ಸ್ಯಾಮ್‌ಸಂಗ್ ಕಂಪನಿಯು ಗ್ಯಾಲಕ್ಸಿ ಟ್ಯಾಬ್ ಎಸ್‌4 ಎಂಬ ಹೊಸ ಟ್ಯಾಬ್ ಬಿಡುಗಡೆ ಮಾಡಿದೆ. ಇದು ಆಫೀಸ್‌ಗೆ ಹೋಗುವವರಿಗೆ ಮತ್ತಷ್ಟು ಸುಲಭ ಹಾಗೂ ಬಹಳ ಉಪಯುಕ್ತವಾಗಲಿದೆ. 

ಸ್ಯಾಮ್‌ಸಂಗ್ ಕಂಪನಿಯು ಬಿಡುಗಡೆ ಮಾಡಿರುವ ಗ್ಯಾಲಕ್ಸಿ ಟ್ಯಾಬ್ ಎಸ್‌4 ಮೂಲಕ ಮನೆಯಿಂದ ಕಚೇರಿಗೆ ಹೋಗುವಾಗಲೂ ಕೆಲಸ ಮಾಡಬಹುದು. ಗ್ಯಾಲೆಕ್ಸಿ ಎಸ್‌4 ಟ್ಯಾಬ್ ನೋಡಲು ಕಂಪ್ಯೂಟರ್ ರೀತಿಯೇ ಇದ್ದು, ಎರಡು ರೀತಿಯ ಕೀಬೋರ್ಡ್ ವ್ಯವಸ್ಥೆ ಇದರಲ್ಲಿದೆ.

ಟ್ಯಾಬ್‌ನಲ್ಲಿ ಕೀಬೋರ್ಡ್ ಬೇಡದವರು ಎಚ್ ಡಿಎಂಐ ಅಡಾಪ್ಟರ್ ಮೂಲಕ ಬಳಸಬಹುದು. ಹಲವಾರು ರೀತಿಯ ಆ್ಯಪ್‌ಗಳನ್ನು ನೀವು ಫುಲ್ ಸ್ಕ್ರೀನ್‌ನಲ್ಲೇ ನೋಡಬಹುದಾಗಿದೆ. ಇದು ಬಹಳ ಹಗುರವಾಗಿದ್ದು, ಎಲ್ಲಿ ಬೇಕಾದರೂ ನಿಮ್ಮೊಡನೆ ಕೊಂಡೊಯ್ಯಬಹುದು. ಜೊತೆಗೆ ಕಂಪ್ಯೂಟರ್‌ನ ಡೆಸ್ಕ್‌ಟಾಪ್‌ನಲ್ಲಿ ಕೆಲಸ ಮಾಡಿದಂತೆ ಅನುಭವವಾಗುತ್ತದೆ.

  •  ಈ ಟ್ಯಾಬ್‌ನಲ್ಲಿ ೭,೩೦೦ ಎಂಎಎಚ್‌ನ ಬ್ಯಾಟರಿ ಇದ್ದು, 16 ಗಂಟೆಗಳ ಕಾಲ ವಿಡಿಯೋ ನೋಡುವ ಕೆಪಾಸಿಟಿ ಹೊಂದಿದೆ.
  •  ಎಸ್ ಪೆನ್ ಸೌಲಭ್ಯವಿದ್ದು, ಇದರಿಂದ ಚಿತ್ರಬಿಡಿಸುವುದು, ಪಟ್ಟಿ ಮಾಡಿಕೊಳ್ಳುವುದು ಹೀಗೆ ಹಲವು ರೀತಿಯ ಸೌಲಭ್ಯ ಇದೆ.
  • 10.5 ಇಂಚುಗಳ ಅಮೋಲ್ಡ್ ಡಿಸ್‌ಪ್ಲೇ ಹೊಂದಿದೆ. ಡಾಲ್ಬಿ ಅಟ್ಮೊಸ್ ಒಳಗೊಂಡ ಸೌಂಡ್ ಎಫೆಕ್ಟ್ ಇರಲ್ಲಿದ್ದು, ನಾಲ್ಕು ಸ್ಪೀಕರ್ ಇದರಲ್ಲಿದೆ.