ಶಿಸಿದೆ. ಇದು ಆಕೆಗೆ ಮುಜುಗರ ತಂದಿದೆ. ಈ ಘಟನೆಯು ಸೌದಿ ಅರೇಬಿಯಾ, ಜಾಗತಿಕವಾಗಿ ತಂತ್ರಜ್ಞಾನ, ನೈತಿಕತೆ ಮತ್ತು ಲಿಂಗ ಡೈನಾಮಿಕ್ಸ್‌ನ ಒಮ್ಮುಖದ ಕುರಿತು ಚಿಂತನೆಯನ್ನು ಪ್ರೋತ್ಸಾಹಿಸುತ್ತದೆ.
ಆಕೆಯದೇ ಚಿನ್ನ, ವಜ್ರ, ರತ್ನದ ಆಭರಣಗಳನ್ನು ಸೇರಿಸಿ ಹೊಲಿದ ಬ್ಲೌಸ್ ಧರಿಸಿದ ಇಶಾ ಅಂಬಾನಿ
ಕೆಲವು ವೀಕ್ಷಕರು ಈ ಘಟನೆಯು ಲಿಂಗ ಅಸಮಾನತೆ ಮತ್ತು ಮಹಿಳೆಯರ ವಸ್ತುನಿಷ್ಠತೆಯ ವಿಶಾಲವಾದ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ ಎಂದು ವಾದಿಸಿದರೆ, ಇತರರು ಇದು ರೋಬೋಟ್‌ನ ಪ್ರೋಗ್ರಾಮಿಂಗ್‌ನಲ್ಲಾದ ಸಮಸ್ಯೆ ಎಂದಿದ್ದಾರೆ.