ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ನಿಮಗೆ ಯಾವ ಬೈಕ್ ಹೆಚ್ಚು ಸೂಕ್ತ?

Royal Enfield Bikes Which One Suits You Best
Highlights

ರಾಯಲ್ ಎನ್‌ಫೀಲ್ಡ್ ಬೈಕ್‌ಗಳಲ್ಲಿ ಹಲವು ವಿಧಗಳಿವೆ. ಆದರೆ ನಿಮಗೆ ಸೂಕ್ತವಾದ ಬೈಕ್  ಯಾವುದು, ಬೈಕ್ ಖರೀಧಿಸುವಾಗ ನೀವು ಗಮನಿಸಬೇಕಾದ ಅಂಶ ಏನು? ಇಲ್ಲಿದೆ ಕೆಲವು ಸೂಚನೆಗಳು.

ಬೆಂಗಳೂರು(ಜೂನ್.13): ರಾಯಲ್ ಎನ್‌ಫೀಲ್ಡ್ ಬೈಕ್‌ನ್ನ ನೀವು ಪ್ರೀತಿಸಬಹುದು, ಅಥವಾ ದ್ವೇಷಿಸಬಹುದು. ಆದರೆ ನಿರ್ಲಕ್ಷಿಸಲು ಸಾಧ್ಯವಿಲ್ಲ. ಯುವಕರಿಂದ ಹಿಡಿದು ಎಲ್ಲರಿಗೂ ರಾಯಲ್ ಎನ್‌ಫೀಲ್ಡ್ ಬೈಕೇ ಬೇಕು. ರಾಯಲ್ ಎನ್‌ಫೀಲ್ಡ್ ಬೈಕ್ ಆಯ್ಕೆ ಮಾಡಿಕೊಳ್ಳುವಾಗಿ ನಿಮಗೆ ಸೂಕ್ತವಾಗೋ, ನಿಮ್ಮ ಪರ್ಸನಾಲಿಟಿಗೆ ಹೊಂದಿಕೊಳ್ಳೋ ಬೈಕನ್ನ ಆರಿಸಿಕೊಳ್ಳಿ. 

ಸ್ಟಾಂಡರ್ಡ್ ಸ್ಟ್ರೀಟ್ :


ರಾಯಲ್ ಎನ್‌ಫೀಲ್ಡ್ ಸ್ಟಾಂಡರ್ಸ್ ಬೈಕ್ ಇದುವರೆಗೂ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ಮಾಡಿಲ್ಲ. ಹಳೇ ರಾಯಲ್ ಎನ್‌ಫೀಲ್ಡ್ ರೈಡರ್‌ಗಳು ಇದೇ ಸ್ಟಾಂಡರ್ಸ್ ಬೈಕನ್ನೇ ಇಷ್ಟಪಡುತ್ತಾರೆ. ಇದರಲ್ಲಿ 350 ಹಾಗೂ 500 ಎರಡು ವಿಧಗಳಿವೆ. ಬುಲೆಟ್ ಅನುಭವ ನಿಮ್ಮದಾಗಿಸಿಕೊಳ್ಳಲು ಸ್ಟಾಂಡರ್ಡ್ ನಿಮಗೆ ಉತ್ತಮ ಆಯ್ಕೆ.

ಕ್ಲಾಸಿಕ್:


ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಹಾಗೂ 500 ಬಹುತೇಕ ಎಲ್ಲರಿಗೂ ಹೊಂದಿಕೊಳ್ಳುತ್ತೆ. ಹೆಚ್ಚು ಆಕರ್ಷಕವಾಗಿರೋ ಈ ಬೈಕ್ ನೀವು ತೆಳ್ಳಗಿದ್ದರೂ, ದಪ್ಪಗಿದ್ದರೂ ನಿಮಗೆ ಹೊಂದಿಕೊಳ್ಳುತ್ತೆ. ಹೆಚ್ಚಾಗಿ ಯುವಕರು, ನಗರ ನಿವಾಸಿಗಳಲ್ಲಿ ನಾವು ರಾಯಲ್ ಎನ್‌ಫೀಲ್ಡ್ ಕಾಣಬಹುದು. ಸಿಟಿ ಲೈಫ್‌ನಲ್ಲೂ ಕ್ಲಾಸಿಕ್ ಸಲೀಸಾಗಿ ರೈಡ್ ಮಾಡಬಹುದು.  ಇದರಲ್ಲಿ ಡೆಸಾರ್ಟ್ ಸ್ಟ್ರೋಮ್, ಬ್ಯಾಟಲ್ ಗ್ರೀನ್ ಸೇರಿದಂತೆ ಹಲವು ವಿಧಗಳಲ್ಲಿ ಲಭ್ಯವಿದೆ.

ರೆಟ್ರೋ ಸ್ಟ್ರೀಟ್ :


ಕ್ಲಾಸಿಕ್ ಬೈಕ್‌ಗಳಿಗೆ ಹೋಲುವ ರೆಟ್ರೋ ಸ್ಪೆಷಲ್ ಎಡಿಶನ್ ಬೈಕ್‌ಗಳು. ಸದ್ಯ ರಾಯಲ್ ಎನ್‌ಫೀಲ್ಡ್ ಪೆಗಾಸಸ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ವಿಂಟೇಜ್ ಶೈಲಿಯಲ್ಲಿರೋ ಈ ಬೈಕ್ ನಿಮ್ಮನ್ನ ರೆಟ್ರೋ ಸ್ಟೈಲ್‌ಗೆ ಕೊಂಡೊಯ್ಯಲಿದೆ. ಪೆಗಾಸಸ್ ಮಾಡೆಲ್ ಎರಡನೇ ಮಹಾಯುದ್ಧದ ವೇಳೆ ಸೈನಿಕರು ಬಳಸಿದ ಬೈಕ್‌ಗೆ ಹೊಸ ಟಚ್ ನೀಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. 

ಕ್ರೂಸರ್:


ನೀವು ಕ್ರೂಸರ್ ಶೈಲಿಯ ಬೈಕ್‌ಗಳನ್ನ ಇಷ್ಟಪಡೋದಾದರೆ, ನಿಮಗೆ ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ ಸೂಕ್ತ. ಫ್ಯಾಮಿಲಿ ಆಯ್ಕೆ ಮಾಡಿಕೊಳ್ಳೋ ಬೈಕ್‌ಗಳಲ್ಲಿ ಥಂಡರ್‌ಬರ್ಡ್ ಮುಂಚೂಣಿಯಲ್ಲಿದೆ. ವಿಶೇಷ ಅಂದರೆ 20 ಲೀಟರ್ ಇಂಧನ ಟ್ಯಾಂಕ್, ಪ್ರೊಜೆಕ್ಟರ್ ಹೆಡ್‌ಲ್ಯಾಮ್ ಹಾಗೂ ಎಲ್ಇಡಿ ಡಿಆರ್‌ಎಲ್ ಹೊಂದಿದೆ. 

ಹಿಮಾಲಯನ್:


ಅಂಡ್ವೆಂಚರ್ ರೈಡರ್‌ಗಳಿಗೆ ಹೇಳಿ ಮಾಡಿಸಿದ ಬೈಕ್ ಹಿಮಾಲಯನ್. ಆಧುನಿಕ ಇಂಜಿನ್ ಹಾಗೂ ಟೆಕ್ನಾಲಜಿಗಳನ್ನ ಹೊಂದಿರುವ ಹಿಮಾಲಯನ್ 411 ಸಿಸಿ ಇಂಜಿನ್ ಹೊಂದಿದೆ. ಹಿಮಾಲಯನ್ ಬೈಕ್‌ನ್ನ ವಿಶೇಷವಾಗಿ ಆಫ್ ರೋಡ್‌ಗಾಗಿ ವಿನ್ಯಾಸಗೊಳಿಸಿಸಲಾಗಿದೆ.

 

loader