ನಾಳೆ ಸ್ಯಾಮಸಂಗ್ ಗ್ಯಾಲಕ್ಸಿ ಜೆ8 ಲಾಂಚ್: ಏನೆಲ್ಲಾ ವಿಶೆಷತೆ?

Samsung Galaxy J8 to go on sale in India on June 28
Highlights

ನಾಳೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಸ್ಯಾಮಸಂಗ್ ಗ್ಯಾಲಕ್ಸಿ ಜೆ8

ಗ್ಯಾಲಕ್ಸಿ 6, ಎ6 ಮತ್ತು ಗ್ಯಾಲಕ್ಸಿ ಎ6+ ಕೂಡ ಬಿಡುಗಡೆ

ಸ್ಯಾಮಸಂಗ್ ಗ್ಯಾಲಕ್ಸಿ  ಜೆ8 ಬೆಲೆ ಎಷ್ಟು ಗೊತ್ತಾ?

ಸ್ಯಾಮಸಂಗ್ ಗ್ಯಾಲಕ್ಸಿ ಜೆ8 ಫೀಚರ್ಸ್ ಏನು?

ಬೆಂಗಳೂರು(ಜೂ.27): ಸ್ಯಾಮಸಂಗ್ ಸ್ಮಾರ್ಟಫೋನ್ ಪ್ರೀಯರಿಗೆ ಸಂತಸದ ಸುದ್ದಿಯೊಂದಿದೆ. ಇದೇ ಜೂ.28 ಅಂದರೆ ನಾಳೆ ಸ್ಯಾಮಸಂಗ್ ಗ್ಯಾಲಕ್ಸಿ ಜೆ8 ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ.


ಸ್ಯಾಮಸಂಗ್ ಗ್ಯಾಲಕ್ಸಿ ಜೆ8 ಜೊತೆಗೆ ಗ್ಯಾಲಕ್ಸಿ 6 ಕೂಡ ನಾಳೆ ಬಿಡುಗಡೆಯಾಗಲಿದ್ದು, ಗ್ಯಾಲಕ್ಸಿ ಎ6 ಮತ್ತು ಗ್ಯಾಲಕ್ಸಿ ಎ6+ ಕೂಡ ಏಕಕಾಲಕ್ಕೆ ಮಾರುಕಟ್ಟೆಗೆ ಬರಲಿವೆ.

ಗ್ಯಾಲಕ್ಸಿ ಜೆ8 ಬೆಲೆ 18,990 ಆಗಿದ್ದು, ನೀಲಿ, ಕಪ್ಪು ಮತ್ತು ಚಿನ್ನದ ಬಣ್ಣದಲ್ಲಿ ಲಭ್ಯವಿದೆ. ಅಲ್ಲದೇ ಐಸಿಐಸಿಐ ಬ್ಯಾಂಕ್ ಕಾರ್ಡ್ ಅಥವಾ ಪೇಟಿಎಂ ಮೂಲಕ ಈ ಫೋನ್ ಖರೀದಿಸಿದರೆ 1,500 ಕ್ಯಾಶ್ ಬ್ಯಾಕ್ ಆಫರ್ ಕೂಡ ನೀಡಲಾಗಿದೆ.

6 ಇಂಚು ಹೆಚ್ ಡಿ+ ಸ್ಕ್ರೀನ್ ಹೊಂದಿರುವ ಗ್ಯಾಲಕ್ಸಿ ಜೆ8, ಕೌಲಕಾಂ ಸ್ನ್ಯಾಪಡ್ರ್ಯಾಗನ್ 450 ಆಕ್ಟಾ ಕೋರ್ ಹೊಂದಿದೆ. 4ಜಿಬಿ ರ‍್ಯಾಮ್ ಹೊಂದಿರುವ ಗ್ಯಾಲಕ್ಸಿ ಜೆ೮. 64 ಜಿಬಿ ಅಡಿಶನಲ್ ಮೆಮೋರಿ ಸೌಲಭ್ಯ ಹೊಂದಿದೆ.
 

loader