Asianet Suvarna News Asianet Suvarna News

ಜಿಯೋ ಫೋನ್'ಗೆ ಆರಂಭದಲ್ಲೇ ವಿಘ್ನ

ಕಾಶ್ಮೀರದಲ್ಲಿ ಜಿಯೋ ಫೋನ್ ಖರೀದಿಸಿದ ಗ್ರಾಹಕನೊಬ್ಬ ಚಾರ್ಜಿಂಗ್ ಮಾಡುತ್ತಿರುವ ವೇಳೆ ಸ್ಫೋಟವುಂಟಾಗಿದೆ.

Reliance JioPhone explodes while charging back melted but battery intact

ನವದೆಹಲಿ(ಅ.23): ಕಡಿಮೆ ಬೆಲೆಯಲ್ಲಿ ಹಲವು ಸೌಲಭ್ಯಗಳನ್ನು ಒಳಗೊಂಡ ಅದ್ದೂರಿಯಾಗಿ ಉದ್ಘಾಟನೆಗೊಂಡ ಜಿಯೋಫೋನ್'ಗೆ ಆರಂಭದಲ್ಲೇ ವಿಘ್ನ ಉಂಟಾಗಿದೆ.

ಕಂಪನಿಯೂ ದೀಪಾವಳಿ ಹಬ್ಬಕ್ಕಾಗಿ ಪೂರ್ವ ಮುಂಗಡ ಮಾಡಿಕೊಂಡವರಿಗಾಗಿ ವಿತರಣೆ ಆರಂಭಿಸಿದೆ. ಕಾಶ್ಮೀರದಲ್ಲಿ ಜಿಯೋ ಫೋನ್ ಖರೀದಿಸಿದ ಗ್ರಾಹಕನೊಬ್ಬ ಚಾರ್ಜಿಂಗ್ ಮಾಡುತ್ತಿರುವ ವೇಳೆ ಸ್ಫೋಟವುಂಟಾಗಿದೆ. ಸ್ಫೋಟದಿಂದಾಗಿ ಮೊಬೈಲ್ ಪೂರ್ಣ ಸುಟ್ಟು ಹೋಗಿದೆ.

ಆದರೆ ಜಿಯೋ ಸಂಸ್ಥೆಯ ಪ್ರಕಾರ ಚಾರ್ಜಿಂಗ್ ಮಾಡುವ ವೇಳೆ ಆಗಿರುವುದಿಲ್ಲ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಲಾಗಿದೆ. ಮೊಬೈಲ್ ಬ್ಯಾಟರಿಯ ಶಾಖದ ಮೂಲವು ಬೇರೆ ಯಾವುದೋ ಅಥವಾ ಬಾಹ್ಯವಾಗಿ ಪ್ರಚೋದಿತವಾಗಿರುವ ಸಾಧ್ಯತೆಯಿದೆ' ಎಂದು ತಿಳಿಸಿದೆ.

ಜಿಯೋ ಫೋನನ್ನು ಉನ್ನತ ಮಟ್ಟದ ತಾಂತ್ರಿಕತೆಯಿಂದ ವಿನ್ಯಾಸ ಪಡಿಸಿ ತಯಾರಿಸಲಾಗಿದೆ. ಗ್ರಾಹಕರಿಗೆ ವಿತರಿಸಲಾಗಿರುವ ಪ್ರತಿಯೊಂದು ಫೋನನ್ನು ಪರಿಷ್ಕರಿಸಿ ನೀಡಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಮೊಬೈಲ್ ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡಿರುವ ಸಾಧ್ಯತೆಯಿದ್ದು, ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

Reliance JioPhone explodes while charging back melted but battery intact

Latest Videos
Follow Us:
Download App:
  • android
  • ios