Asianet Suvarna News Asianet Suvarna News

ಮಯಾಂಕ್‌ ಅಗರ್‌ವಾಲ್ ನೇತೃತ್ವದ ಭಾರತ ಎ ದುಲೀಪ್ ಟ್ರೋಫಿ ಚಾಂಪಿಯನ್

ಕನ್ನಡಿಗ ಮಯಾಂಕ್‌ ಅಗರ್‌ವಾಲ್ ನೇತೃತ್ವದ ಭಾರತ 'ಎ' ತಂಡವು ದುಲೀಪ್ ಟ್ರೋಫಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

Mayank Agarwal Led India A Stun Ruturaj Gaikwad Side To Win Duleep Trophy 2024 kvn
Author
First Published Sep 23, 2024, 7:58 AM IST | Last Updated Sep 23, 2024, 7:58 AM IST

ಅನಂತಪುರ: ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾರತ 'ಎ' ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕರ್ನಾಟಕದ ಮಯಾಂಕ್‌ ಅಗರ್‌ವಾಲ್ ನಾಯಕತ್ವದ 'ಎ' ತಂಡ ನಿರ್ಣಾಯಕ ಪಂದ್ಯದಲ್ಲಿ ಭಾನುವಾರ ಭಾರತ 'ಸಿ' ವಿರುದ್ಧ 132 ರನ್‌ಗಳ ಗೆಲುವು ಸಾಧಿಸಿತು. 12 ಅಂಕದೊಂದಿಗೆ ಅಗ್ರಸ್ಥಾನ ಪಡೆದು ಪ್ರಶಸ್ತಿ ತನ್ನದಾಗಿಸಿಕೊಂಡಿತು.

3ನೇ ದಿನದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 270 ರನ್ ಗಳಿಸಿದ್ದ ಎ ತಂಡ ಭಾನುವಾರ 8 ವಿಕೆಟ್‌ಗೆ 286 ರನ್ ಕಲೆಹಾಕಿ ಡಿಕ್ಲೇರ್ ಘೋಷಿಸಿತು. ಗೆಲುವಿಗೆ 350 ರನ್ ಗುರಿ ಪಡೆದ ಋತುರಾಜ್ ಗಾಯಕ್ವಾಡ್ ನಾಯಕತ್ವದ ಸಿ ತಂಡ ಸಾಯ್ ಸುದರ್ಶನ್ (111) ಏಕಾಂಗಿ ಹೋರಾಟದ ಹೊರತಾಗಿಯೂ 217 ರನ್‌ಗೆ ಆಲೌಟಾಯಿತು.

ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕ ಸಿಡಿಸಬಹುದು, ಆದ್ರೆ ಸಚಿನ್ ಅವರ ಈ 5 ದಾಖಲೆ ಮುರಿಯೋದು ಅಸಾಧ್ಯ

ಭಾರತ ಬಿ ವಿರುದ್ಧ ಗೆದ್ದ ಭಾರತ ಡಿ

ಮೊದಲೆರಡು ಪಂದ್ಯ ಸೋತಿದ್ದ ಭಾರತ 'ಡಿ' ತಂಡಕ್ಕೆ ಕೊನೆಯ ಪಂದ್ಯದಲ್ಲಿ ಭಾರತ ಬಿ ತಂಡದ ವಿರುದ್ಧ ಜಯ ಲಭಿಸಿತು. 2ನೇ ಇನ್ನಿಂಗ್ಸ್‌ನಲ್ಲಿ 3ನೇ ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 244 ರನ್ ಕಲೆಹಾಕಿದ್ದ ಶ್ರೇಯಸ್ ಅಯ್ಯರ್ ನಾಯಕತ್ವದ ಡಿ ತಂಡ ಭಾನುವಾರ 305 ರನ್‌ಗೆ ಆಲೌಟಾಯಿತು. ಗೆಲುವಿಗೆ 373 ರನ್ ಗುರಿ ಪಡೆದ ಅಭಿಮನ್ಯು ಈಶ್ವರನ್ ಸಾರಥ್ಯದ ಡಿ ತಂಡ ಕೇವಲ 115 ರನ್‌ಗೆ ಆಲೌಟಾಯಿತು.

ಚೆನ್ನೈ ಟೆಸ್ಟ್‌ ಗೆಲುವಿನ ಬೆನ್ನಲ್ಲೇ ಬಾಂಗ್ಲಾದೇಶ ಎದುರಿನ ಎರಡನೇ ಟೆಸ್ಟ್‌ಗೆ ಭಾರತ ಕ್ರಿಕೆಟ್ ತಂಡ ಪ್ರಕಟ!

ರೋಚಕ ಘಟ್ಟದಲ್ಲಿ ಲಂಕಾ, ಕಿವೀಸ್‌ ಟೆಸ್ಟ್‌: ಇತ್ತಂಡಕ್ಕೂ ಇದೆ ಗೆಲುವಿನ ಅವಕಾಶ

ಗಾಲೆ(ಶ್ರೀಲಂಕಾ): ಇಲ್ಲಿ ನಡೆಯುತ್ತಿರುವ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್‌ ತಂಡಗಳ ನಡುವಿನ ಮೊದಲ ಟೆಸ್ಟ್‌ ಪಂದ್ಯ ನಿರ್ಣಾಯಕ ಘಟ್ಟ ತಲುಪಿದೆ. ಎರಡೂ ತಂಡಗಳು ಗೆಲುವಿಗಾಗಿ ಭಾರಿ ಪೈಪೋಟಿ ನಡೆಸುತ್ತಿವೆ. ಲಂಕಾ ಭಾನುವಾರ ತನ್ನ 2ನೇ ಇನ್ನಿಂಗ್ಸ್‌ನಲ್ಲಿ 309 ರನ್‌ಗೆ ಆಲೌಟಾಯಿತು. ಇದರೊಂದಿಗೆ ಕಿವೀಸ್‌ಗೆ 275 ರನ್‌ ಗುರಿ ಲಭಿಸಿತು. ರಚಿನ್‌ ರವೀಂದ್ರ ಹೋರಾಟದ ಹೊರತಾಗಿಯೂ ತಂಡ 4ನೇ ದಿನದಂತ್ಯಕ್ಕೆ 8 ವಿಕೆಟ್‌ಗೆ 207 ರನ್‌ ಗಳಿಸಿದ್ದು, ಕೊನೆ ದಿನವಾದ ಸೋಮವಾರ ತಂಡಕ್ಕೆ 68 ರನ್‌ ಅಗತ್ಯವಿದೆ. ಲಂಕಾಕ್ಕೆ 2 ವಿಕೆಟ್‌ ಬೇಕಿದೆ. ರಚಿನ್‌ 91 ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.
 

Latest Videos
Follow Us:
Download App:
  • android
  • ios