ಇನ್ಮುಂದೆ ನಿಮಗೆ ಸಿಗಲ್ಲ ರಾಯಲ್ ಎನ್‌ಫೀಲ್ಡ್‌ನ ಈ ಬೈಕ್!

Royal Enfield Continental GT 535 To Be Discontinued Globally
Highlights

ರಾಯಲ್ ಎನ್‌ಫೀಲ್ಡ ಬೈಕ್ ಅಂದರೆ ಎಲ್ಲರಿಗೂ ಇಷ್ಟ. ಇದೀಗ ರಾಯಲ್ ಎನ್‌ಫೀಲ್ಡ್ ತನ್ನ ಜನಪ್ರೀಯ ಬೈಕ್ ಕಾಂಟಿನೆಂಟಲ್ ಜಿಟಿ535 ತಯಾರಿಕೆಯನ್ನ ನಿಲ್ಲಿಸಿದೆ. ಅಷ್ಟಕ್ಕೂ ಎನ್‌ಫೀಲ್ಡ್ ಈ ನಿರ್ಧಾರ ಕೈಗೊಂಡಿದ್ದೇಕೆ? ಇಲ್ಲಿದೆ ವಿವರ.

ಬೆಂಗಳೂರು(ಜೂ.30): ಭಾರತದಲ್ಲೀಗ ರಾಯಲ್ ಎನ್‌ಫೀಲ್ಡ್ ಬೈಕ್ ಯುಗ. ಎಲ್ಲಿ ನೋಡಿದರೂ ರಾಯಲಲ್ ಎನ್‌ಫೀಲ್ಡ್ ಬೈಕ್‌ಗಳು ರಾರಾಜಿಸುತ್ತಿದೆ. ನಗರಳಲ್ಲಂತೂ ಎನ್‌ಫೀಲ್ಡ್‌ಗಳದ್ದೇ ಕಾರು ಬಾರು. ಆದರೆ ರಾಯಲ್ ಎನ್‌ಫೀಲ್ಡ್ ತನ್ನ ಜನಪ್ರೀಯ ಬೈಕ್ ಕಾಂಟಿನೆಂಟಲ್ ಜಿಟಿ535 ನಿರ್ಮಾಣವನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. 

2013ರಲ್ಲಿ ಮಾರುಕಟ್ಟೆಗೆ ಕಾಲಿಟ್ಟ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ535 ಇದೀಗ ಸಂಪೂರ್ಣವಾಗಿ ತಯಾರಿಕೆಯನ್ನ ನಿಲ್ಲಿಸಿದೆ. ರೆಟ್ರೋ ಲುಕ್, ಬ್ರಿಟೀಷ್ ಹಳೇ ಮೋಟರ್‌ಸೈಕಲ್ ವಿನ್ಯಾಸದಲ್ಲಿರುವ ಈ ಬೈಕ್ ಬಾರಿ ಜನಪ್ರೀಯವಾಗಿತ್ತು.

ಹರ್ಲೇ ಡೇವಿಡನ್ಸನ್ 750 ಬೈಕ್‌ಗೆ ಬಾರಿ ಪೈಪೋಟಿ ನೀಡಿದ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ535 ಇನ್ಮುಂದೆ ಸಿಗಲ್ಲ. ಇದರ ಬದಲು ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಅತ್ಯಾಧುನಿಕ, ಹೊಸ ತಂತ್ರಜ್ಞಾನ, ಹಾಗೂ ಮೋಸ್ಟ್ ಪವರ್‌ಫುಲ್ ಇಂಜಿನ್ ಹೊಂದಿರು ನೂತನ ಕಾಂಟಿನೆಂಟಲ್ ಜಿಟಿ 650 ಎಬಿಎಸ್ ಹೊಂದಿದೆ. ಹೊಸ ವಿನ್ಯಾಸ ಹಾಗೂ ಆಕರ್ಷವಾಗಿರುವ ಕಾಂಟಿನೆಂಟಲ್ ಜಿಟಿ 650 47ಬಿಹೆಚ್‌ಪಿ ಪವರ್ ಹಾಗೂ 52 ಎನ್‌ಎಮ್ ಹೊಂದಿದೆ. ಇದರ ಬೆಲೆ 3 ರಿಂದ 3.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

loader