ಜಿಯೋಫೋನ್ 2 ಮಾರುಕಟ್ಟೆಗೆ

https://static.asianetnews.com/images/authors/daab8673-7845-5682-b0e2-baaeb48a261b.jpg
First Published 23, Aug 2018, 7:22 PM IST
Reliance JioPhone 2  Mobile Released
Highlights

  • ರಿಲಾಯನ್ಸ್ ನಿಂದ ಮತ್ತೊಂದು  ಕೈಗೆಟಗುವ ದರದ ಫೋನ್
  • ಸೋಶಿಯಲ್ ಮೀಡಿಯಾ ಸ್ನೇಹಿ ಫೋನ್; ಫೇಸ್ಬುಕ್, ಯೂಟ್ಯೂಬ್ ಮತ್ತು ವಾಟ್ಸಪ್ ಕೂಡಾ ಲಭ್ಯ 

ದೇಶದ ಇಂಟರ್‌ನೆಟ್ ಕ್ಷೇತ್ರದಲ್ಲಿ ದೊಡ್ಡ ಅಲೆ ಎಬ್ಬಿಸಿರುವ ಜಿಯೋ ಇದೀಗ ಮತ್ತೊಂದು ಸಿಹಿ ಸುದ್ದಿ ಹೊತ್ತು ತಂದಿದೆ.

ಈ ಹಿಂದೆ ಅಗ್ಗದ ದರಕ್ಕೆ ಮೊಬೈಲ್ ನೀಡಿದ್ದ ಜಿಯೋ ಈಗ ‘ಜಿಯೋಫೋನ್‌2’ ಹೆಸರಿನಲ್ಲಿ ಮತ್ತೊಂದು ಕಡಿಮೆ ಬೆಲೆಯ ಮೊಬೈಲ್ ನೀಡಲು ಮುಂದೆ ಬಂದಿದೆ. 

ಆಗಸ್ಟ್ 16ರಿಂದ 2999 ರು. ಬೆಲೆಯ ಜಿಯೋಫೋನ್ 2 ಬುಕ್ಕಿಂಗ್ ಆರಂಭವಾಗಿದ್ದು, ಜಿಯೊ ಅಧಿಕೃತ ವೆಬ್‌ಸೈಟ್ (ಜಿಯೊ ಡಾಟ್ ಕಾಮ್) ನಲ್ಲಿ ಮೊಬೈಲ್ ಲಭ್ಯ.

ಫೇಸ್‌ಬುಕ್, ಯೂಟ್ಯೂಬ್ ಸೇವೆಗಳು ಈ ಮೊಬೈಲ್‌ನಲ್ಲಿ ಸಿಗಲಿದ್ದು, ಸದ್ಯದಲ್ಲಿಯೇ ವಾಟ್ಸಪ್ ಸೇವೆಯೂ ಕೂಡ ದೊರೆಯಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಜುಲೈನಲ್ಲಿ ನಡೆದ 41ನೇ ವಾರ್ಷಿಕ ಮಹಾಸಭೆಯಲ್ಲಿ ರಿಲಯನ್ಸ್ ಮುಖ್ಯಸ್ಥ  ಮುಕೇಶ್ ಅಂಬಾನಿ,  ಜಿಯೋಗಿಗಾಫೈಬರ್ ಸೇವೆ ಹಾಗೂ ಜಿಯೋ ಫೋನ್ 2 ಬಿಡುಗಡೆ ಬಗ್ಗೆ ಪ್ರಕಟಿಸಿದ್ದರು.

ಇದನ್ನೂ ಓದಿ: ಜಿಯೋಫೋನ್ 2 ಬಿಡುಗಡೆ; ನೂತನ ಫೋನ್‌ನಲ್ಲಿ ಏನೆಲ್ಲಾ ಫೀಚರ್ಸ್ ಇದೆ?

loader