Asianet Suvarna News Asianet Suvarna News

ಮಾರುಕಟ್ಟೆ ಉಳಿಸಿಕೊಳ್ಳಲು ಸ್ಯಾಮ್‌ಸಂಗ್ ಯತ್ನ, ಗೆಲಾಕ್ಸಿ ನೋಟ್-7 ಬದಲಾಯಿಸಿಕೊಳ್ಳುವ ಗ್ರಾಹಕರಿಗೆ ಪ್ರೋತ್ಸಾಹ ಧನ?

ಕೊರಿಯಾ ಮೂಲದ ಮೊಬೈಲ್ ದಿಗ್ಗಜ ಕಂಪನಿಯಾದ ಸ್ಯಾಮ್‌ಸಂಗ್ ಕಂಪನಿಯು ನೂತನವಾಗಿ ಬಿಡುಗಡೆ ಮಾಡಿದ ಗೆಲಾಕ್ಸಿ ನೋಟ್-7 ಮೊಬೈಲ್ ಬ್ಯಾಟರಿ ಸಮಸ್ಯೆಯಿಂದಾಗಿ ಚಾರ್ಜ್ ಇಟ್ಟ ವೇಳೆಯಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿತ್ತು. ಈ ಕಾರಣಕ್ಕಾಗಿ ನೋಟ್-7 ಅನ್ನು ಮಾರುಕಟ್ಟೆಯಿಂದ ಸ್ಯಾಮ್‌ಸಂಗ್ ವಾಪಸ್ ಪಡೆದಿದೆ. ಹಾಗಾಗಿ, ಇದೀಗ ಆ್ಯಪಲ್ ಮತ್ತು ಎಲ್‌ಜಿ ಕಂಪನಿಗಳಿಂದ ತನ್ನ ಮಾರುಕಟ್ಟೆಯನ್ನು ಉಳಿಸಿಕೊಳ್ಳಲು ಈ ಕ್ರಮಕ್ಕೆ ಸ್ಯಾಮ್‌ಸಂಗ್ ನಿರ್ಧರಿಸಿದೆ.

samsung decided to give Stipends galaxy note 7 users

ಸಿಯೋಲ್(ಅ.13): ದೋಷಪೂರಿತ ಬ್ಯಾಟರಿ ಹೊಂದಿದ ಸ್ಯಾಮ್‌ಸಂಗ್ ಗೆಲಾಕ್ಸಿ ನೋಟ್-7 ಅನ್ನು ಬೇರೆ ಫೋನ್‌ಗೆ ಬದಲಾಯಿಸಿಕೊಳ್ಳಲು ಇಚ್ಛಿಸುವ ದಕ್ಷಿಣ ಕೊರಿಯಾ ಗ್ರಾಹಕರಿಗೆ ಪ್ರೋತ್ಸಾಹ ಧನ ನೀಡಲು ಸ್ಯಾಮ್‌ಸಂಗ್ ಮುಂದಾಗಿದೆ.

ಕೊರಿಯಾ ಮೂಲದ ಮೊಬೈಲ್ ದಿಗ್ಗಜ ಕಂಪನಿಯಾದ ಸ್ಯಾಮ್‌ಸಂಗ್ ಕಂಪನಿಯು ನೂತನವಾಗಿ ಬಿಡುಗಡೆ ಮಾಡಿದ ಗೆಲಾಕ್ಸಿ ನೋಟ್-7 ಮೊಬೈಲ್ ಬ್ಯಾಟರಿ ಸಮಸ್ಯೆಯಿಂದಾಗಿ ಚಾರ್ಜ್ ಇಟ್ಟ ವೇಳೆಯಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿತ್ತು. ಈ ಕಾರಣಕ್ಕಾಗಿ ನೋಟ್-7 ಅನ್ನು ಮಾರುಕಟ್ಟೆಯಿಂದ ಸ್ಯಾಮ್‌ಸಂಗ್ ವಾಪಸ್ ಪಡೆದಿದೆ. ಹಾಗಾಗಿ, ಇದೀಗ ಆ್ಯಪಲ್ ಮತ್ತು ಎಲ್‌ಜಿ ಕಂಪನಿಗಳಿಂದ ತನ್ನ ಮಾರುಕಟ್ಟೆಯನ್ನು ಉಳಿಸಿಕೊಳ್ಳಲು ಈ ಕ್ರಮಕ್ಕೆ ಸ್ಯಾಮ್‌ಸಂಗ್ ನಿರ್ಧರಿಸಿದೆ.

ಸ್ಯಾಮ್‌ಸಂಗ್ ಬ್ಯಾಟರಿಯ ಓವರ್ ಹೀಟಿಂಗ್ ಕುರಿತಾಗಿ ಅಮೆರಿಕದಲ್ಲಿ ಬೆಂಕಿ ನಿಗ್ರಹ ಪೆಟ್ಟಿಗೆಗಳು ಮತ್ತು ರಕ್ಷಣಾ ಕವಚಗಳನ್ನು ಗೆಲಾಕ್ಸಿ ನೋಟ್-7 ಬಳಸುವ ಗ್ರಾಹಕರಿಗೆ ಸ್ಯಾಮ್‌ಸಂಗ್ ವಿತರಿಸುತ್ತಿದೆ ಎಂಬಂಥ ಹಾಸ್ಯಾಮಯ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲದೆ, ‘‘ಒಂದು ಕಾಲದಲ್ಲಿ ಹ್ಯಾಂಡ್‌ಸೆಟ್ ಉದ್ಯಮದಲ್ಲಿ ಪ್ರಸಿದ್ಧಿಯಾಗಿದ್ದ ನೋಕಿಯಾ ಮತ್ತು ಬ್ಲಾಕ್‌ಬೇರಿಯಂಥ ಕಂಪನಿಗಳೇ ಮಾರುಕಟ್ಟೆ ಉಳಿಸಿಕೊಳ್ಳಲಾಗಲಿಲ್ಲ,’’ ಎಂಬ ವಿಚಾರವನ್ನು ಫಿಚ್ ರೇಟಿಂಗ್ ಏಜೆನ್ಸಿ ವರದಿ ತಿಳಿಸಿದೆ. ಈ ಎಲ್ಲ ವಿಚಾರಗಳಿಂದ ಎಚ್ಚೆತ್ತ ಗೆಲಾಕ್ಸಿ ನೋಟ್-7 ಅನ್ನು ಸ್ಯಾಮ್‌ಸಂಗ್‌ನ ಇತರೆ ೆನ್‌ನೊಂದಿಗೆ ವರ್ಗಾವಣೆ ಮಾಡಿಕೊಳ್ಳುವವರಿಗೆ ಪ್ರೋತ್ಸಾಹ ಧನ ನೀಡಲು ಮುಂದಾಗಿದೆ. ಆದರೆ, ಗೆಲಾಕ್ಸಿ ನೋಟ್-7 ಹಿಂಪಡೆಯುವಿಕೆಯಿಂದಾಗಿ ಸ್ಯಾಮ್‌ಸಂಗ್‌ಗೆ ಆರ್ಥಿಕ ಅಂಶಗಳ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ಬದಲಿಗೆ ದೀರ್ಘಕಾಲೀನ ಮಾರುಕಟ್ಟೆ ಪೈಪೋಟಿ ಎದುರಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ, ಗೆಲಾಕ್ಸಿ ನೋಟ್-7 ವಿಲತೆ ಪರಿಣಾಮವಾಗಿ ಆರ್ಥಿಕ ಬೆಳವಣಿಗೆಗೆ ಕುಂಠಿತವಾಗಿದ್ದು, ಇದನ್ನು ಸರಿದೂಗಿಸಲು ಹೆಚ್ಚಿನ ಸಮಯಾವಕಾಶದ ಅಗತ್ಯವಿದೆ ಎಂದು ದಕ್ಷಿಣ ಕೊರಿಯಾದ ಕೇಂದ್ರ ಬ್ಯಾಂಕ್ ತಿಳಿಸಿದೆ.