ಜಿಯೋದ ಸ್ಮಾರ್ಟ್'ಫೋನ್'ಗಳು ಮಾರುಕಟ್ಟೆಯಲ್ಲಿ 3,500-4,00- ರೂಪಾಯಿಗೆ ಲಭ್ಯವಿದೆ. ಇವುಗಳಲ್ಲಿರುವ ಬಹುತೇಕ ಸೇವೆಗಳನ್ನು ಕಡಿಮೆ ಬೆಲೆಯ ಫೀಚರ್ ಫೋನ್'ಗಳಲ್ಲೂ ಅಳವಡಿಸಲಾಗಿದೆಯಂತೆ.

ನವದೆಹಲಿ(ಜ. 13): ರಿಲಾಯನ್ಸ್ ಜಿಯೋ 4G VoLTE ಸಪೋರ್ಟ್ ಇರುವ ಫೀಚರ್ ಫೋನ್'ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಅಣಿಯಾಗಿದೆ ಎಂಬ ಸುದ್ದಿ ಕೇಳಿಬಂದಿದೆ. 999 ರೂ.ನಿಂದ 1,500 ರೂಪಾಯಿ ದರವಿರುವ ಈ ಫೋನ್'ಗಳಿಗೆ ಉಚಿತ ಧ್ವನಿ ಕರೆಗಳು ಮತ್ತಿತರ ಸೇವೆಗಳನ್ನು ನೀಡುವ ಸಾಧ್ಯತೆ ಇದೆ. ಇಂಥ ಎರಡು ಅಥವಾ ಹೆಚ್ಚು ಮಾದರಿಯ ಫೀಚರ್ ಫೋನ್'ಗಳನ್ನು ಹೊರತರುವುದು ಜಿಯೋದ ಯೋಜನೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಿಯೋ ಚ್ಯಾಟ್, ಲೈವ್ ಟಿವಿ, ವಿಡಿಯೋ ಆನ್'ಡಿಮ್ಯಾಂಡ್, ಜಿಯೋ ಮೊನೀ ಮೊದಲಾದ ಸೇವೆಗಳು ಈ ಫೀಚರ್ ಫೋನ್'ನಲ್ಲಿರಲಿವೆ. ಫ್ರಂಟ್ ಮತ್ತು ಬ್ಯಾಕ್ ಕ್ಯಾಮೆರಾಗಳೂ ಇರಲಿವೆ.

ಸದ್ಯ, ಜಿಯೋದ ಸ್ಮಾರ್ಟ್'ಫೋನ್'ಗಳು ಮಾರುಕಟ್ಟೆಯಲ್ಲಿ 3,500-4,00- ರೂಪಾಯಿಗೆ ಲಭ್ಯವಿದೆ. ಇವುಗಳಲ್ಲಿರುವ ಬಹುತೇಕ ಸೇವೆಗಳನ್ನು ಕಡಿಮೆ ಬೆಲೆಯ ಫೀಚರ್ ಫೋನ್'ಗಳಲ್ಲೂ ಅಳವಡಿಸಲಾಗಿದೆಯಂತೆ. ಕೆಳ ಮಧ್ಯಮ ವರ್ಗದ ಜನರಿಗೆ ಜಿಯೋವನ್ನು ತಲುಪಿಸುವ ಉದ್ದೇಶದಿಂದ ಜಿಯೋ ಫೀಚರ್ ಫೋನ್'ಗಳನ್ನು ಬಿಡುಗಡೆ ಮಾಡುತ್ತಿದೆ.