ಈ ಆಫರ್'ಗಳು ನ.10ರಿಂದ ಒಳಗೊಂಡು ನ.25ರವರೆಗೆ ಲಭ್ಯವಿರಲಿದೆ.

ಮುಂಬೈ(ನ.11): ಟೆಲಿಕಾಂ'ನ ದೈತ್ಯ ಸಂಸ್ಥೆ ಜಿಯೋಪ್ರೈಮ್ ಗ್ರಾಹಕರಿಗಾಗಿ 399 ರೂ.ಗಳು ಹಾಗೂ ಮೇಲ್ಪಟ್ಟ ರಿಚಾರ್ಜ್'ಗೆ 2599 ರೂ. ತನಕ ಟ್ರಿಪಲ್ ಕ್ಯಾಶ್ ಬ್ಯಾಕ್ ಆಫರ್ ಪ್ರಕಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರತಿ ರಿಚಾರ್ಜ್ ಮೇಲೆ 300 ರೂ. ತನಕ ಅಮೆಜಾನ್,ಆಕ್ಸಿಸ್'ಪೇ, ಫ್ರೀಚಾರ್ಜ್, ಮೊಬಿಕ್ವಿಕ್, ಪೇಟಿಎಂ ಮತ್ತು ಫೋನ್'ಪೇ ನಂತಹ ಜಿಯೋದ ಸಹಭಾಗಿ ವ್ಯಾಲೆಟ್'ಗಳಿಂದ ದೊರೆಯುತ್ತದೆ. ಈ ವೋಚರ್'ಗಳಲ್ಲದೆ ಅಜಿಯೋ, ಯಾತ್ರಾ ಡಾಟ್ ಕಾಂ ಮತ್ತು ರಿಲಯನ್ಸ್ ಟ್ರೆಂಡ್ಸ್ ಡಾಟ್'ನಂತಹ ವ್ಯಾಲೆಟ್'ಗಳಿಂದ ಕೂಡ ವೋಚರ್'ಗಳು ದೊರೆಯುತ್ತವೆ. ajio.comಕನಿಷ್ಠ 1500 ರೂ. ಖರೀದಿ ನಡೆಸಿದರೆ ಗ್ರಾಹಕರಿಗೆ 399 ರೂ. ಕಡಿತ ಹಾಗೂ yatra.comಮೂಲಕ ಬುಕ್ ಮಾಡುವ ದೇಶೀಯ ಆಲ್ರೌಂಡ್ ಟ್ರಿಪ್ ಟಿಕೆಟ್'ಗಳ ಮೇಲೆ 1000 ರೂ. ರಿಯಾಯ್ತಿ ಮತ್ತು ಒನ್ ವೇ ಟಿಕೆಟ್ಗಳ ಮೇಲೆ 500 ರೂ. ರಿಯಾಯ್ತಿಯನ್ನು ಜಿಯೋ ಪ್ರೈಮ್ ಗ್ರಾಹಕರು ಪಡೆಯಲಿದ್ದಾರೆ.

ಅಂತಿಮವಾಗಿ reliancetrends.comನಲ್ಲಿ ಶಾಪಿಂಗ್ ಮಾಡುವಾಗ ಜಿಯೋ ಪ್ರೈಮ್ ಗ್ರಾಹಕರು 1999 ರೂ. ಮತ್ತು ಮೇಲಿನ ಖರೀದಿ ಮೇಲೆ 500 ರೂ. ತಕ್ಷಣದ ರಿಯಾಯ್ತಿ ಪಡೆಯುತ್ತಾರೆ. ಈ ಆಫರ್'ಗಳು ನ.10ರಿಂದ ಒಳಗೊಂಡು ನ.25ರವರೆಗೆ ಲಭ್ಯವಿರಲಿದೆ.