ಲಾಂಚ್‌ಗೂ ಮುನ್ನ Samsung Galaxy M40 ಬೆಲೆ ಔಟ್! ಇಲ್ಲಿದೆ ದರ & ಫೀಚರ್ಸ್

ಮೊಬೈಲ್ ಪ್ರಿಯರಲ್ಲಿ ಕುತೂಹಲ ಕೆರಳಿಸಿರುವ Samsung Galaxy M40 ಬಿಡುಗಡೆ | ಸ್ಕ್ರೀನ್ ಸೌಂಡ್ ತಂತ್ರಜ್ಞಾನ ಹೊಂದಿರುವ Samsungನ ಮೊದಲ ಮೊಬೈಲ್ | ಜೂನ್ 11ಕ್ಕೆ ಭಾರತೀಯ ಮೊಬೈಲ್ ಮಾರುಕಟ್ಟೆಗೆ
 

Samsung Galaxy M40 Smartphone Launch Date Price Specifications

ಇತ್ತೀಚೆಗೆ ಕೈಗೆಟಕುವ ದರದ M ಸೀರಿಸ್ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಮೊಬೈಲ್ ಬಳಕೆದಾರರ ಪ್ರಶಂಸೆಗೆ ಪಾತ್ರವಾಗಿದ್ದ  ದಕ್ಷಿಣ ಕೊರಿಯನ್ ಕಂಪನಿ Samsung  ಈಗ ಹೊಸ ಫೋನ್ ಲಾಂಚ್ ಮಾಡಲು ಸಿದ್ಧವಾಗಿದೆ.

ಭಾರತದ ಮೊಬೈಲ್ ಮಾರುಕಟ್ಟೆಗೆ ಪದಾರ್ಪಣೆ ಮಾಡಲು, M ಸೀರಿಸ್‌ನ ಮುಂದುವರಿದ ಆವೃತ್ತಿ Samsung Galaxy M40 ರೆಡಿಯಾಗಿದೆ. ಜೂನ್ 11ಕ್ಕೆ ಬಹುನಿರೀಕ್ಷಿತ Galaxy M40 ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. 

ಒಂದು ಅಂದಾಜಿನ ಪ್ರಕಾರ ಕಳೆದ ಜನವರಿಯಿಂದ ಸುಮಾರು 2 ಮಿಲಿಯನ್ M ಸೀರಿಸ್ ಹ್ಯಾಂಡ್‌ಸೆಟ್ ಗಳು ಮಾರಾಟವಾಗಿವೆ.

ಇದನ್ನೂ ಓದಿ | ಅನಗತ್ಯ ಕರೆಗಳ ಕಿರಿಕಿರಿ: ತಪ್ಪಿಸಲು ಬಂದಿದೆ ಹೊಸ ಐಡಿಯಾ!

ಹೋಲ್ ಪಂಚ್ ಕ್ಯಾಮೆರಾ ಡಿಸೈನ್ ಇರುವ Infinity-O ಡಿಸ್ಪ್ಲೇ ಪ್ಯಾನೆಲ್, Octa-core Snapdragon 675 ಚಿಪ್ ಸೆಟ್, 32 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಜೊತೆ ಟ್ರಿಪಲ್ ಕ್ಯಾಮೆರಾ ಸೆಟ್-ಅಪ್ ಹೊಂದಿದೆ.

Android 9 Pie ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಈ ಫೋನ್, 6GB RAM ಹಾಗೂ 5000mAh  ಬ್ಯಾಟರಿಯನ್ನೊಳಗೊಂಡಿದೆ.

ಸ್ಕ್ರೀನ್ ಸೌಂಡ್ ತಂತ್ರಜ್ಞಾನ ಹೊಂದಿರುವ Samsungನ ಮೊದಲ ಮೊಬೈಲ್ ಇದಾಗಿದೆ. ಅಂದರೆ, ಪರದೆಯಿಂದಲೇ ನೇರವಾಗಿ ಆಡಿಯೋ ವೈಬ್ರೇಷನ್ ಗಳು ಬರುತ್ತವೆ. ಇದೊಂದು ಹೊಸ ಮತ್ತು ವಿಶಿಷ್ಟ ಅನುಭವ ಎಂಬುವುದು ಕಂಪನಿಯ ಅಂಬೋಣ.

Amazon ಮತ್ತು Samsung ಆನ್‌ಲೈನ್ ಸ್ಟೋರ್‌ಗಳಲ್ಲಿ ಫೋನ್ ಮಾರಾಟ ಜೂನ್ ತಿಂಗಳಿನಲ್ಲಿ ಆರಂಭವಾಗಲಿದೆ.  ಅಂದಹಾಗೆ, ಕಂಪನಿಯ ಪ್ರಕಾರ ಈ ಹೊಸ ಫೋನ್ ಬೆಲೆ ₹20,000 ರಿಂದ ಆರಂಭವಾಗಲಿದೆ.

ಇದನ್ನೂ ಓದಿ | ನಿಮಗಿಷ್ಟವಾಗುತ್ತೋ ಇಲ್ವೋ... WhatsAppನಲ್ಲಿ ಹೊಸ ಫೀಚರ್ ಬರೋದು ಪಕ್ಕಾ!
 

Latest Videos
Follow Us:
Download App:
  • android
  • ios